November 23, 2026

Vokkuta News

kannada news portal

ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ: ಕೊಡಗು ಜಿಲ್ಲಾ ಘಟಕ ರಚನೆ ಪೂರ್ವಭಾವಿ ಸಭೆ.

ಮಡಿಕೇರಿ :ಕರ್ನಾಟಕ ರಾಜ್ಯದ ಮುಸ್ಲಿಂ ಸಮುದಾಯದ ಏಕತೆ, ಸಂಘಟಿತ ಶಕ್ತಿ, ಸಾಮಾಜಿಕ ಪ್ರಗತಿ ಹಾಗೂ ಸಮುದಾಯದ ಹಿತಾಸಕ್ತಿಗಳ ರಕ್ಷಣೆಗಾಗಿ ರಾಜ್ಯಮಟ್ಟದಲ್ಲಿ ರೂಪುಗೊಳ್ಳುತ್ತಿರುವ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಪರಿಚಯ ಹಾಗೂ ಕೊಡಗು ಜಿಲ್ಲಾ ಮುಸ್ಲಿಂ ಒಕ್ಕೂಟದ ರಚನೆಯ ಪೂರ್ವಭಾವಿ ಸಭೆಯು ನವೆಂಬರ್ 21ರಂದು ಮಡಿಕೇರಿಯ ಬಿಳಿಗೇರಿ ಗ್ರಾಮದ ಹಕಾತೂರು ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಮಸೀದಿ, ಮದ್ರಸಾ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ರಾಜ್ಯ ಸಂಚಾಲಕರಾದ ಯಾಸೀನ್ ಮಲ್ಪೆ ಹಾಗೂ ಸುಹೇಲ್ ಅಹ್ಮದ್ ಮರೂರ್, ರಾಜ್ಯ ಸಮಿತಿ ಸದಸ್ಯರಾದ ಕೆ. ಅಶ್ರಫ್( ಮಾಜಿ ಮೇಯರ್) ಮಂಗಳೂರು ಮತ್ತು ಮುಹಮ್ಮದ್ ಮೌಲಾ ಉಡುಪಿ ಸೇರಿದಂತೆ, ಸುರತ್ಕಲ್ ಐಕ್ಯತಾ ವೇದಿಕೆ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಮುಸ್ಲಿಮ್ ಜನಪ್ರತಿನಿಧಿ ಒಕ್ಕೂಟದ ಸಿರಾಜ್ ಬಜ್ಪೆ, ಸೆಂಟ್ರಲ್ ಮುಸ್ಲಿಮ್ ಕಮಿಟಿ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹಾಜಿ, ದ. ಕ.ಮುಸ್ಲಿಮ್ ಒಕ್ಕೂಟ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಯು, ಇಬ್ರಾಹಿಂ ಬಾವ ಬಜಾಲ್ ಇತರ ಗಣ್ಯರು ಉಪಸ್ಥಿತರಿದ್ದು, ಒಕ್ಕೂಟದ ಉದ್ದೇಶ, ಕಾರ್ಯವೈಖರಿ ಹಾಗೂ ಸಂಘಟನಾ ರಚನೆಯ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

ಕೊಡಗು ಜಿಲ್ಲಾ ಸಂಚಾಲಕರಾದ ಪಿ.ಕೆ. ಖಾಲಿದ್ ಅವರು ಸಭೆಯನ್ನು ಆಯೋಜಿಸಿ, ಕಾರ್ಯಕ್ರಮದ ವ್ಯವಸ್ಥೆಗಳನ್ನು ನಿರ್ವಹಿಸಿದರು.