July 27, 2024

Vokkuta News

kannada news portal

ಗಾಝಾ,ಗಾಯಾಳುಗಳ ಚಿಕಿತ್ಸೆಗೆ ರಫಾ ಗಡಿಯನ್ನು ಪ್ರಥಮ ಬಾರಿ ತೆರೆದ ಈಜಿಪ್ಟ್.

ರಫ: ಯುದ್ಧದಿಂದ ಗಾಯಗೊಂಡ ಪ್ಯಾಲೆಸ್ಟೀನಿಯನ್ನರನ್ನು ಚಿಕಿತ್ಸೆಗಾಗಿ ಈಜಿಪ್ಟ್‌ಗೆ ಕರೆದೊಯ್ಯಲು, ಅಕ್ಟೋಬರ್ 7 ರ ನಂತರ ಪ್ರಥಮ ಬಾರಿಗೆ ರಫಾ ಕ್ರಾಸಿಂಗ್ ದಾರಿಯನ್ನು ಗಾಜಾದಿಂದ ತೆರೆಯಲಾಗಿದೆ.

ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಂದು ಮುಂಜಾನೆ ಇಸ್ರೇಲ್‌ನ ದಾಳಿ ನಡೆಸಿದ್ದು ಮಾನವ ಹಕ್ಕು ಗುಂಪುಗಳು ಇದನ್ನು ಬಲವಾಗಿ ಖಂಡಿಸಿವೆ, ಗಾಝಾದಲ್ಲಿ ಕದನ ವಿರಾಮವನ್ನು ಪಡೆಯಲು ವಿಶ್ವ ನಾಯಕರಿಗೆ ಈ ವಾಯುದಾಳಿಯು “ಎಚ್ಚರಗೊಳಿಸುವ ಕರೆ” ಎಂದು ಪರಿಗಣಿಸಲಿ ಎಂದು ಹೇಳಿದೆ.

ಗಾಝಾದ ಬದಿಯಲ್ಲಿರುವ ರಾಫಾ ಕ್ರಾಸಿಂಗ್‌ನಿಂದ ತೆಗೆಯಲಾದ ಇಂದಿನ ಲೈವ್ ಶಾಟ್‌ಗಳು ಗೇಟ್‌ಗಳ ಮೂಲಕ ಪ್ರವೇಶಿಸುವ ಹಲವಾರು ಜನರು ಮತ್ತು ಕಾರುಗಳನ್ನು ತೋರಿಸಿದೆ.

ಯಾವುದೇ ನೆರವು ಆಂಬ್ಯುಲೆನ್ಸ್‌ಗಳು ಇನ್ನೂ ಬರುತ್ತಿರುವುದನ್ನು ನಾವು ನೋಡಿಲ್ಲ ಎಂದು ಕೂಡಾ ಹೇಳಿದೆ.

ಹಲವಾರು ಗಾಯಗೊಂಡ ಪ್ಯಾಲೆಸ್ಟೀನಿಯನ್ನರನ್ನು ಚಿಕಿತ್ಸೆಗಾಗಿ ಈಜಿಪ್ಟ್‌ಗೆ ಕರೆದೊಯ್ಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ ಮತ್ತು ಕೆಲವು ವಿದೇಶಿ ಪ್ರಜೆಗಳಿಗೆ ಗಾಝಾವನ್ನು ತೊರೆಯಲು ಸಹ ಅನುಮತಿಸಲಾಗುತ್ತದೆ.

ರಫಾ ಮೂಲಕ ವಿದೇಶಿ ಪ್ರಜೆಗಳ ನಿರ್ಗಮನದ ಪ್ರಥಮ ಗುಂಪು: ಯುಕೆ

ಕ್ರಾಸಿಂಗ್ ತೆರೆಯುವ ಕೆಲವೇ ನಿಮಿಷಗಳ ಮೊದಲು, ಯುಕೆ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು “ವಿದೇಶಿ ಪ್ರಜೆಗಳ ಮೊದಲ ಗುಂಪು” ಗಾಝಾ ವನ್ನು ತೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

“ಬ್ರಿಟಿಷ್ ಪ್ರಜೆಗಳು ಹೊರಡಲು ಸಾಧ್ಯವಾದ ತಕ್ಷಣ ಅವರಿಗೆ ಸಹಾಯ ಮಾಡಲು ಯುಕೆ ತಂಡಗಳು ಸಿದ್ಧವಾಗಿವೆ. ಜೀವ ಉಳಿಸುವ ಮಾನವೀಯ ನೆರವು ವ್ಯವಸ್ಥೆ ಸಾಧ್ಯವಾದಷ್ಟು ಶೀಘ್ರ ಗಾಝಾವನ್ನು ಪ್ರವೇಶಿಸುವುದು ಅತ್ಯಗತ್ಯ ಎಂದು, ”ಅವರು ಎಕ್ಸ್ ಸಂದೇಶ ಹ್ಯಾಂಡಲ್ ನಲ್ಲಿ ಬರೆದಿದ್ದಾರೆ.

ಇಸ್ರೇಲ್ ಪ್ರಧಾನಿಯ ಯುದ್ಧದ ಸಂಚು ಹೇಗಿದೆ ?

ನೆತನ್ಯಾಹು ತನ್ನ ರಾಷ್ಟ್ರವನ್ನು ಗಾಜಾದ ಮೇಲಿನ ಯುದ್ಧಕ್ಕೆ ಕರೆದೊಯ್ಯುತ್ತಿದ್ದಂತೆ, ಅವರ ಬೃಹತ್ ನಿರ್ಧಾರಗಳನ್ನು ರೂಪಿಸುವ ವ್ಯಕ್ತಿತ್ವದ ಲಕ್ಷಣಗಳು ಲಕ್ಷಾಂತರ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯಾದವರ ಜೀವನ ಮತ್ತು ಸಂಘರ್ಷದ ದಿಕ್ಕಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು.

ಇದುವರೆಗಿನ ಬೆಳವಣಿಗೆಗಳು ಕಳವಳಕಾರಿ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಲೋರಾಜಕೀಯ ಮನಶ್ಶಾಸ್ತ್ರಜ್ಞ ಸೌಲ್ ಕಿಮ್ಹಿ ಪ್ರಕಾರ, ಪ್ರಧಾನ ಮಂತ್ರಿಯ ನಡವಳಿಕೆಯ ವಿಶ್ಲೇಷಣೆಯು ಅವರು ಅನಿರ್ದಿಷ್ಟ ಮತ್ತು ಕಠಿಣ ನಿರ್ಧಾರಗಳೊಂದಿಗಿನ ಗೊಂದಲದಲ್ಲಿ ಹೋರಾಡುತ್ತಿದ್ದಾರೆ ಎಂದು ಸೂಚಿಸುತ್ತದೆ.