January 10, 2026

Vokkuta News

kannada news portal

ಯುನಿವೆಫ್ ಕರ್ನಾಟಕ ವತಿಯಿಂದ ವಯಸ್ಕರಿಗಾಗಿ ಸಾಪ್ತಾಹಿಕ, ಏಕ ತಾಸು ನೀತಿಪಾಠ ಕಲಿಕೆ ತರಗತಿಗಳು

ಮಂಗಳೂರು: ಯುನಿವೆಫ್ ಕರ್ನಾಟಕ ಸಂಸ್ಥೆಯು ಹೊಸ ವರ್ಷಾರಂಭದಿಂದ ವಯಸ್ಕರಿಗಾಗಿ ಸಾಪ್ತಾಹಿಕ ತಾಸು ನೀತಿ ಪ್ರಬೋಧನ ಕಲಿಕೆ ತರಗತಿಗಳನ್ನು ಆರಂಭಿಸಿದ್ದು , ಪ್ರತಿ ಶುಕ್ರವಾರ ರಾತ್ರಿ ,8.15 ರಿಂದ 9.15 ರವರಿಗೆ ಮಂಗಳೂರಿನ ಫಲ್ಮೀರ್ ಲುಲು ಸೆಂಟರ್ ಮೇಲ್ಮಹಡಿ ಯಲ್ಲಿ ಧಾರ್ಮಿಕ ಮತ್ತು ನೈತಿಕ ಪಾಠಗಳನ್ನು ಬೋಧಿಸುವ ತರಗತಿಗಳನ್ನು ನಡೆಸುತ್ತಿದೆ.

ಇಸ್ಲಾಮ್ ಕರ್ಮ ಶಾಸ್ತ್ರ, ಆರಾಧನಾ ಕ್ರಮ, ಇತಿಹಾಸ ಇತ್ಯಾದಿ ವಿಷಯಗಳಲ್ಲಿ ಬೆಳಕು ಚೆಲ್ಲುವ ಜ್ಞಾನಾರ್ಜನೆ ಇದರಿಂದ ಆಗಲಿದ್ದು, ವಯಸ್ಕರಿಗೆ ಈ ತರಗತಿಗಳು ಪ್ರಾಯೋಜನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುನಿವೆಫ್ ಕರ್ನಾಟಕ ಸಂಸ್ಥೆ ಕಳೆದ ಇಪ್ಪತ್ತು ವರ್ಷಗಳಿಂದ ಅರಿಯಿರಿ ಮನುಕುಲದ ಪ್ರವಾದಿ ಎಂಬ ಸಮಾಜೋ ಶೈಕ್ಷಣಿಕ ಅಭಿಯಾನ ನಡೆಸುತ್ತಿದ್ದು, ಅರಿವು ಕಾರ್ಯಕ್ರಮದ ಮುಂಚೂಣಿಯಲ್ಲಿದೆ.