ದೇಶದಲ್ಲಿ ಅಸ್ಥಿರತೆ ಮೂಡಿಸುವ ಸಲುವಾಗಿ ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆ ಕಣದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಓಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳ ವಿರುದ್ಧ ತೀಕ್ಷ್ಣವಾದ ವ್ಯಂಗ್ಯವಾಡಿದ ಅವರು, “ಬುಲ್ಡೋಜರ್‌ಗಳನ್ನು ಎಲ್ಲಿ ಓಡಿಸಬೇಕು” ಎಂಬುದನ್ನು ಕಲಿಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
“ಎಸ್‌ಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಮ್ ಲಲ್ಲಾ ಮತ್ತೆ ಟೆಂಟ್‌ನಲ್ಲಿರುತ್ತಾರೆ ಮತ್ತು ಅವರು ರಾಮಮಂದಿರದ ಮೇಲೆ ಬುಲ್ಡೋಜರ್ ಓಡಿಸುತ್ತಾರೆ. ಅವರು ಯೋಗಿಜಿಯಿಂದ ಟ್ಯೂಷನ್ ತೆಗೆದುಕೊಳ್ಳಬೇಕು, ಎಲ್ಲಿ ಬುಲ್ಡೋಜರ್ ಓಡಿಸಬೇಕು ಮತ್ತು ಎಲ್ಲಿ ಓಡಿಸಬಾರದು” ಎಂದು ಪ್ರಧಾನಿ ಮೋದಿ ಹೇಳಿದರು. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮತ್ತೊಂದೆಡೆ, ಇಂಡಿಯಾ ಬ್ಲಾಕ್, ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
“ಚುನಾವಣೆಗಳು ಮುಂದುವರೆದಂತೆ, ಇಂಡಿಯಾ ಮೈತ್ರಿಕೂಟದ ಸದಸ್ಯರು ಬೇರ್ಪಡಲು ಪ್ರಾರಂಭಿಸುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ತನ್ನ ಮಾತಿನಲ್ಲಿ ಸೇರಿಸಿದರು.
ಇನ್ನಷ್ಟು ವರದಿಗಳು
ನ್ಯಾಯಮಂಡಳಿಯನ್ನು ಸಂಪರ್ಕಿಸಿ : ವಕ್ಫ್ ನೋಂದಣಿ ವಿಸ್ತರಿಸಲು ಸು. ಕೋರ್ಟ್ ನಿರಾಕರಣೆ, ಉಮೀಧ್ ಪೋರ್ಟಲ್ ಸಮಸ್ಯೆ ವ್ಯಾಜ್ಯ.
ಪತ್ರಿಕಾ ಸ್ವಾತಂತ್ರ್ಯ – ಚಟುವಟಿಕೆ ಮೇಲೆ ಜಮ್ಮು. ಕಾಶ್ಮೀರ ಸರಕಾರದ ಕಣ್ಗಾವಲು ಆದೇಶ ಖಂಡಿಸಿದ ಪಿಯುಸಿಎಲ್.
ಭಾರತದ ಬೃಹತ್ ಅಲ್ಪಸಂಖ್ಯಾತ ವರ್ಗ ಮಹಿಳೆಯರು: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಅಪೇಕ್ಶಿಸಿದ ಸು.ಕೋರ್ಟ್.