June 13, 2024

Vokkuta News

kannada news portal

ದೇಶದ ಸಂವಿಧಾನ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತದೆ. ಎಸ್ಸೆಸ್ಸೆಫ್ ಸಮ್ಮೇಳನದಲ್ಲಿ ಸಿದ್ದರಾಮಯ್ಯ.

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಐವತ್ತನೇ ವಾರ್ಷಿಕ ಸ್ಮರಣಾರ್ಥ ಇಂದು ಬೆಂಗಳೂರಿನಲ್ಲಿ ನಡೆಯುವ ಸಂವಿಧಾನ ಯಾತ್ರೆ ಸಮಾರೋಪ ಸಮಾರಂಭ ಗೋಲ್ಡನ್ ಫಿಫ್ಟಿ ಮಾಹ ಸಮ್ಮೇಳನವನ್ನು ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷರಾದ ಜೈನುಲ್ ಉಲಮಾ ಅಬ್ದುಲ್ ಹಮೀದ್ ಉಸ್ತಾದ್ ಮಾಣಿ ರವರು ಉದ್ಘಟಿಸಿದರು ಇಂಡಿಯನ್ ಗ್ರಾಂಡ್ ಮೂಫ್ತಿ ಎ. ಪಿ. ಅಬೂಬಕ್ಕರ್ ಅಹಮದ್ ಮುಸ್ಲಿಯಾರ್ ಕಾಂತಪುರಂ ರವರು ಪ್ರಮುಖ ಭಾಷಣ ಗೈದು ಪವಿತ್ರ ಕುರ್ ಆನ್ ನ ಬಹು ಮಹತ್ವದ ಅಧ್ಯಾಯ ಸೂರ ಫಾತಿಹದ ಸೂಕ್ತ ನಮ್ಮನ್ನು ಸತ್ಪಥಲ್ಲಿ ಮುನ್ನಡೆಸು ಎಂದಾಗಿದೆ. ಮನುಷ್ಯನು ಸಮೂಹ ಜೀವಿ, ಮನುಷ್ಯನು ಸಮೂಹಕ್ಕೆ ಬೇಕಾಗಿ ಜೀವಿಸಬೇಕು, ಪ್ರವರ್ಥಿಸಬೇಕು. ಸಹಜೀವಿಯೊಂದಿಗೆ ಬೆರೆತು ಜೀವಿಸಬೇಕಿದೆ.ಸಮೂಹವು ಒಂದಾಗಿ ನಿಂತರೆ, ಕಾರ್ಯನುಷ್ಟಾನ ಸಾದ್ಯವಿದೆ ಎಂದರು,ಒಂದು ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉದ್ದೇಶಿಸಿ ಜೀವಿಸಿದರೆ ಸಾಲದು ಎಂದು ಪವಿತ್ರ ಕುರ್ ಆನ್ ಸೂಕ್ತಗಳು ನಮಗೆ ಕಲಿಸುತ್ತದೆ, ಪ್ರವಾದಿಯವರು ಕಲಿಸಿಕೊಟ್ಟ ಮಾರ್ಗವನ್ನು ಅವರ ಹಿಂಬಾಲಕರು ಮತ್ತು ಅವರಿಂದ ಅವರ ಹಿಂಬಾಲಕರಾದಿಯಾಗಿ ತಲುಪಿದ ಚರ್ಯೆಯನ್ನು ನಾವು ಅನುಸರಿಸಿ, ಈ ಲೋಕದ ಸರ್ವರಿಗೂ ಗುಣ ನೀಡುವ ಅಲ್ಲಾಹನ ಧರ್ಮವನ್ನು ಪಾಲಿಸಿವರು ಮುಸ್ಲಿಮ್ ಜನಾಂಗ ವಾಗಿದೆ ಎಂದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಸುನ್ನೀ ಸ್ಟೂಡೆಂಟ್ ಒಕ್ಕೂಟವು ಕಳೆದ ಐವತ್ತು ವರ್ಷಗಳಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ರಹಿತವಾಗಿ ನಡೆದು ಕೊಂಡು ಬರುಟ್ಟಿರುವುದು ಸಂತೋಷ ತಂದಿದೆ. ಸುನ್ನೀ ಒಕ್ಕೂಟದ ಸರ್ವ ವಿಧ್ಯಾರ್ಥಿಗಳಿಗೆ ಧನ್ಯವಾದಗಳು. ಈ ದೇಶ ಅನೇಕ ಧರ್ಮಗಳು,ಜಾತಿಗಳು ಭಾಷೆಗಳು ಸಂಸ್ಕೃತಿಗಳಿಂದ ಕೂಡಿದೆ ಅದುವೇ ನಮ್ಮ ಶಕ್ತಿ . ಈ ದೇಶ ನೂರ ನಲವತ್ತು ಕೋಟಿ ಜನರ ದೇಶ,ಮತ್ತು ಈ ದೇಶ ಕೇವಲ ಕೆಲವರ ದೇಶ ಮಾತ್ರಾ ಅಲ್ಲ. ಈ ದೇಶದ ಐಕ್ಯತೆ,ಸಾರ್ವ ಬೌಮತೆ ಯನ್ನೂ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ದೇಶದ ಸಂವಿಧಾನ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತದೆ. ಸುನ್ನೀ ಒಕ್ಕೂಟದ ಈ ಸಮ್ಮೇಳನಕ್ಕೆ ಶುಭವನ್ನು ಕೋರುತ್ತೇನೆ ಎಂದು ಹೇಳಿದರು.

ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಶ್ರೀ ಯು.ಟಿ ಖಾದರ್ ರವರು ಮಾತನಾಡಿ ಕಳೆದ ಐವತ್ತು ವರ್ಷದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಗುರು ಹಿರಿಯರ ಮತ್ತು ಉಳಾಮಗಳ ಮಾರ್ಗದರ್ಶನದಲ್ಲಿ ಸಂಘಟನಾ ಶಕ್ತಿಯಿಂದ ಬೆಳೆದು ಬಂದ ಎಸ್.ಎಸ್. ಎಫ್ ಸಂಘಟನೆಯ ಸಮ್ಮೇಳನಕ್ಕೆ ಶುಭವನ್ನು ಕೋರಿದರು. ಸಂಘಟನೆ ಮುಂದಿನ ಐವತ್ತು ವರ್ಷಕ್ಕೆ ಬೇಕಾದ ಸರ್ವ ತಯಾರಿಯನ್ನು ಮಾಡಬೇಕು ಮತ್ತು ಸಂಘಟನೆಯ ಉದ್ದೇಶಿತ ಗುರಿಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.ಉಳಾಮಾಗಳ ಮಾರ್ಗ ದರ್ಶನದಲ್ಲಿ ಇರುವ ಒಂದು ಸಂಘಟನೆಯು ಪ್ರಯತ್ನಿಸಿದರೆ ಒಂದು ಶಕ್ತಿ ಹೇಗೆ ವಿಪ್ಲವ ಮಾಡಬಹುದು ಎಂದು ಇಂದು ಇಲ್ಲಿ ಸಭೆ ಸೇರಿದ ಈ ಎಸ್.ಎಸ್. ಎಫ್ ಸಂಘಟನೆಯೇ ಸಾಕ್ಷಿ ಎಂದರು. ಈ ದೇಶದ ರಕ್ಷಣೆ ಕೋಮುವಾದ ರಹಿತ ಸಮಾಜವನ್ನು ನಿರ್ಮಿಸಿ,ಪರಸ್ಪರ ಪ್ರೀತಿ ವಿಶ್ವಾಸ,ಏಕತೆ. ಬದ್ಧತೆ ಸಹಕಾರ ನೀಡಬೇಕಿದೆ ಎಂದರು.

ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಎಸ್.ಎಸ್. ಎಫ್ ಸಂಘಟನೆಯ ಶಿಸ್ತು ಅನ್ನು ಕೊಂಡಾಡಿದರು ತಾನು ಓರ್ವ ವಿದ್ಯಾರ್ಥಿ ಸಂಘಟನೆಯ ಹಿನ್ನೆಲೆಯಿಂದ ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯ ಜವಾಬಾರಿಯನ್ನು ನೆನಪಿಸಿದರು.

ಆರಂಭದಲ್ಲಿ ಎಸ್.ಎಸ್. ಎಫ್ ನ ರಾಜ್ಯ ಪ್ರಮುಖರಾದ ಸೋಫಿಯಾನ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರಾದ ಶಾಫಿ ಸಅದಿ ರವರು ಸಮ್ಮೇಳನದ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಮೊದಲು ಸಚಿವರಾದ ಜಮೀರ್ ಅಹ್ಮದ್ ರವರು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು. ಅತಿಥಿಗಳಾಗಿ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯರಾದ ನಾಸೀರ್ ಹುಸೈನ್, ಎಮ್.ಎಲ್.ಸಿ ನಾಸೀರ್ ಅಹಮ್ಮದ್, ಸಲೀಮ್ ಅಹಮದ್,ಶಾಸಕ ಎನ್. ಎ.ಹಾರಿಸ್, ಮಾಜಿ ಶಾಸಕರಾದ ಸಿ.ಎಂ.ಇಬ್ರಾಹಿಮ್ ಮುಂತಾದವರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಎಸ್.ಎಸ್. ಎಫ್ ಪಾಕ್ಷಿಕ ಪತ್ರಿಕೆಯ ಗೋಲ್ಡನ್ ಫಿಫ್ಟಿ ವಿಶೇಷ ಸಂಚಿಕೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಪತ್ರಿಕೆಯನ್ನು ಎಪಿ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ. ಶಿವ ಕುಮಾರ್ ರವರನ್ನ್ನು ಸಮ್ಮೇಳನದ ವತಿಯಿಂದ ಸನ್ಮಾನಿಸಿ ಗೋಲ್ಡನ್ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮ್ಮೇಳನದ ಮೈದಾನದಲ್ಲಿ ಬೃಹತ್ ಎಸ್.ಎಸ್. ಎಫ್ ವಿಧ್ಯಾರ್ಥಿಗಳು, ಉಳಾಮಾಗಳು, ಸರ್ವ ಜನಿಕರು,ರಾಷ್ಟ್ರೀಯ ಪದಾಧಿಕಾರಿಗಳು ಭಾಗವಹಿಸಿದ್ದರು.