November 21, 2024

Vokkuta News

kannada news portal

ಉಳ್ಳಾಲ.ನಾ.ವೇದಿಕೆಯಿಂದ ‘ ನನ್ನ ಉಳ್ಳಾಲ – ನಮ್ಮ ಉಳ್ಳಾಲ ‘ ಘೋಷಿತ ಸ್ವಚ್ಛತಾ ಕಾರ್ಯಕ್ರಮ.

ಉಳ್ಳಾಲ: ಉಳ್ಳಾಲ ನಾಗರೀಕ ವೇದಿಕೆ ( ನನ್ನ ಉಳ್ಳಾಲ, ನಮ್ಮ ಉಳ್ಳಾಲ) ವತಿಯಿಂದ ಇಂದು ತಾರೀಕು 02/10/2024 ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ಶ್ರಮಾದಾನ ನಡೆಯಿತು.

ನಾಗರಿಕ ಮತ್ತು ಎನ್.ಜಿ. ಓ ಗಳಿಂದ ಸ್ವಚ್ಛತಾ ಕಾರ್ಯ

ಈ ಸಂದರ್ಭ ಮಾತನಾಡಿದ ಉಳ್ಳಾಲ ನಾಗರಿಕ ವೇದಿಕೆಯ ಸಂಚಾಲಕರಾದ ಝಾಕೀರ್ ಇಖ್ಲಾಸ್ ನಮ್ಮ ಉಳ್ಳಾಲ ವನ್ನು ಸುಸ್ಥಿರ ಹಾಗೂ ಸೌಹಾರ್ದಯುತ ಅಭಿವ್ರದ್ದಿಯತ್ತ ಒಯ್ಯಲು ನಾಗರೀಕರು ಮಾಡುವ ಪ್ರಯತ್ನ ವಾಗಿ, ಹಾಗೂ ಗಾಂಧೀಜಿಯವರ ಅಸತ್ಯದ ವಿರುದ್ಧ ಸತ್ಯವೂ ಜಯಿಸುತ್ತದೆ , ಸತ್ಯವೇ ಜೀವನದ ಆದರ್ಶ ಮತ್ತು ಜನರ ಕಡೆಗೆ ಶ್ರಮಿಸಬೇಕು ಎಂಬ ಆಶಯ ಹಾಗೂ ಸ್ವಚ್ಛತೆ ವಿಶ್ವಾಸದ ಅರ್ಧ ಭಾಗ ಎಂಬ ಸ್ವಚ್ಛತೆಯ ಮಹತ್ವವನ್ನು ಸಾರಿದ ಪ್ರವಾದಿ ಮೊಹಮ್ಮದ್ (ಸ ) ಆದರ್ಶ ಜೀವನದ ಪಾಠದ ಅಂಗವಾಗಿ ಈ ಬಾರಿಯ ಗಾಂದಿ ಜಯಂತಿ ದಿನದಂದು
ಉಳ್ಳಾಲ ನಾಗರೀಕ ವೇದಿಕೆಯಿಂದ “ಬೆಳಿಗ್ಗೆ 6.30 ರಿಂದ 9 ಘಂಟೆಯ ತನಕ ಸಾರ್ವಜನಿಕ ಸ್ಥಳಗಳನ್ನು ಸುಚಿತ್ವ ಗೊಳಿಸುವ ಮೂಲಕ ಶ್ರಮಾದಾನ, ಮಾಡಲಾಯಿತು ಎಂದು ಹೇಳಿದರು.ಉಳ್ಳಾಲ ಅಬ್ಬಕ ವೃತ್ತ ಹಾಗೂ ಅಬ್ಬಕ್ಕ ವೃತದಿಂದ ಉಳ್ಳಾಲ ರಾಜ ರಸ್ತೆ ಮಾಸ್ತಿ ಕಟ್ಟೆ ಜಂಕ್ಷನ್ ವರೆಗೆ ಇಕ್ಕೆಲಗಳಲ್ಲಿ ಬೆಳೆದ ಗಿಡಗಂಟಿಗಳು ,ಕಸ , ಪ್ಲಾಸ್ಟಿಕ್ ತ್ಯಾಜ್ಯಗಳು ಪುಟ್ ಪಾತ್, ಹಾಗೇಯೇ ಉಳ್ಳಾಲ ಪೊಲೀಸ್ ಠಾಣೆಯ ಆವರಣ ಮತ್ತು ವಸತಿ ನಿಲಯ ಗಳ ಪರಿಸರವನ್ನು ಸ್ವಚ್ಛ ಮಾಡಲಾಯಿತು,
ಇಂದಿನ ಶ್ರಮದಾನ ಕಾರ್ಯದಲ್ಲಿ ,”ಉಳ್ಳಾಲ ನಾಗರೀಕ ವೇದಿಕೆ ಅಧ್ಯಕ್ಷರಾದ ಸಾಗರ್ ಖಾಲಿದ್, ಸಂಚಾಲಕರಾದ ಝಾಕೀರ್ ಇಕ್ಲಾಸ್, ಪರಿಸರ ಸಂರಕ್ಷಣೆಯ ಹೋರಾಟಗಾರ ಕಿಶೋರ್ ಅತ್ತಾವರ್,
ಉಪ ಕಾರ್ಯದರ್ಶಿ ನವೀನ್ ನಾಯಕ್, , ನಗರ ಸಭಾ ಸದಸ್ಯರಾದ ಅಬ್ದುಲ್ ಜಬ್ಬಾರ್, ಸೋಷಿಯಲ್ ಫಾರೂಕ್, ಆರ್ ಕೆ ಉದಯ್, ರೋಹಿದಾಸ್ ಬಂಗೇರ, ಫೈರೋಜ್ ಕೋಟೆಪುರ, ಜ. ಇ. ಹಿಂದ್ ಉಳ್ಳಾಲದ ಅಧ್ಯಕ್ಷರಾದ ಅಬ್ದುಲ್ ಕರೀಂ, ಜ.ಇ.ಹಿಂದ್ ಸಮಾಜ ಸೇವಾ ಘಟಕದ ಅಧ್ಯಕ್ಷರಾದ ಇಶಾಕ್ ಕಲ್ಲಾಪುರ್, ಮಹಮ್ಮದ್ ಶರೀಫ್ , ಯಾ ಹುಸೇನ್, ಕರ್ನಾಟಕ ರಕ್ಷಣಾ ವೇದಿಕೆಯ ಫ್ಯರೋಜ್ ಕೋಟೆಪುರ , ಇಂತಿಯಾಜ್ ಸಿ.ಎಂ.ಸಿ, ಯು.ಟಿಸ್ ಫ್ಯಾನ್ ಕ್ಲಬ್ ಅಧ್ಯಕ್ಷ ನಜೀರ್ ಬಾರ್ಲಿ ಮತ್ತು ಬಳಗ , ಪೊಸ ಕುರಲ್ ಬಳಗದ ಆಸಿಫ್ ,ಉಮ್ಮರ್ ಫಾರೂಕ್, ರಾಜ್ಯ ಉಳ್ಳಾಲ ನಗರಸಭಾ ಅಧ್ಯಕ್ಷೆ ಶಶಿಕಲಾ , ಉಪಾಧ್ಯಕ್ಷೆ ಸ್ವಪ್ನ ಹಾಗೂ ಪೌರಕಾರ್ಮಿಕರು ಸೇರಿ, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.