December 27, 2025

Vokkuta News

kannada news portal

ಬೆಂ.ಕೋಗಿಲು ಗ್ರಾಮ, ಕ.ರಾಜ್ಯ ಸರಕಾರದ ಬಲವಂತದ ತೆರವು, ಸ್ಪಷ್ಟ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ: ಪುನರ್ವಸತಿ ಅನಿವಾರ್ಯ.

ಬೆಂಗಳೂರು: ಬೃಹತ್ ಬೆಂಗಳೂರು ನಗರ ಪಾಲಿಕೆ ಇತ್ತೀಚೆಗೆ ಬೆಂಗಳೂರು ಹೊರವಲಯದ ಕೋಗಿಲು ಗ್ರಾಮದ ತ್ಯಾಜ್ಯ ಸಂಸ್ಕರಣ ಮೀಸಲು ಬಡಾವಣೆಯನ್ನು ತೆರವು ಗೊಳಿಸುವ ಧಾವಂತದಲ್ಲಿ , ಅಲ್ಲಿ ಹಲವಾರು ವರ್ಷದಿಂದ ವಸತಿ ಹೊಂದಿದ್ದ ಸುಮಾರು ಮುನ್ನೂರು ಕುಟುಂಬಗಳನ್ನು ರಾತ್ರಿ ಬೆಳಗಾಗುವ ಹೊತ್ತಿಗೆ ಬುಲ್ಡೋಸ್ ಉಪಯೋಗಿಸಿ ತೆರವು ಗೊಳಿಸಿದ್ದಾರೆ. ಯಾವುದೇ ಪೂರ್ವ ನೋಟೀಸು ನೀಡಲಿಲ್ಲ.

ವಾಸ್ತವ್ಯವಿದ್ದ  ಅಷ್ಟೂ ವಾಸಿಗಳನ್ನು ಮಕ್ಕಳು ಹಿರಿಯರು, ರೋಗಿಗಳು ಎನ್ನದೇ ಅವರ ಮನೆಗಳನ್ನು ನೆಲಸಮ ಗೊಳಿಸಿದ್ದಾರೆ. ನಿವಾಸಿಗಳು ತಮ್ಮ ಮೂಲ ದಾಖಲೆಗಳನ್ನು ಹೊಂದುವ ಅವಕಾಶ ಕೂಡ ನೀಡಲಿಲ್ಲ. ವಾಸ್ತವ್ಯಕ್ಕೆ ಹೊಂದಿದ ದಾಖಲೆ ಇದ್ದರೂ ಕೂಡ ಅವರ ವಾದವನ್ನು ಆಲಿಸುವ ಅವಕಾಶ ನೀಡಲಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟು ಬುಲ್ಡೋಜರ್ ಬಳಕೆಮಾಡಿ ವಾಸ್ತವ್ಯ ತೆರವು ಗೊಳಿಸಬಾರದ ಬಗ್ಗೆ ಸ್ಪಷ್ಟ ನಿರ್ದೇಶನ ರಾಜ್ಯಗಳಿಗೆ ನೀಡಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ ಸರಕಾರ ತಾನು ಸಾಮಾಜಿಕ ನ್ಯಾಯಕ್ಕೆ ಬದ್ಧ ಎಂದು ಹೇಳಿ ಬಡವರ ನಿರ್ಗತಿಕರ ಅದರಲ್ಲೂ ಅಲ್ಪ ಸಂಖ್ಯಾತ ,ದಲಿತ ವರ್ಗದ ಜೀವಿತ ಹಕ್ಕನ್ನು ಸೂರ್ಯನ ಬೆಳಕಿನ ಎದುರಲ್ಲೇ ಕಸಿದು ಕೊಂಡಿದ್ದಾರೆ. ಸಿದ್ದ ರಾಮಯ್ಯ. ಸರಕಾರ ಒಂದು ಜವಾಬ್ದಾರಿಯುತ ಸರಕಾರ ಎಂದು ಬಿಂಬಿಸಿ ಇಂದು ಜೀವಿತ ಹಕ್ಕು ಉಲ್ಲಂಘನೆ ವಿಷಯದಲ್ಲಿ ನಗ್ನ ಆಗಿದೆ!. ತೆರವು ಕಾರ್ಯದ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತರು,ಪಿಯುಸಿಎಲ್ ಕರ್ನಾಟಕ ನಿಯೋಗ, ಮಾಧ್ಯಮ, ಪ್ರಮುಖ ಸಮಾಜಿಕ ವ್ಯಕ್ತಿಗಳು ಖಂಡಿಸಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ನಾಯಕರಾದ ಗ್ರಾಂಡ್ ಮುಫ್ತಿ ಏ. ಪೀ.ಅಬೂಬಕ್ಕರ್ ಮುಸ್ಲಿಯಾರ್, ಕೇರಳ ಮುಖ್ಯಮಂತ್ರಿ ಪೀನರಾಯ್ ವಿಜಯನ್ ರವರು ಸಿದ್ದರಾಮ್ಮಯ ಸರಕಾರದ ನಿಲುವು ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತರಿಗೆ ಯೋಜಿತ ಮತ್ತು ವ್ಯವಸ್ತಿತ ಪೂರ್ಣ ಪ್ರಮಾಣದ ಪುನರ್ವಸತಿ ನೀಡಬೇಕೆಂದು ಕರ್ನಾಟಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಬೆಳವಣಿಗೆಯ ಪರಿಣಾಮಗಳನ್ನು ಅರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರ್ವಸತಿ ಪೂರೈಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಪುನರ್ವಸತಿ  ಕಾರ್ಯ ಜವಾಬ್ದಾರಿ ಮತ್ತು ಭದ್ದತೆಯಿಂದ ಅನುಷ್ಠಾನ ಗೊಳ್ಳಬೇಕಿದೆ. ರಾಜ್ಯದ ಅಲ್ಪ ಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ತಮಗೆ ಸಂಪೂರ್ಣ ಸಾಮಾಜಿಕ ರಕ್ಷಣೆ ನೀಡುವ ಭರವಸೆಯ ಅಡಿಯಲ್ಲಿ ಕಳೆದ ಚುನಾವಣೆಯಲ್ಲಿ ಅಗಾಧವಾಗಿ ಮತ ಚಲಾಯಿಸಿದೆ. ಈ ಭರವಸೆ ಹುಸಿಯಾದರೆ ಮುಂದಿನ ಚುನಾವಣೆಯ ಫಲಿತಾಂಶ ವ್ಯತ್ಯಯ ಆಗುವ ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲ.

ಸಮಾಜಿಕ ಜಾಲ ತಾಣಗಳನ್ನೂ ತನ್ನ ರಕ್ಷಣೆಗೆ ಬಳಸುವ ವ್ಯವಸ್ಥೆಗೆ ಇಂದಿನ ಜನವ್ಯವಸ್ಥೆ ತಲುಪುತ್ತಿದೆ. ಝೆನ್ ಜನರೇಶನ್ ನಿರ್ಧಾರದ ಫಲಗಳನ್ನು ನಾವು ಇಂದು ವಿವಿಧ ರಂಗಗಳಲ್ಲಿ ಕಾಣುತ್ತಿದ್ದೇವೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳನ್ನು ಈ ವ್ಯವಸ್ಥೆ ನಿರ್ಧರಿಸುವ ಮಟ್ಟಕ್ಕೆ ತಲುಪಿದೆ.

ಬಲವಂತದ ತೆರವು ಗೊಳಿಸುವಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅದರದ್ದೇ ಆದ ಗೌರವ ಇರುವುದರಿಂದ ಇದು ಸ್ಪಷ್ಟ ಜಾಗತಿಕ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಾನೂನು ಬಲವಂತದ ಹೊರಹಾಕುವಿಕೆಯನ್ನು ಸಾಕಷ್ಟು ವಸತಿ ಪಡೆಯುವ ಮಾನವ ಹಕ್ಕಿನ ಸಂಪೂರ್ಣ ಉಲ್ಲಂಘನೆ ಎಂದು ಪರಿಗಣಿಸುತ್ತದೆ, ಇದನ್ನು ಹಲವಾರು ಅಂತರರಾಷ್ಟ್ರೀಯ ದಾಖಲೆಗಳಲ್ಲಿ ಪ್ರತಿಪಾದಿಸಲಾಗಿದೆ ಮತ್ತು ಎಲ್ಲಾ ವ್ಯಕ್ತಿಗಳಿಗೆ ಅವರ ಔಪಚಾರಿಕ ಅಧಿಕಾರಾವಧಿಯ ಸ್ಥಿತಿಯನ್ನು ಲೆಕ್ಕಿಸದೆ ಅನ್ವಯಿಸುವ ನಿರ್ದಿಷ್ಟ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ.”

“ಬಲವಂತದ ಹೊರಹಾಕುವಿಕೆಯು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ, ಇದರಲ್ಲಿ ಸಾಕಷ್ಟು ವಸತಿ, ಆಹಾರ, ನೀರು, ಆರೋಗ್ಯ, ಶಿಕ್ಷಣ, ಕೆಲಸ, ವ್ಯಕ್ತಿಯ ಭದ್ರತೆ, ಕ್ರೂರ, ಅಮಾನವೀಯ ಮತ್ತು ಅವಮಾನಕರ ವರ್ತನೆಯಿಂದ ಸ್ವಾತಂತ್ರ್ಯ ಮತ್ತು ಚಲನೆಯ ಸ್ವಾತಂತ್ರ್ಯ ಸೇರಿವೆ.”

ಬಲವಂತದ ಹೊರಹಾಕುವಿಕೆಯನ್ನು ವಿಶಾಲವಾಗಿ ವ್ಯಕ್ತಿಗಳು, ಕುಟುಂಬಗಳು ಮತ್ತು/ಅಥವಾ ಸಮುದಾಯಗಳನ್ನು ಅವರು ಆಕ್ರಮಿಸಿಕೊಂಡಿರುವ ಮನೆಗಳು ಮತ್ತು/ಅಥವಾ ಭೂಮಿಯಿಂದ ಸೂಕ್ತ ಕಾನೂನು ಅಥವಾ ಇತರ ರಕ್ಷಣೆಯನ್ನು ಒದಗಿಸದೆ ಮತ್ತು ಪ್ರವೇಶವಿಲ್ಲದೆ ಶಾಶ್ವತ ಅಥವಾ ತಾತ್ಕಾಲಿಕವಾಗಿ ತೆಗೆದುಹಾಕುವುದು ಎಂದು ವ್ಯಾಖ್ಯಾನಿಸಬಹುದು.”

ಬಲವಂತದ ಹೊರಹಾಕುವಿಕೆಯ ಪರಿಣಾಮವಾಗಿ, ಜನರು ಹೆಚ್ಚಾಗಿ ನಿರಾಶ್ರಿತರು ಮತ್ತು ನಿರ್ಗತಿಕರಾಗಿ ಉಳಿಯುತ್ತಾರೆ, ಜೀವನೋಪಾಯವನ್ನು ಗಳಿಸುವ ಮಾರ್ಗಗಳಿಲ್ಲದೆ ಮತ್ತು ಹೆಚ್ಚಾಗಿ ಕಾನೂನು ಅಥವಾ ಇತರ ಪರಿಹಾರಗಳಿಗೆ ಪರಿಣಾಮಕಾರಿ ಪ್ರವೇಶವಿಲ್ಲದೆ ಉಳಿಯುತ್ತಾರೆ.”

“ಮನೆ(ಗಳು) ಮತ್ತು ಭೂಮಿಯಿಂದ ಬಲವಂತದ ಹೊರಹಾಕುವಿಕೆಯಿಂದ ದೂರವಿರುವುದು ಮತ್ತು ಅವುಗಳ ವಿರುದ್ಧ ರಕ್ಷಿಸುವುದು ರಾಜ್ಯಗಳ ಬಾಧ್ಯತೆಯಾಗಿದೆ, ಇದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಕಾನೂನು ದಾಖಲೆಗಳಿಂದ ಉದ್ಭವಿಸುತ್ತದೆ”

ಸಾಮಾನ್ಯ ಹೇಳಿಕೆಯು ಹೊರಹಾಕುವಿಕೆಯನ್ನು ಅಸಾಧಾರಣ ಸಂದರ್ಭಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಸಂಬಂಧಿತ ನಿಬಂಧನೆಗಳಿಗೆ ಸಂಪೂರ್ಣವಾಗಿ ಅನುಸಾರವಾಗಿ ಮಾತ್ರ ನಡೆಸಬೇಕು ಎಂದು ನಿರ್ದಿಷ್ಟಪಡಿಸುತ್ತದೆ.”

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿಲ್ಲದ ರಾಷ್ಟ್ರೀಯ ಶಾಸನ ಮತ್ತು ನೀತಿಗಳಿಗೆ ಸಂಬಂಧಿಸಿದಂತೆ ಬಲವಂತದ ಹೊರಹಾಕುವಿಕೆಗೆ ಸಂಬಂಧಿಸಿದ ದೂರುಗಳನ್ನು ಸಾಕಷ್ಟು ವಸತಿ ಹಕ್ಕಿನ ಕುರಿತು ವಿಶೇಷ ವರದಿಗಾರರಿಗೆ ತಿಳಿಸಬಹುದು, ಅವರು ವಿಶೇಷ ಕಾರ್ಯವಿಧಾನಗಳ ಸಂವಹನ ಕಾರ್ಯವಿಧಾನದ ಅಡಿಯಲ್ಲಿ ಅವುಗಳನ್ನು ದೂರುಗಳು ಎಂದು  ಪರಿಗಣಿಸುತ್ತಾರೆ. ಎಂಬಿತ್ಯಾದಿಯಾಗಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆ ಉಲ್ಲೇಖಿಸುತ್ತದೆ. ( ಬರಹಗಾರರು, ಪಿಯುಸಿಎಲ್.ಕ ಸದಸ್ಯ)