January 26, 2026

Vokkuta News

kannada news portal

ಮಂಗಳೂರು: ಎಸ್ಡಿಪಿಐ ಬೃಹತ್ ರ್ಯಾಲಿ, ಸಭೆ, ರಾಷ್ಟ್ರೀಯ ನಾಯಕರು ಭಾಗಿ, ‘ಯಂಗ್ ಡೆಮೋಕ್ರಾಟ್’ ಗಳ ಸಮಾಗಮ.

ಮಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿನ್ನೆ ನಡೆದು ನೂತನ ಸಮಿತಿ ರಚನೆ ಆಗುವುದರೊಂದಿಗೆ ಹಾಲಿ ಬಂಧಿತರಾಗಿರುವ ಎಮ್. ಕೆ. ಫೈಝಿ ರವರನ್ನು ಪಕ್ಷ ಚೇರ್ಮನ್ ಆಗಿ ಆಯ್ಕೆ ಮಾಡಿದೆ. ವಿವಿಧ ಪದಾಧಿಕಾರ್ಗಳಾಗಿ ಇತರರು ಆಯ್ಕೆ ಆಗಿದ್ದು, ಇಂದು ನೂತನ ಪದಾಧಿಕಾರಿಗಳಸಿಗೆ ಅಭಿನಂದನ ಸಭೆ ಆಯೋಜಿಸಲಾಗಿದ್ದು, ನಗರದ ಟೌನ್ ಹಾಲ್ ನಲ್ಲಿ ಬೃಹತ್ ಸಭೆ ನ್ನಡೆಯಿತು. ಸಂಜೆ ನಗರದ ಜ್ಯೋತಿ ವೃತ್ತದಿಂದ ಟೌನ್ ಹಾಲ್ ವರೆಗೆ ಬೃಹತ್ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಮೊಹಮದ್ ಶಾಫಿ ,ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಇಲ್ಯಾಸ್, ಅಬ್ದುಲ್ ಮಜೀದ್ ಪಿ, ಮೆಹರ್ ಅಫ್ರೋಝ್ ಯಾಸ್ಮಿನ್, ಕಾರ್ಯದರ್ಶಿಗಳಾದ ಅಲ್ಪೊನ್ಸ್ ಫ್ರಾಂಕೊ, ರಿಯಾಝ್ ಫರಂಗಿಪೇಟೆ, ಅಶ್ರಫ್, ಅಬ್ದುಲ್ ಮಜೀದ್,ಇತರರು,ಬೃಹತ್ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಸಾಗಿದರು. ಜಾತಾದಲ್ಲಿ ಸ್ಥಳೀಯ ಕಲೆಗಳಾದ ಧಪ್, ಚೆಂಡೆ ಇತ್ಯಾದಿ ತಂಡಗಳಿದ್ದು ನಗರದ ಮುಖ್ಯ ಬೀದಿ ವೀಕ್ಷಣಾ ನಿಬಿಡತೆ ಹೊಂದಿದ್ದವು. ಸಂಜೆ ಟೌನ್ ಹಾಲ್ನಲ್ಲಿ ಅಭಿನಂದನ ಸಭೆ ನಡೆಯಿತು.