November 26, 2025

Vokkuta News

kannada news portal

ದುಡಿಯುವ ವರ್ಗದ ಹಿತವೇ ದೇಶದ ಅಭಿವೃದ್ಧಿ, ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕಿದೆ: ಆನ್ಲೈನ್ ಸಂವಾದದಲ್ಲಿ ಸುನಿಲ್ ಕುಮಾರ್ ಬಜಾಲ್.

ದುಡಿಯುವ ವರ್ಗ ಇವತ್ತು ದೇಶದ ಒಳಗೆ ಇಂದು ತೀವ್ರ ಸಂಕಷ್ಟ ಅನುಭವಿಸುತ್ತಾ ಇದೆ, ಶ್ರಮಜೀವಿಗಳು ಅವರ ದುಡಿಮೇ ಅನ್ನುವುದು ಬಹಳ ಮುಖ್ಯ

ವೆಬ್: ಸಮಾಜಿಕ ಜಾಲ ತಾಣ ವಾಟ್ಸ್ ಆ್ಯಪ್ ಹ್ಯಾಂಡಲ್ಸ್ ಪಬ್ಲಿಕ್ ವಾಯ್ಸ್ ಗ್ರೂಪ್ ನಡೆಸಿದ ತಾರೀಕು 25 ನವಂಬರ್ 2025 ರಂದು ರಾತ್ರಿ  08.30 ಕ್ಕೆ ನಡೆದ  ಆನ್ಲೈನ್ ಸಂವಾದ  ಕಾರ್ಯಕ್ರಮದಲ್ಲಿ ಮಾತನಾಡುತ್ತಾ  ದುಡಿಯುವ ವರ್ಗ ಅನುಭವಿಸುತ್ತಿರುವ ದೌರ್ಜನ್ಯಗಳ ಇಂದಿನ ಪರಿಸ್ಥಿತಿ ಮತ್ತು ಪರಿಹಾರ? ಎಂಬ ವಿಷಯದಲ್ಲಿ ಸಿ ಐ ಟಿ ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ದುಡಿಯುವ ವರ್ಗದ ಹಿತವೇ ದೇಶದ ಅಭಿವೃದ್ಧಿ ಎಂಬ ಸೈದ್ಧಾಂತಿಕ ಮಾತಿನ ಕರೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾದ ಎಸ್. ಡಿ. ಟಿ. ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಮತ್ತು ಸಮಾಜ ಸೇವಕ ಅಬ್ದುಲ್ ಸಲಾಂ ಉಚ್ಚಿಲ್  ಭಾಗವಹಿಸಿದರು, ಕಾರ್ಯಕ್ರಮವನ್ನು ರಫೀಕ್ ಪರ್ಲಿಯಾ ನಿರೂಪಿಸಿದರು , ಅಡ್ಮಿನ್ ಸಲೀಮ್ ಪರಂಗಿ ಪೇಟೆ ಉಪಸ್ಥಿತ ಇದ್ದರು.

ಸುನಿಲ್ ಕುಮಾರ್ ಬಜಾಲ್: ದುಡಿಯುವ ವರ್ಗ ಇವತ್ತು ದೇಶದ ಒಳಗೆ ಇಂದು ತೀವ್ರ ಸಂಕಷ್ಟ ಅನುಭವಿಸುತ್ತಾ ಇದೆ, ಶ್ರಮಜೀವಿಗಳು ಅವರ ದುಡಿಮೇ ಅನ್ನುವುದು ಬಹಳ ಮುಖ್ಯ, ಯಾವುದೇ ದೇಶ ಅಥವಾ ಸಮಾಜವನ್ನು ನೋಡುವುದಾದರೆ ಪ್ರತಿ ಒಬ್ಬನ ದುಡಿಮೆಗೆ ಬಾರಿ ಮಹತ್ವ ಇದೆ, ಆದರೆ ಇಂದು ಆ ದುಡಿಮೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ದುಡಿಮೆಗೆ ಪ್ರೋತ್ಸಾಹ ಮಾಡತಕ್ಕಂತಹ ವ್ಯವಸ್ಥೆ ಇಂದು ನಮ್ಮ ಸಮಾಜದ ಒಳಗೆ ಬೇಕಾಗುತ್ತದೆ. ಇದು ಇವತ್ತು ಆಗುತ್ತಾ ಇಲ್ಲ, ಸರ್ಕಾರಗಳು ಕಾರ್ಮಿಕ ವರ್ಗದ ವಿರೋಧಿಯಾಗಿ ವರ್ತನೆ ಮಾಡುತ್ತಿದೆ. ಇದು ಅಪಾಯಕಾರಿ, ಇಡೀ ಸಮಾಜದಲ್ಲಿ ಈ ವರ್ಗದ ಬದುಕು ಬಹಳ ಮುಖ್ಯ. ದೇಶ ಉದ್ಧಾರ ಆಗಬೇಕು, ಬದಲಾವಣೆ ಆಗಬೇಕು..ಎಂಬುದಾಗಿ ಮಾತನಾಡುತ್ತಾರೆ,ಜನರ ಬದುಕು ಉತ್ತಮ ಗೊಲ್ಲದೇ ಯಾವುದೇ ದೇಶ ಅಥವಾ ಸಮಾಜ ಅಭಿವೃದ್ಧಿ ಆಗಲಿಕ್ಡೆಸಾಡ್ಯ ಸಾಧ್ಯವಿಲ್ಲ ಆದುದರಿಂದ ನಾವು ದುಡಿಯುವ ಜನರ ಕಷ್ಟ ನಷ್ಟಗಳಿಗೆ ಸ್ಪಂದನೆ ಮಾಡುವ ಮನೋಭಾವನೆ ಇರಬೇಕು ಮುಖ್ಯವಾಗಿ ನಮ್ಮನ್ನು ಆಳುವ ಕೇಂದ್ರ,ರಾಜ್ಯ ಸರ್ಕಾರಗಳು ಈ ವರ್ಗದ ಪರವಾದ ನೀತಿಗಳನ್ನು ಜಾರಿ ಮಾಡಲಿಕೆ ಸಾಧ್ಯತೆ ಆಗಬೇಕು.ಇಂದು ಸರಕಾರದ ನೀತಿಗಳು ಕಾರ್ಮಿಕ ವಿರೋಧಿ ಆಗಿದೆ., ಇದು ಅಪಾಯಕಾರಿ.

ಸುನಿಲ್ ಕುಮಾರ್ ಬಜಾಲ್: ಯಾವಾಗ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ನಮ್ಮ ದೇಶದ ಒಳಗಡೆ ಪ್ರವೇಶ ಆದವು, ಬಹಳ ಮುಖ್ಯವಾಗಿ ಸಾವಿರದ ಒಂಬೈನೂರ ತೊಂಬತ್ತ ಒಂದು ಈ ಕಾಲಘಟ್ಟದಲ್ಲಿ ಪಿವಿ ನರಸಿಂಹ ರಾವ್ ಸರಕಾರ ಇದನ್ನು ಬಹಳ ವ್ಯಾಪಕವಾಗಿ ನಮ್ಮ ದೇಶದ ಒಳಗಡೆ ತಂದರು, ಇದು ಕಾರ್ಮಿಕ ವರ್ಗಗಳನ್ನು ಬಹಳ ದೊಡ್ಡ ರೀತಿಯ ಹೊಡೆತವನ್ನು ಕೊಟ್ಟಿದ್ದು ಮಾತ್ರವಲ್ಲ ನಮ್ಮ ದೇಶಕೆ ಕೂಡ ಹೊಡೆತ ಬಿತ್ತು. ಈ ದೇಶದ ಒಳಗಡೆ ಒಂದಷ್ಟು ಉತ್ಪಾದನೆ ಆಗಿತ್ತು.ಇಲ್ಲಿನ ಸಾರ್ವಜನಿಕ ರಂಗದ ಉದ್ದಿಮೆಗಳು. ಯಾವಾಗ ಈ ನೀತಿಗಳು ಜಾರಿಯಾದವು, ನಮ್ಮ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ನಾಶ ಮಾಡಲಾಯಿತು, ಎಲ್ಲವನ್ನೂ ಖಾಸಗೀಕರಣ ಉದಾರೀಕರಣ ಜಾಗತೀಕರಣ ಹೆಸರಿನಲ್ಲಿ ಇವತ್ತು ಮುಕ್ತ ಆಮದು ನೀತಿ ಬಂತು, ಈ ಹಿಂದೆ ವಿದೇಶಿ ವಸ್ತುಗಳನ್ನು ಕದ್ದು ಮುಚ್ಚಿ ಪ್ರದರ್ಶನ ಮಾಡಲಾಗುತ್ತಿತ್ತು, ನಂತರ ಈ ವಿದೇಶಿ ವಸ್ತುಗಳು ನಮ್ಮ ದೇಶದಲ್ಲಿ ಇಂದು ಯಥೇಚ್ಚ ವಾಗಿ ಸಿಗುತ್ತಾ ಇದೆ. ಇದೇ ವಸ್ತುಗಳನ್ನು ತಯಾರು ಮಾಡುವ ಕೈಗಾರಿಕೆ ನಾಶವಾದವು, ಕಾರ್ಮಿಕರು ನಷ್ಟ ಹೊಂದಿದರು ,ಇದು ಅಪಾಯಕಾರಿ ಮತ್ತು ಗುರುತಿಸಲು ಸಾದ್ಯವಾಗಬೇಕು.

ಸುನಿಲ್ ಕುಮಾರ್ ಬಜಾಲ್: ನಮ್ಮ ದೇಶದ ಸರಕಾರ ಆಳುವ ವರ್ಗ ಯಾವುದೇ ನೀತಿಯನ್ನು ಜಾರಿ ಮಾಡಿದರೆ ಮೊದಲ ಹೊಡೆತ ಬೀಳುವುದು ಕಾರ್ಮಿಕ ವರ್ಗಕ್ಕೆ ಆಗಿದೆ. ಜಾಗತಿಕ ನೀತಿ ಜಾರಿ ಬಳಿಕ ನಮ್ಮ ದೇಶದ ಅರ್ಥ ವ್ಯವಸ್ಥೆ ನೋಡಿದರೆ ಈ ದೇಶದ ಜನರ ಜೀವನ ಮಟ್ಟ ಹೇಗಿದೆ, ದುಡಿಯುವ ವರ್ಗದ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನಾವು ನೋಡಬೇಕಿದೆ, ಈ ಹಿಂದಿನ ಸರಕಾರಗಳು ಜಾರಿ ಮಾಡಿದ ನೀತಿಯನ್ನು ಇತ್ತೀಚೆಗೆ ಆಡಳಿತಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಶೀಘ್ರ ವಾಗಿ ಅನುಷ್ಠಾನ ಮಾಡಿದರು, ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿ ಹಿಂದಿನ ಸರಕಾರ ನೀತಿ ಜಾರಿ ಮಾಡಿ, ಮತ್ತು ನರೇಂದ್ರ ಮೋದಿ ಸರ್ಕಾರ ಹಿಂದಿನ ಸರಕಾರಕ್ಕಿಂತ ವೇಗವಾಗಿ ನೀತಿಯನ್ನು ಜಾರಿ ಮಾಡಿದೆ. ಸರಕಾರಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿ ಮಾಡುತ್ತಾ ಇದೆ ಹೊರತು ದುಡಿಯುವ ವರ್ಗದ ಪರ ಮಾಡುತ್ತಾ ಇಲ್ಲ.

ಸುನಿಲ್ ಕುಮಾರ್ ಬಜಾಲ್: ಕೇಂದ್ರದಲ್ಲಿ. ಅಧಿಕಾರ ನಡೆಸುತ್ತಿರುವಂತಹ ನರೇಂದ್ರ ಮೋದಿ ಎನ್ಡಿಎ ಸರಕಾರದ ಚರಿತ್ರೆಯನ್ನು ಅರ್ಥ ಮಾಡುವುದರೆ, ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಕಾರ್ಪೊರೇಟ್ ಕಂಪನಿಗಳ ಪರವಾಗಿ ಬಾರಿ ತುತ್ತೂರಿ ಬಾರಿಸಿದರು. ದ್ವಿತೀಯ ಬಾರಿ ಬಂದಾಗ ಅದಕ್ಕಿಂತಲೂ ಶೀಘ್ರವಾಗಿ ನೀತಿಗಳನ್ನು ಜಾರಿ ಮಾಡಲು ಹೊರಟರು, ಎಲ್ಲಿಯವರೆಗೆ ಅಂದರೆ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ಕಾನೂನಗಳನ್ನು ತೆಗದು ಹಾಕಿ ಅದನ್ನು ಸಂಹಿತೆ ಮಾಡಲು ಹೊರಟಿದ್ದಾರೆ. ಇದಕ್ಕೆ ಆ ಕಾಲದಲ್ಲಿ ಭಾರತ ದೇಶದ ಸರ್ವೆಡೆ ಬಹಳ ದೊಡ್ಡ ಪ್ರತಿರೋಧವನ್ನು ಕಾರ್ಮಿಕ ವರ್ಗ, ಸಂಘಟನೆಗಳು, ಸೈಧಾಂತಿಕ ಭಿನ್ನಾಭಿಪ್ರಯ ಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ , ಸಂಹಿತೆಗಳನ್ನು ಮಾಡುವುದರ ವಿರುದ್ಧ, ಕೇಂದ್ರ ಸರಕಾರದ ಪಿತೂರಿ ವಿರುದ್ಧ ಒಂದು ಬೃಹತ್ ಧ್ವನಿಯನ್ನು ಅಖಿಲ ಭಾರತ ಮುಷ್ಕರ ನಡೆಸುವ ಮಟ್ಟಕ್ಕೆ ಆಗಿತ್ತು.

ಸುನಿಲ್ ಕುಮಾರ್ ಬಜಾಲ್: ಕಾರ್ಮಿಕ ಕಾನೂನಗಳಲ್ಲಿ ತೆಗೆದು ಹಾಕಿ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರುವ ಈ ಪ್ರಯತ್ನ ಇದು ಅತ್ಯಂತ ಅಪಾಯಕಾರಿ. ಈ ಸಂಹಿತೆಗಳು ಇತ್ತೀಚೆಗೆ ಜಾರಿ ಆಗಿದೆ, ಜನರು ಇದಕ್ಕೆ ಬಹಳ ದೊಡ್ಡ ಪ್ರಚಾರ ಕೂಡ ಕೊಟ್ಟಿದ್ದಾರೆ, ಸಾಮಾನ್ಯ ಜನರು ಕೂಡ ಈ ಸಂಹಿತೆ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಕಾರ್ಮಿಕರಿಗೆ ಉತ್ತಮ ಸವಲತ್ತು ಬಗ್ಗೆ ಮಾತನಾಡಿದ್ದಾರೆ, ಆದರೆ ಬಹಳ ಸರಳವಾಗಿ ಹೇಳುವುದಾದರೆ, ಕಾನೂನು ಅಂದರೆ ಓರ್ವ ಬಡಪಾಯಿ ಕಾರ್ಮಿಕ ತನ್ನ ಹಕ್ಕುಗಳಿಗಾಗಿ ಕೋರ್ಟಿಗೆ ಹೋದರೆ ಆ ಹಕ್ಕುಗಳು ದೊರೆಯಲು ಬೇಕು, ಸಂಹಿತೆ ಅಂದರೆ ಹಾಗಲ್ಲ, ಅದು ಒಂದು ಸವಲತ್ತಿನ ಪ್ರಕಟಣೆ, ಅದು ಲಭ್ಯ ಆಗಲೋ ಬಹುದು ಆಗದೆ ಇರಲೂ ಬಹುದು. ಆದುದರಿಂದ ಈ ಸಂಹಿತೆ.ಎಷ್ಟೋ ಅಪಾಯಕಾರಿ ಎಂಬುದನ್ನು ನೋಡಬೇಕಾಗುತ್ತದೆ. ಅಂತಃ ಕಾರ್ಮಿಕ ವಿರೋಧಿ ನೀತಿಯನ್ನು ಜಾರಿ ಮಾಡಿದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರಬಾರದು ಎಂದು ಹೇಳಿ ಬಹು ದೊಡ್ಡ ಮಟ್ಟದ ಒಂದು ಕ್ಯಾಂಪೇನ್ ಅನ್ನು ಈ ಕಾರ್ಮಿಕ ವರ್ಗ ನಡೆಸಿತ್ತು. ಆದರೆ ವರ್ಕ್ ಔಟ್ ಆಗಿದೆ,ಆದರೆ ಬಹು ದೊಡ್ಡ ಹೊಡೆತ ಬಿದ್ದಿದೆ. ನಾಲ್ಕು ನೂರು ಸ್ಥಾನ ಗಳಿಸುತ್ತೇವೆ ಎಂದು, ಮತ್ತೆ ನಾವು ಕಾರ್ಮಿಕ ನೀತಿ ಜಾರಿಗೆ ತರುತ್ತೇವೆ, ಈ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಬೊಗಳೆ ಬಿಟ್ಟಿದ್ದಾರೆ, ಆದರೆ ಭಾರತದ ಜನತೆ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ,ಮೂರನೇ ಬಾರಿಗೆ ಅಧಿಕಾರಕೆ ಬಂದಿದ್ದಾರೆ ಆದರೆ ಅವರ ಓಟಿನ ಸರಾಸರಿ, ಅವರು ಗಳಿಸಿ ದ. ಸ್ಥಾನಗಳು ನೋಡಬೇಕಾಗುತ್ತದೆ, ಎರಡು ಪಕ್ಷಗಳು ಅವರಿಗೆ ಧೈರ್ಯ ಕೊಡದೆ ಇದ್ದರೆ ಮೂರನೇ ಬಾರಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಾ ಇರಲಿಲ್ಲ, ಅಂತಹ ಪರಿಸ್ಥಿತಿಯನ್ನು ಕೂಡ, ಇದೇ ಕಾರ್ಪೋರೇಟ್ ಕಂಪನಿಗಳು ಬಂಡವಾಳ ಶಾಹಿಗಳು ತಾಕೀತು ಮಾಡಿದ್ದು ಏನೆಂದರೆ ನೀವು ಅಧಿಕಾರಕ್ಕೆ ಬಂದ ನೂರು ದಿವಸದ ಒಳಗಡೆ ನೀವು ಸಂಹಿತೆಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ, ಅದರ ಭಾಗವಾಗಿ ತುರಾತುರಿಯಲ್ಲಿ ನವೆಂಬರ್ 21ಕ್ಕೇ ಪಾರ್ಲಿಮೆಂಟ್ ನಲ್ಲಿ ಚರ್ಚೆ ಇಲ್ಲದೆ, ಕಾರ್ಮಿಕ ಸಂಘಟನೆಗಳು ವಿಶ್ವಾಸಕ್ಕೆ ತೆಗೆಯಡೇ, ವಿಪಕ್ಷಗಳುನ್ನು ವಿಶ್ವಾಸಕ್ಕೆ ಪಡೆಯದೇ, ಸರ್ವಧಿಕಾರಿ ಆಗಿ ಇಡೀ ದೇಶದಲ್ಲಿ ಈ ಸಂಹಿತೆಯನ್ನು ಜಾರಿ ಮಾಡಿದೆ. ಇದು ನಿಜಕ್ಕೂ ಅತ್ಯಂತ ಅಪಾಯಕಾರಿ.

ಸುನಿಲ್ ಕುಮಾರ್ ಬಜಾಲ್:

ನಾನು ಆಗಲೇ ಒಂದು ಮಾತನಾಡಿದ ಹಾಗೆ, ಈ ಕಾರ್ಮಿಕ ಸಂಹಿತೆ ಗಳಿಗೆ ಸಂಬಂಧಪಟ್ಟು ಎರಡನೇ ಬಾರಿಗೆ ಅಧಿಕಾರಕೆ ಬಂದ ಮೋದಿ ಸರಕಾರ ಕೊನೆ ಗಳಿಗೆಯಲ್ಲಿ ಅಂದರೆ 2019 ರಲಿ ವೇತನ ಸಂಹಿತೆಯನ್ನು ಅವರು ಜಾರಿ ಮಾಡಲು ಹೊರಟರು ಅದರ ನಂತರ ಎರಡು ಸಾವಿರದ ಇಪ್ಪತ್ತರಲ್ಲಿ ಮೂರು ಸಂಹಿತೆಯನ್ನು ಜಾರಿ ಮಾಡಲು ಹೊರಟರು ಆದರೆ ವಿಪರ್ಯಾಸ ಏನೆಂದರೆ ಕೇಂದ್ರ ಸರ್ಕಾರ ಯಾವುದನ್ನು ಕೂಡ ಜಾರಿ ಮಾಡಿದೆ ಎಂದು ಹೇಳಿದರೂ ಕೂಡಾ ಕೆಳಗಡೆ ಇರುವ ರಾಜ್ಯ ಸರಕಾರ ಅದಕ್ಕೆ ಫ್ರೇಮ್ ವರ್ಕ್ ಮಾದ ಬೇಕಾಗುತ್ತದೆ. ಆದರೆ ಯಾವ ರಾಜ್ಯ ಸರಕಾರಗಳು ಕೂಡ ಮಾಡಲಿಕ್ಕೆ ತಯಾರಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯ ಸರಕಾರಗಳು ಸಮೇತ ಈ ಸಂಹಿತೆಗಳಿಗೆ ಸಂಭಂದ ಪಟ್ಟು ಪ್ರೇಮ್ ವರ್ಕ್ ಮಾಡಲಿಕ್ಕೆ ತಯಾರಿಲ್ಲ. ಅವರು ಅದಕ್ಕೆ ನೀತಿ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಯಾಕೆ ತಯಾರಿಲ್ಲ ಅಂದರೆ ಇಡೀ ದೇಶದಲ್ಲಿ ಬಂದಿರತಕ್ಕಂತಹ ಹೋರಾಟಗಳು ಅದು ಅಲ್ಲಿಯ ತನಕ,2019ರಲ್ಲಿ ಇವರು ಜಾರಿ ಮಾಡಲು ಹೊರಟ ಇದೇ ಸಂಹಿತೆಯನ್ನು,ಮೊನ್ನೆ ತನಕ ನಾವು ತಡೆ ಮಾಡಲು ಸಾಧ್ಯವಾಗಿತ್ತು. ಜುಲೈ 09 ನೆ ತಾರೀಕಿನ ಅಖಿಲ ಭಾರತ ಮುಷ್ಕರದಲೀ ಭಾರತ ದೇಶದ ಒಳಗಡೆ ಇಪ್ಪತ್ತೈದು ಕೋಟಿ ಕಾರ್ಮಿಕರು ಸ್ವತಃ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಈಗೆ ತಡೆ ಮಾಡ್ಲಿಕ್ಕೆ ಸಾಧ್ಯತೆ ಆಗಿದೆ.
ಎರಡನೆಯದಾಗಿ,ಇವರು ಯಾಕೆ ಜಾರಿ ಮಾಡಿದರು ಎಂದು ಕೇಳುವುದಾದರೆ ಬಿಹಾರ ಚುನಾವಣೆಯಲ್ಲಿ ಬಂದಿರತಕ್ಕಂತಹ ಫಲಿತಾಂಶ ಇವರಿಗೆ ಅಧಿಕಾರದ ಮದ ಏರಿಸಿದೆ. ಯಾಕೆಂದರೆ ಇನ್ನು ನಾವು ಏನು ಮಾಡಿದರೂ ನಡೆಯುತ್ತದೆ ಇಡೀ ದೇಶದ ಒಳಗಡೆ ಎಂಬುದು. ಬಿಹಾರದಲ್ಲಿ ಹೇಗೆ ಗೆದ್ದರು ಎಂಬುದು ಇಂದು ದೇಶದ ಮಟ್ಟದಲ್ಲಿ ಎಲ್ಲರಿಗೂ ಗೊತ್ತಿದೆ.ಅಲ್ಲಿ ಮತಗಳ್ಳತನ ಮಾಡಿದ್ದು,ಜಾತಿ ಧರ್ಮದ ಸಮೀಕರಣ, ಅದಕ್ಕೆ ರಾಜಕಾರಣ ಮಾಡಿಕೊಂಡು ಅಲ್ಲಿಯ ದುಡಿಯುವ ವರ್ಗದ ದಾರಿ ತಪ್ಪಿಸಿಕೊಂಡದ್ದು, ಕೊನೆ ಗಳಿಗೆಯಲಿ ಮಹಿಳೆಯರಿಗೆ ಹಣ ನೀಡಿದ್ದು, ಸರಕಾರವೇ ಮುಂದೆ ನಿಂತು ಅನ್ಯಾಯ ನಡೆಸಿ, ಏನು ಬಿಹಾರದಲ್ಲಿ ಬಿಜೆಪಿ ಎನ್ಡಿಎ ಕೂಟ ಗೆದ್ದಿರುವುದು ಜನರ ಬದುಕನ್ನು ಉತ್ತಮ ಪಡಿಸಲು ಎಂಬುದು ಅಲ್ಲ, ಇವರು ಅನ್ಯಾಯ ಮಾಡುವ ಮೂಲಕ ಗೆದ್ದು ಬಂದಿದ್ದಾರೆ ನಾವು ಈ ವಿಚಾರವನ್ನು ತಿಳಿದು ಕೊಳ್ಳಬೇಕು, ಈ ದೇಶದ ಒಳಗಡೆ ಬಿಹಾರದಲ್ಲಿ ಎನ್ಡಿಎ ಕೂಟ ಗೆದ್ದಿದೆ ಬಿಜೆಪಿ ಗೆದ್ದಿದೆ ಎನ್ನುವ ಪೂರಕ ವಾತಾವರಣ ಇದೆ ಎನ್ನುವುದು ಅಲ್ಲ,ಬಿಜೆಪಿಯ ವಿರುದ್ಧ ಇಡೀ ದೇಶದ ಒಳಗಡೆ ಬಹಳ ದೊಡ್ಡ ಮಟ್ಟದಲ್ಲಿ ಇವತ್ತು ಜನ ಎದ್ದಿದ್ದಾರೆ ಎಂಬುದು ಆಗಿದೆ ,ಮುಂದಿನ ದಿನಗಳಲ್ಲಿಖಂಡಿತ ಉತ್ತರ ಈ ದೇಶದ ಜನ ಕೊಟ್ಟೆ ಕೊಡುತ್ತಾರೆ.

ಸುನಿಲ್ ಕುಮಾರ್ ಬಜಾಲ್:ನೋಡಿ ಮುಂದಿನ ದಿನಗಳಲ್ಲಿ ನಮ್ಮ ದೇಶದ ಕಾರ್ಮಿಕ ವರ್ಗ ಎಂತಹ ಅಪಾಯವನ್ನು ಎದುರಿಸಲಿಕೆ ಇದೆ ನಾವು ಅರ್ಥ ಮಾಡಲಿಕೆ ಸಾಧ್ಯತೆ ಆಗಬೇಕು. ನೂರಾರು ಸಂಖ್ಯೆಯ ಕಾರ್ಮಿಕ ಕಾನೂನುಗಳು ಇದೆ ಅದರಲ್ಲಿ ಅತ್ಯಂತ ಪ್ರಮುಖ ಆದಂತಹ 29 ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ ನಾಲ್ಕು ಸಂಹಿತೆಗಳನ್ನು ಮಾಡಲಿಕೆ ಹೊರಟಿದ್ದಾರೆ.ಮುಖ್ಯವಾಗಿ ವೇತನ ಸಂಹಿತೆ,ಕೈಗಾರಿಕೆ ಸಂಬಂಧಗಳ ಸಂಹಿತೆ,ಸಾಮಾಜಿಕ ಭದ್ರತಾ ಸಂಹಿತೆ, ಔದ್ಯೋಗಿಕ ಸುರಕ್ಷಿತ ಸಂಹಿತೆ, ಆರೋಗ್ಯ ಕೆಲಸಗಳ ಸುರಕ್ಷಾ ಸಂಹಿತೆ ಗಳನ್ನೂ ಮಾಡಲಾಗಿದೆ. ಅದರ ಹಿಂದೆ ಇಪ್ಪತ್ತೊಂದು ಪ್ರಮುಖ ಕಾನೂನುಗಳನ್ನು ನಾಶ ಮಾಡಲಾಗಿದೆ, ಮುಂದಕ್ಕೆ ಇದರ ಪರಿಣಾಮ ಮುಂದೆ ಕನಿಷ್ಠ ಕೂಲಿ ಎಂಬುದು ಇಲ್ಲ, ಕಾರ್ಮಿಕರ ಬೇಡಿಕೆ ಇಡುವ ಹಾಗಿಲ್ಲ, ಮಾಲೀಕರ ಜೊತೆ ಯಾವುದೇ ಒಪ್ಪಂದ ಇಲ್ಲ, ಕಾರ್ಮಿಕರು ತನಗೆ ಅನ್ಯಾಯ ಆದರೆ ಬೀದಿಗೆ ಇಳಿದು ಹೋರಾಟ ಮಾಡುವ ಹಾಗಿಲ್ಲ,ಮುಷ್ಕರ ಹೂಡುವ ಹಾಗಿಲ್ಲ, ಮುಖ್ಯ ವಾಗಿ ಕಾರ್ಮಿಕರೂ ಸಂಘ ಕಟ್ಟುವ ಹಾಗಿಲ್ಲ, ಈ ರೀತಿಯಾಗಿ ಕಾರ್ಮಿಕರಿಗೆ ಎಲ್ಲಾ ಹಕ್ಕುಗಳನ್ನು ಮೊಟಕು ಗೊಳಿಸಿ, ಅವರನ್ನು ಮತ್ತೆ ಗುಲಾಮಗಿರಿಗೆ ಕೊಂಡು ಹೋಗುವ ಕೆಲಸವನ್ನ ಈ ಕೇಂದ್ರ ಸರಕಾರ ಮಾಡಲಿಕ್ಕೆ ಹೊರಟಿದೆ. ಆದುದರಿಂದ ಈ.ಸಂಹಿತೆಗಳನ್ನು ವಾಪಾಸು ಪಡೆಯಬೇಕು, ಸಿದ್ದರಾಮಯ್ಯ ಸರಕಾರಕ್ಕೆ ನಾವು ಒತ್ತಾಯ ಮಾಡುತ್ತಾ ಇದ್ದೇವೆ , ಈ ಸಂಹಿತೆಗಳಿಗೆ ನೀವು ಫ್ರೇಮ್ ವರ್ಕ್ ಮಾಡಬಾರದು, ನೀತಿ ನಿಯಮಗಳನ್ನು ಮಾಡಬಾರದು ಎಂಬುದಾಗಿದೆ.

ಸುನಿಲ್ ಕುಮಾರ್ ಬಜಾಲ್:

ಬಹಳ ಮುಖ್ಯವಾಗಿ ಕೇಂದ್ರ ಸರಕಾರ ಕಾರ್ಮಿಕ ವರ್ಗಕೆ ಎಷ್ಟು ದೊಡ್ಡ ಅನ್ಯಾಯ ಮಾಡಿದೆ
ನಮ್ಮ ರಾಜ್ಯವನ್ನು ಆಳುವ ರಾಜ್ಯ ಸರಕಾರ.ಕೂಡ ತುಂಬ ಅನ್ಯಾಯ ಮಾಡಿವೆ. ಬಹಳ ಮುಖ್ಯವಾಗಿ ಹಿಂದೆ ಬಿಜೆಪಿ ಸರಕಾರ ರಾಜ್ಯದಲಿ ಅಧಿಕಾರ ಇದ್ದಾಗ ಎಷ್ಟೊಂದು ಜನ ವಿರೋಧಿಯಾಗಿ ವರ್ತನೆ ಮಾಡಿದೆ ಬಹಳ ಮುಖ್ಯವಾಗಿ ಕೆಲಸದ. ಅವಧಿಯನ್ನ ಎಂಟು ಗಂಟೆಯ ದುಡಿಮೆಯನ್ನು ಹನೆರಡು ಗಂಟೆಗೆ ಏರಿಸಿ ಇರುವಂತದ್ದು. ಅದೇ ರೀತಿಯಲ್ಲಿ ರಾತ್ರಿ ಪಾಳಿಯಲ್ಲಿ ಹೆಣ್ಣು ಮಕ್ಕಳನ್ನು ದುಡಿಸಬೇಕು ಎನ್ನುವುದು, ಅದೇ ರೀತಿ ಕನಿಷ್ಠ ಕೂಲಿ ವಿಷಯದಲ್ಲಿ ಇಡೀ ರಾಜ್ಯದ ಕಾರ್ಮಿಕರಿಗೆ ಬಹಳ ದೊಡ್ಡ ರೀತಿಯ ಅನ್ಯಾಯ ಮಾಡಿರುವುದು ನಾವು ನೋಡಿದ್ದೇವೆ. ಆದರೆ ಆ ಸರಕಾರ ಬಂದು ಅಂತಹ ಕಾರ್ಮಿಕ ವಿರೋಧಿ ನಡೆ ಹೊಂದಿದ ಬಿಜೆಪಿ ಸರ್ಕಾರ ಬೇಡ ಎಂದು ರಾಜ್ಯದ ಜನತೆ ದೊಡ್ಡ ರೀತಿಯೇ ಮತ ಚಲಾವಣೆ ಮಾಡಿತು. ಸಿದ್ದ ರಾಮಯ ಸರಕಾರ ಅಧಿಕಾರಕ್ಕೆ ಬಂದು, ಈ ಸರಕಾರ ಕಾರ್ಮಿಕ ವಿರೋಧಿ ನಿಯಮಗಳನ್ನು ಹಿಂಪಡೆಯ ಬೇಕಿತ್ತು, ಏನು ಮಾಡಲಿಲ್ಲ .ಕೆಲಸದ ಅವಧಿ , ರಾತ್ರಿ ಪಾಳಿ ಯಲ್ಲಿ ಹೆಂಗಸರು ದುಡಿಯುವ ನಿಯಮ ಬದಲಿಸಿಲ್ಲ, ಕನಿಷ್ಠ ಕೂಲಿ ಬಗ್ಗೆ ಸರಕಾರ ಮಾತನಾಡುತ್ತ ಇಲ್ಲ, ರಾಜ್ಯದ ಕಾಂಗ್ರೆಸ್ ಸರಕಾರ ಕೊಡ ಕಾರ್ಮಿಕ ರ ವಿರುದ್ಧ ವರ್ತನೆ ಮಾಡುತ್ತಾ ಇದೆ. ಎಂಬುದಾಗಿ ಹೇಳಿದರು.