July 27, 2024

Vokkuta News

kannada news portal

ವಕ್ಫ್ , ಮುಸ್ಲಿಮ್ ಹಿರಿಯರು ದೇವನಿಗೆ ಅರ್ಪಿಸಿದ ಆಸ್ತಿ,ಯತ್ನಾಳ್ ಹಿರಿಯರದ್ದಲ್ಲ: ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ.

ಮಂಗಳೂರು: ಇತ್ತೀಚೆಗೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ರವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಹಾಡಿ ಹೊಗಳುವ ಭರದಲ್ಲಿ ಕೇಂದ್ರ ಸರ್ಕಾರದ ಅಷ್ಟೂ ವರ್ಷಗಳ ವೈಫಲ್ಯವನ್ನು ಮರೆಮಾಚುವ ಉದ್ದೇಶದಿಂದ ಮತ್ತು ರಾಜ್ಯದಲ್ಲಿ ಕೋಮು ವಿದ್ವೇಶವನ್ನು ಮುಂದುವರಿಸುವ ಭಾಗವಾಗಿ ಪ್ರಧಾನ ಮಂತ್ರಿ ಮೋದಿಗೆ ತಾನು ಪತ್ರ ಬರೆದು ವಕ್ಫ್ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದೇನೆಂದು ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿ ಇರುವ ಆಸ್ತಿಗಳು ಈ ದೇಶದಲ್ಲಿ ಜೀವಿಸಿ,ಗತಿಸಿ ಹೋದ ಮುಸ್ಲಿಮರು ಮತ್ತು ಹಾಲಿ ಭಾರತದ ಪ್ರಜೆಗಳಾದ ಮುಸ್ಲಿಮರ ಕೊಡುಗೆಯಾಗಿದೆ. ಪ್ರಸ್ತುತ ಅಷ್ಟೂ ವಕ್ಫ್ ಆಸ್ತಿಗಳನ್ನು ಮುಸ್ಲಿಮ್ ಸಂಸ್ಥೆಗಳು ನಿರ್ವಹಿಸಿ ಜನರ ಧಾರ್ಮಿಕ ಸವಲತ್ತುಗಳನ್ನು ಪೂರೈಸುತ್ತಿದೆ. ಯತ್ನಾಳ್ ವಕ್ಫ್ ಆಸ್ತಿ ರದ್ದತಿಯಿಂದ ಸರಕಾರಕ್ಕೆ ಕರ್ಚು ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ. ವಕ್ಫ್ ಸಂಸ್ಥೆಯೇ ಸರಕಾರದ ಅಧೀನದಲ್ಲಿ ಇರುವಾಗ ವಕ್ಫ್ ರದ್ದತಿ ಪ್ರಸ್ತಾಪ ಏಕೆ ಎಂದು ಹೇಳಲಿ. ವಕ್ಫ್ ರದ್ದತಿ ಕೋರಲು ವಕ್ಫ್ ಆಸ್ತಿಗಳು ಯತ್ನಾಳ್ ಹಿರಿಯರ ಆಸ್ತಿ ಏನು ಅಲ್ಲ. ಸರಕಾರದ ವೈಫಲ್ಯಗಳನ್ನು ಜನರ ಚಿಂತನೆಯಿಂದ ಮರೆ ಮಾಚಲು ಯತ್ನಾಳ್ ಕೇಶವಕೃಪ ಸಲಹೆಯಂತೆ ಹೇಳಿಕೆ ನೀಡಿ ಜನರನ್ನು ಮುಸ್ಲಿಮ್ ವಿದ್ವೇಶದ ಕಡೆಗೆ ವಾಲಿಸುವ ಪ್ರಯತ್ನವೇ ಈ ಹೇಳಿಕೆ. ಯತ್ನಾಳ್ ವಾಸ್ತವ ಸತ್ಯ ಅರಿತು ವಕ್ಫ್ ಆಸ್ತಿ ಜನರ ಸೌಹಾರ್ದತೆಗೆ ಪೂರಕವಾಗಿ ಅಸ್ತಿತ್ವದಲ್ಲಿ ಇದೆ ಎಂಬುದನ್ನು ತಿಳಿಯಲಿ. ಎಂದು ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.