ಗಾಝಾ: 39 ಪಲೆಸ್ಟೀನಿಯನ್ನರು ಮತ್ತು 13 ಇಸ್ರೇಲಿಗಳನ್ನು ಅನುಕ್ರಮವಾಗಿ ಇಸ್ರೇಲಿ ಕಾರಾಗೃಹಗಳಿಂದ ಮತ್ತು ಗಾಝಾದಲ್ಲಿ ಸೆರೆಯಿಂದ ಬಿಡುಗಡೆಯಾದ ನಂತರ ಅವರನ್ನು ಮನೆಗೆ ಸ್ವಾಗತಿಸಲಾಯಿತು. ಹತ್ತು ಥಾಯ್ ಪ್ರಜೆಗಳು ಮತ್ತು ಒಬ್ಬ ಫಿಲಿಪಿನೋ ಕೂಡ ಗಾಝಾದಿಂದ ಬಿಡುಗಡೆಯಾಗಿ ಇಸ್ರೇಲ್‌ನಲ್ಲಿಯೇ ಉಳಿದಿದ್ದಾರೆ.
ನಾಲ್ಕು ದಿನಗಳ ಕದನ ವಿರಾಮ ಒಪ್ಪಂದದ ಎರಡನೇ ದಿನವಾದ ಶನಿವಾರ ಬಿಡುಗಡೆ ಮಾಡಲಿರುವ ಬಂಧಿತರ ಪಟ್ಟಿಯನ್ನು ಸ್ವೀಕರಿಸಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
ಶುಕ್ರವಾರ ಬಿಡುಗಡೆಯಾದ ಹೆಚ್ಚಿನ ಇಸ್ರೇಲಿ ಬಂಧಿತರು ಉತ್ತಮ ದೈಹಿಕ ಆರೋಗ್ಯದಲ್ಲಿದ್ದಾರೆ ಎಂದು ಅವರನ್ನು ಪರೀಕ್ಷಿಸಿದ ಆಸ್ಪತ್ರೆ ಹೇಳಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಅವರು ಇಂದು ಜಗತ್ತು ‘ ಮೌನ ಮುರಿಯಲು ‘ ಕರೆ ನೀಡಿದ್ದಾರೆ, ಗಾಝಾದ ನೋವನ್ನು ತಡೆಯಿರಿ ಎಂದಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಜೈ ಅವರು ಗಾಝಾದಲ್ಲಿನ ಜನರ “ಅನಾವಶ್ಯಕವಾದ ಸಂಕಟ” ವನ್ನು ಕೊನೆಗೊಳಿಸಲು ಮತ್ತು ಪಲೆಸ್ತೀನ್ ಎನ್‌ಕ್ಲೇವ್‌ನ ಬಾಂಬ್ ದಾಳಿಯನ್ನು ಕೊನೆಗೊಳಿಸಲು “ಸಂಪೂರ್ಣ ಕದನ ವಿರಾಮ”ಕ್ಕೆ ಕರೆ ನೀಡಿದ್ದಾರೆ.
ಪಲೇಸ್ಟಿನಿಯನ್ ಪರ ಅಮೆರಿಕಾದಲ್ಲಿ ಪ್ರತಿಭಟನೆ
ನಾಂಟುಕೆಟ್‌ನಲ್ಲಿ ಕ್ರಿಸ್ಮಸ್ ಟ್ರೀ ದೀಪ ಬೆಳಗುವಿಕೆಯಲ್ಲಿ ಪಾಲ್ಗೊಳ್ಳಲು ಜೋ ಬೈಡೆನ್ ಅವರು ಆಗಮಿಸಿದಾಗ ಪ್ಯಾಲೆಸ್ತೀನ್ ಪರ ಪ್ರತಿಬಟನಾಕಾರರು ಅವರ ವಿರುದ್ಧ ಪ್ರತಿಭಟಿಸಿದರು.
‘ಅವಕಾಶಗಳು ಮುಕ್ತವಾಗಿದೆ ‘
ಇಸ್ರೇಲ್-ಹಮಾಸ್ ಕದನ ವಿರಾಮವನ್ನು ವಿಸ್ತರಿಸಲಾಗುವುದು ಎಂದು ಬೈಡೆನ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮವನ್ನು ಘೋಷಿಸಿದಾಗಿನಿಂದ, ಒಪ್ಪಂದವನ್ನು ವಿಸ್ತರಿಸಬಹುದೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇನ್ನಷ್ಟು ವರದಿಗಳು
ಪ್ರದಾನಿ ಸೌದಿ ಪ್ರವಾಸ,ಉಭಯ ರಾಷ್ಟ್ರಗಳು 6 ಒಪ್ಪಂದಗಳಿಗೆ ಸಹಿ, ಪ್ರಿನ್ಸ್ ಜೊತೆ ಹಜ್ ಕೋಟಾ ಚರ್ಚೆ.
ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ: ವ್ಯಾಟಿಕನ್ ಹೇಳಿಕೆ.
ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆಗೆ ಪ್ರತಿಕ್ರಿಯಿಸಿದ ಹಮಾಸ್, ಸೌದಿ, ಅಷ್ಟ್ರೇಲಿಯ.