ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಲು ಅಗತ್ಯವಾದಷ್ಟು ಕಾರಣಗಳು ಇವೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಮೂವತ್ತು ದಿನಗಳ ಒಳಗಾಗಿ ನ್ಯಾಯ ಮಂಡಳಿಯನ್ನು ರಚಿಸಬೇಕಾಗುತ್ತದೆ. ಈ ನ್ಯಾಯ ಮಂಡಳಿಯ ಸಮಕ್ಷಮ ತನ್ನನ್ನು ಸಮರ್ಥಿಸಿಕೊಳ್ಳಲು ನಿಷೇಧಿತ ಪಿಎಫ್ಐಗೆ ಅವಕಾಶ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಎಪಿಎಯ ನಿರ್ಧಿಷ್ಟ ಸೆಕ್ಷನ್ ಅಡಿಯಲ್ಲಿ ಮೂವತ್ತು ದಿನ ಮೀರದ ಒಳಗಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ನ್ಯಾಯಮಂಡಳಿ ರಚನೆ ಸಂಬಂಧ ಸರ್ಕಾರ ಕಡ್ಡಾಯವಾಗಿ ಅಧಿಸೂಚನೆಯನ್ನು ಹೊರಡಿಸಬೇಕು.ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಪೊಲೀಸ್ ಇಲಾಖೆಗಳು ದೇಶಾದ್ಯಂತ ಪಿಎಫ್ಐ ಮತ್ತು ತನ್ನ ಅಧೀನ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿವರಗಳನ್ನು ಇದರಲ್ಲಿ ಉಲ್ಲೇಖೀಸಬೇಕು.
ಪಿಎಫ್ಐ ವಿರುದ್ಧದ ಆರೋಪಗಳನ್ನು ಆಲಿಸಿದ ಬಳಿಕ ನ್ಯಾಯಮಂಡಳಿಯು, ‘ನಿಮ್ಮ ಸಂಘಟನೆಯನ್ನು ಏಕೆ ನಿಷೇಧಿಸಬಾರದು’ ಎಂಬುದರ ಬಗ್ಗೆ ಲಿಖಿತವಾಗಿ ಉತ್ತರಿಸುವಂತೆ ಪಿಎಫ್ಐಗೆ ಶೋಕಾಸ್ ನೋಟಿಸ್ ನೀಡುತ್ತದೆ. ಎರಡೂ ಕಡೆಯ ದಾಖಲೆ ಸಲ್ಲಿಕೆಗಳ ಆಧಾರದ ಮೇಲೆ, ಪಿಎಫ್ಐ ಅನ್ನು ಕಾನೂನು ವಿರೋಧಿ ಸಂಘಟನೆ ಎಂದು ಘೋಷಿಸಲು ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಲು ನ್ಯಾಯಮಂಡಳಿ ಕೂಡ ತನಿಖೆ ನಡೆಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಎಫ್ಐನ ಕಾನೂನು ತಂಡಕ್ಕೆ ನ್ಯಾಯಾಧಿಕರಣದ ಮುಂದೆ ತನ್ನ ಪ್ರತಿವಾದವನ್ನು ಮಂಡಿಸಲು ಅವಕಾಶ ನೀಡಲಾಗುತ್ತದೆ. ಅವರ ಪರ ವಾದ ಮಂಡಿಸುವ ವಕೀಲರು ನ್ಯಾಯಾಧಿಕರಣದ ಮುಂದೆ ಸಲ್ಲಿಸಲಾದ ಹಿನ್ನೆಲೆ ಟಿಪ್ಪಣಿ, ಪತ್ರವ್ಯವಹಾರ ಕಡತಗಳು ಮತ್ತು ಇತರ ಪೂರಕ ದಾಖಲೆಗಳನ್ನು ಅಪೇಕ್ಷಿಸಬಹುದು ಎಂದು ಗುರುತು ಬಹಿರಂಗ ಪಡಿಸಲು ನಿರಾಕರಿಸಿದ ವ್ಯತ್ಯಸ್ತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಏಜೆನ್ಸಿಗಳು ಮತ್ತು ರಾಜ್ಯ ಪೊಲೀಸರು ನ್ಯಾಯಾಧಿಕರಣದ ಮುಂದೆ ಸಾಕ್ಷ್ಯಗಳನ್ನು ಪ್ರದರ್ಶಿಸ ಬೇಕಾಗುತ್ತದೆ, ಇದನ್ನು ಪಿಎಫ್ಐನ ಕಾನೂನು ನೆರವು ತಂಡವು ಪಾಟೀಸವಾಲಿಗೆ ಒಳಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸಾಕ್ಷಿಗಳ ಗುರುತನ್ನು “ಮರೆಮಾಚಲು” ಮತ್ತು ಕೆಲವು ದಾಖಲೆಗಳನ್ನು “ಮುಚ್ಚಿದ ಲಕೋಟೆಯಲ್ಲಿ” ಸಲ್ಲಿಸುವಂತೆ ಸರ್ಕಾರವು ನ್ಯಾಯಾಧಿಕರಣಕ್ಕೆ ಮನವಿ ಮಾಡಬಹುದು ಎಂದು ಅಧಿಕಾರಿ ಹೇಳಿದರು. ಈ ಸರ್ವ ಪ್ರಕ್ರಿಯೆ ಆರು ಸೀಮಿತ ಆರು ತಿಂಗಳ ಅವಧಿಗೆ ಮೀರದ ರೀತಿಯಲ್ಲಿ ಪೂರ್ಣಗೊಳ್ಳಬೇಕು.
ಅಂತಿಮವಾಗಿ, ಉಭಯಸ್ತರರ ವಾದಗಳ ಆಧಾರದ ಮೇಲೆ ಪಿಎಫ್ಐ ನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವ ಅಧಿಸೂಚನೆಯನ್ನು ದೃಢೀಕರಿಸುವ ಅಥವಾ ಅದನ್ನು ರದ್ದುಗೊಳಿಸುವ ಆದೇಶವನ್ನು ನ್ಯಾಯಮಂಡಳಿ ಹೊರಡಿಸಬೇಕಾಗುತ್ತದೆ.
ಇನ್ನಷ್ಟು ವರದಿಗಳು
ಮಣಿಪುರ ಹಿಂಸೆ, ಬಿರೇನ್ ಸಿಂಗ್ ಸರ್ಕಾರಕ್ಕೆ 24 ಗಂಟೆಗಳ ಗಡುವು : ಮೈತಿಯಿ ಗುಂಪು; ಮೋದಿ ಭೇಟಿಗೆ ರಾಹುಲ್ ಗಾಂಧಿ ಆಗ್ರಹ.
ಅವರನ್ನು ನ್ಯಾಯಾಲಯಕ್ಕೆ ಎಳೆದು ತರುತ್ತೇವೆ’: ‘ಸಿಖ್’ ಹೇಳಿಕೆ ಕುರಿತು ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ಎಚ್ಚರಿಕೆ.
ಆರೋಗ್ಯ ವಿಮೆಯ ಮೇಲಿನ ತೆರಿಗೆ ದರವನ್ನು ಇಳಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಕರ್ನಾಟಕವು ಇತರ ರಾಜ್ಯಗಳನ್ನು ಕೋರಿದೆ: ರಾವ್.