November 9, 2024

Vokkuta News

kannada news portal

ಮು.ಐಕ್ಯತಾ ವೇದಿಕೆಯಿಂದ ಸಂತ್ರಸ್ತ ವಿದ್ಯಾರ್ಥಿ ಭೇಟಿ.

ಮಂಗಳೂರು: ಇತ್ತೀಚೆಗೆ ಶೈಕ್ಷಣಿಕ ಸಂಸ್ಥೆಯಿಂದ ಅಪಹರಿಸಿ ಹಲ್ಲೆಗೊಳಗಾಗಿದ್ದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲೋಶಿಯಸ್ ಕಾಲೇಜ್ ಪದವಿ ಶಿಕ್ಷಣ ಉಪ್ಪಳದ ವಿದ್ಯಾರ್ಥಿ ಯನ್ನು ಇಂದು ಕುದ್ರೋಳಿ ಮುಸ್ಲಿಮ್ ಐಕ್ಯತಾ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ಸಂತ್ರಸ್ತ ವಿದ್ಯಾರ್ಥಿಯನ್ನು ಇನ್ನೊಂದು ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ದ್ವೇಷ ಸಾಧಿಸಿ ಅಪಹರಿಸಿ ಹಲ್ಲೆಗೈದಿದ್ದರು.

ಈ‌ ಸಂದರ್ಭದಲ್ಲಿ ಮುಸ್ಲಿಮ್ ಐಕ್ಯತಾ ವೇದಿಕೆ ಅಧ್ಯಕ್ಷ ರಾದ ಮಹಮ್ಮದ್ ಯಾಸೀನ್ ಕುದ್ರೋಳಿ , ಪ್ರಧಾನ ಕಾರ್ಯದರ್ಶಿ ಹಾಜಿ‌ ಬಿ. ಅಬೂಬಕ್ಕರ್ ,ಕೋಶಾಧಿಕಾರಿ ಮಕ್ಬೂಲ್ ಜಾಮಿಅ, ಸಂಚಾಲಕರಾದ ಎಂ ಅಝೀಝ್ ಕುದ್ರೋಳಿ ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು ಉಪಸ್ಥಿತರಿದ್ದರು.