June 13, 2024

Vokkuta News

kannada news portal

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹಿಂ.ವರ್ಗದ ಪದ್ಮರಾಜ್ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ.

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಆಯ್ಕೆ ಮಾಡಿದೆ.

ಮಂಗಳೂರು: ವಕೀಲ ವೃತ್ತಿ ನಿರತ ಮತ್ತು ಧಾರ್ಮಿಕ ಸಂಸ್ಥೆಯ ಪ್ರಮುಖ ಪದಾಧಿಕಾರಿಯಾಗಿರುವ, ಹಿರಿಯ ಕಾಂಗ್ರೆಸ್ ಮುಂದಾಳು ಬಿಲ್ಲವ ಸಮುದಾಯದ ಹಿರಿಯ ನಾಯಕ, ಕೇಂದ್ರ ಮಾಜಿ ಮಂತ್ರಿಗಳು ಆದ ಬಿ .ಜನಾರ್ದನ ಪೂಜಾರಿ ರವರ ಕುಟುಂಬ ಸಂಬಂಧಿ ಯಾದ ಪದ್ಮರಾಜ್.ಆರ್ ರವರಿಗೆ ದ.ಕ.ಲೋಕ ಸಭಾ ಕ್ಷೇತ್ರಕ್ಕೆ ಭಾರತೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿತನ ಲಭ್ಯವಾಗಿದೆ. ಕೆಲವು ವರ್ಷದಿಂದ ಪ್ರಾದೇಶಿಕವಾಗಿ ರಾಜಕಾರಣದಲ್ಲಿ ಸಕ್ರೀಯರಾಗಿರುವ ಯುವ ಉತ್ಸಾಹಿ ಪದ್ಮರಾಜ್, ಪಕ್ಷ ಸಂಘಟನೆಯ ಜೊತೆಗೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಮತ್ತು ಶೋಷಿತ ವಂಚಿತ ಸಮುದಾಯದ ಹಕ್ಕುಗಳಿಗಾಗಿ ದುಡಿಯುತ್ತಾ ಬಂದಿದ್ದು ಜಿಲ್ಲೆಯ ಪರಿಗಣನತ್ಮಕ ಬಿಲ್ಲದ ಸಮುದಾಯದ ಮತಗಳನ್ನು ಕ್ರೋಢಿಕರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಹುಸಂಖ್ಯಾತ ಬಿಲ್ಲವರು ಮತ್ತು ಆರ್ಥಿಕವಾಗಿ,ಆರ್ಥಿಕವಾಗಿ ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯುವ ಶಕ್ತಿ ಪದ್ಮರಾಜ್ ಅವರಲ್ಲಿದೆ ಎಂಬ ಕಾರಣಕ್ಕೆ ಅವರಿಗೆ ಈ ಅವಕಾಶ ಒದಗಿ ಬಂದಿದೆ ಎನ್ನಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ವರ್ಷದ ಹಿಂದೆ ಪದ್ಮರಾಜ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು, ಪದ್ಮರಾಜ್ ಸ್ಥಳೀಯ ಹಿಂದುಳಿದ ವರ್ಗವಾದ ಬಿಲ್ಲವ ಸಮುದಾಯಕ್ಕೆ ನಾರಾಯಣಗುರು ನಿಗಮ ಸ್ಥಾಪನೆ ಬೇಡಿಕೆ ಪ್ರಸ್ತಾಪ ಕೂಡಾ ಮುಂದಿಟ್ಟಿದ್ದರು.