September 7, 2024

Vokkuta News

kannada news portal

ಸೆ.10, ಬೆಂಗಳೂರಿನಲ್ಲಿ ಎಸ್ಸೆಸ್ಸೆಫ್ ಸಂವಿಧಾನ್ ಯಾತ್ರಾ,ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನ.

ರಾಷ್ಟ್ರ ಮಟ್ಟದ ಸುನ್ನೀ ಉಲಮಾ ಪ್ರಮುಖರು,ಸಂಘಟಕರು,ಸಂಘಟನೆಗಳ ಮುಖ್ಯಸ್ಥರು,ವಿಧ್ಯಾರ್ಥಿಗಳು, ಜನಪ್ರತಿನಿಧಿಗಳು ಭಾಗಿ.

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್‌ಎಸ್‌ಎಫ್) ತನ್ನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ, ಸೆಪ್ಟೆಂಬರ್ 10 ರಂದು ಅರಮನೆಯ ಕೃಷ್ಣ ವಿಹಾರ ಮೈದಾನದಲ್ಲಿ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನವನ್ನು ಆಯೋಜಿಸಲಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌.ಎಸ್‌.ಎಫ್ ರಾಜ್ಯ ಕಾರ್ಯದರ್ಶಿ ಸೂಫಿಯಾನ್ ಸಖಾಫಿ, “ಎಸ್‌ಎಸ್‌ಎಫ್‌ನ ಸಾಂವಿಧಾನ್ ಯಾತ್ರೆಯು ಕಾಶ್ಮೀರದಿಂದ ಪ್ರಾರಂಭವಾಗಿ ಮತ್ತು ಅದರ ಸಮಾರೋಪ ಇಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದೆ” ಎಂದು ಹೇಳಿದರು.

ಪ್ರತಿಷ್ಠಿತ ಮಹಾ ಸಮ್ಮೇಳನವನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದು, ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷರಾದ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ, ಭಾರತೀಯ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರು ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಭಾರತೀಯ ಗ್ರಾಂಡ್ ಮುಫ್ತಿ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಗೃಹ ಸಚಿವ ಜಿ.ಪರಮೇಶ್ವರ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ತಮಿಳುನಾಡು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯದರ್ಶಿ ಗಿಂಜಿ ಮಸ್ತಾನ್, ಸಂಸದ ಟಿ.ಎನ್.ಪ್ರತಾಪನ್ ರವರು ಅತಿಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದ ಸಾಂಪ್ರದಾಯಿಕ ಸುನ್ನಿ ಮುಸ್ಲಿಂ ವಿಭಾಗದ ವಿದ್ಯಾರ್ಥಿ ಸಂಘಟನೆ, ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ತನ್ನ ಸುವರ್ಣ ಮಹೋತ್ಸವ ಆಚರಣೆಯ ಪೂರ್ವಭಾವಿಯಾಗಿ ಸಂವಿಧಾನ ಯಾತ್ರೆ ಎಂಬ ಹೆಸರಿನ ರಾಷ್ಟ್ರವ್ಯಾಪಿ ರ್ಯಾಲಿಯನ್ನು ನಡೆಸಿದೆ.

ಆಗಸ್ಟ್ 12 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀ ನಗರದಲ್ಲಿ ಹಜರತ್‌ಬಾಲ್ ಮಸೀದಿ ಇಮಾಮ್ ಮುಫ್ತಿ ಬಿಲಾಲ್ ಅಹ್ಮದ್ ಅವರು ಧ್ವಜಾರೋಹಣ ನೆರವೇರಿಸಿದ ರ‍್ಯಾಲಿಗೆ ಎಸ್‌ಎಸ್‌ಎಫ್ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ನಯೀಮಿ ಚಾಲನೆ ನೀಡಿದ್ದರು

ಸಂವಿಧಾನ ಯಾತ್ರೆಯು 22 ರಾಜ್ಯಗಳನ್ನು ಹಾದು ಹೋಗಿದ್ದು, 33 ಕೇಂದ್ರಗಳಲ್ಲಿ ಸ್ವಾಗತವನ್ನು ಏರ್ಪಡಿಸಲಾಗಿತ್ತು ಎಂದು ಎಸ್‌ಎಸ್‌ಎಫ್ ಮುಖಂಡರು ತಿಳಿಸಿದ್ದಾರೆ. ಎಸ್.ಎಸ್. ಎಫ್ ದೇಶಾದ್ಯಂತ ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಪರಿಹಾರ ಆಗ್ರಹಿಸುತ್ತಿದೆ. “ನಾವು ಯಾತ್ರೆಯ ಸಮಯದಲ್ಲಿ ವಿವಿಧ ರಾಜ್ಯಗಳ ಪ್ರಮುಖ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಗೆ ಭೇಟಿ ನೀಡುತ್ತಿದ್ದೇವೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಿದ್ದೇವೆ.ಧಾರ್ಮಿಕ ಸಾಮರಸ್ಯದ ಸಭೆಗಳು ಮತ್ತು ಗ್ರಾಮದ ಜನರು ಹಾಗೂ ಶೈಕ್ಷಣಿಕ ತಜ್ಞರೊಂದಿಗೆ ಸಭೆಗಳು ನಮ್ಮ ಕಾರ್ಯಸೂಚಿಯಲ್ಲಿದೆ ಎಂದು ಡಾ.ನಯೀಮಿ ಯಾತ್ರೆಯ ವಿವಿಧ ಆಯೋಜನೆಯ ಹಂತದಲ್ಲಿ ಮಾಹಿತಿ ನೀಡಿದ್ದರು.

ಎಸ್.ಎಸ್. ಎಫ್ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ಫರೂಕ್ ನಯೀಮ್ ರವರು ಉತ್ತರ ಪ್ರದೇಶದ ಸಭೆಯೊಂದರಲ್ಲಿ ಸಂವಿಧಾನ್ ಯಾತ್ರೆಯ ಬಗ್ಗೆ ಭಾಷಣ.

ಸಂವಿಧಾನ ಯಾತ್ರೆಯು ಅಲ್ಪಸಂಖ್ಯಾತರು ಮತ್ತು ದಲಿತರ ಶೈಕ್ಷಣಿಕ ಉನ್ನತಿಗೆ ಯೋಜನೆಗಳು ಮತ್ತು ಯೋಜನೆಗಳನ್ನು ರೂಪೀಕರಿಸುತ್ತದೆ, ಯಾತ್ರೆಯು ಉದ್ಯೋಗ ವಲಯಕ್ಕೆ ಸಮಗ್ರ ಪ್ರಸ್ತಾವನೆಗಳನ್ನು ಸಹ ಸೂಚಿಸಲಿದೆ ಮತ್ತು “ನಾವು ವಿವಿಧ ರಾಜ್ಯಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದರ ಹೊರತಾಗಿ ವಿದ್ಯಾರ್ಥಿವೇತನ ಮತ್ತು ಅಧ್ಯಯನ ಸಾಮಗ್ರಿಗಳನ್ನು ವಿತರಿಸುತ್ತಿದ್ದೇವೆ” ಎಂದು ಡಾ. ನಯೀಮಿ ಮಾಹಿತಿ ನೀಡಿದ್ದರು.

ಎಸ್‌ಎಸ್‌ಎಫ್ ರಾಷ್ಟ್ರೀಯ ಮುಖಂಡರಾದ ನೌಶಾದ್ ಆಲಂ ಮಿಸ್ಬಾಹಿ, ಸುಹೈರುದ್ದೀನ್ ನೂರಾನಿ, ಉಬೈದುಲ್ಲಾ ಸಖಾಫಿ, ಕಮರ್ ಸಖಾಫಿ, ಮುಈನುದ್ದೀನ್ ತ್ರಿಪುರ ಮತ್ತು ದಿಲ್ಶಾದ್ ಕಾಶ್ಮೀರಿ, ಡಾ.ನಯೀಮಿ ಯಾತ್ರೆಯಲ್ಲಿ ಭಾಗವಹಿಸಿದ್ದರು.