ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ಮಾನವ ಹಕ್ಕು ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿ ನಿರ್ಧರಿಸಿದೆ.
ಈ ವರ್ಷದ ಶಾಂತಿ ಬಹುಮಾನವು ಹಿಂದಿನ ವರ್ಷದಲ್ಲಿ, ಮಹಿಳೆಯರನ್ನು ಗುರಿಯಾಗಿಸುವ ಭೇದತೆ, ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಇರಾನ್‌ನ ದೇವಪ್ರಭುತ್ವದ ಆಡಳಿತದ ವಿರುದ್ಧ ಪ್ರದರ್ಶಿಸಿದ ನೂರಾರು, ಸಾವಿರ ಜನರನ್ನು ಗುರುತಿಸಿದೆ, ಪ್ರದರ್ಶನಕಾರರು ಅಳವಡಿಸಿಕೊಂಡ ಧ್ಯೇಯವಾಕ್ಯ – “ಮಹಿಳೆ – ಜೀವನ – ಸ್ವಾತಂತ್ರ್ಯ” – ನರ್ಗೆಸ್ ಮೊಹಮ್ಮದಿಯವರ ಸಮರ್ಪಣೆ ಮತ್ತು ಕೆಲಸವನ್ನು ಸೂಕ್ತವಾಗಿ ವ್ಯಕ್ತಪಡಿಸಿದೆ, ಎಂದು ಹೇಳಿದೆ.
ನರ್ಗಿಸ್ ಮೊಹಮ್ಮದಿ ಒಬ್ಬ ಮಹಿಳೆ, ಮಾನವ ಹಕ್ಕುಗಳ ವಕೀಲೆ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಹಕ್ಕಿಗಾಗಿ ಆಕೆಯ ಕೆಚ್ಚೆದೆಯ ಹೋರಾಟವು ಅಪಾರವಾದ ವೈಯಕ್ತಿಕ ವೆಚ್ಚಗಳೊಂದಿಗೆ ಆಗಿರುತ್ತದೆ. ಒಟ್ಟಾರೆಯಾಗಿ, ಇರಾನ್‌ನ ಆಡಳಿತವು ಅವಳನ್ನು 13 ಬಾರಿ ಬಂಧಿಸಿದೆ, ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ ಮತ್ತು ಆಕೆಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ.
ಸ್ವಾತಂತ್ರ್ಯ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಇನ್ನೂ ಜೈಲಿನಲ್ಲಿದ್ದಾಳೆ.
ಇನ್ನಷ್ಟು ವರದಿಗಳು
ಅಮೆರಿಕ ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಿದ ರೀತಿ,ಕೈಕೋಳ ತೊಡಿಸಿದ ಕೃತ್ಯ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ: ಪಿಯುಸಿಎಲ್.
ಸಚಿವ ಮಾಂಕಾಳ ವೈದ್ಯ ಗುಂಡೇಟು ಹೇಳಿಕೆ: ಪಿಯುಸಿಎಲ್ ಕರ್ನಾಟಕ ಖಂಡನೆ,ಪ್ರಕರಣ ದಾಖಲಿಸುವಿಕೆಗೆ ಒತ್ತಾಯ.
ಎನ್ಐಎ ಲಕ್ನೋ ನ್ಯಾಯಾಲಯ ತೀರ್ಪು: ಮಾನವ ಹಕ್ಕು ಸಂಘಟನೆಗಳ ಬಗ್ಗೆ ನಕಾರಾತ್ಮಕ ಉಲ್ಲೇಖ,ಪಿಯುಸಿಎಲ್ ಪ್ರತಿಕ್ರಿಯೆ.