ಉಳ್ಳಾಲ: ಯೂನಿವರ್ಸಲ್ ವೆಲ್ಫೇರ್ ಫಾರಮ್ ಕರ್ನಾಟಕ ವತಿಯಿಂದ ಪ್ರತಿ ವರ್ಷವು ಆಯೋಜಿಸುತ್ತಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಇಸ್ಲಾಮಿನ ಅಂತಿಮ ಪ್ರವಾದಿ ಮುಹಮ್ಮದ್ (ಸ. ಅ) ರವರ ಸಂದೇಶ ಪ್ರಚಾರ ಸೀರತ್ ಅಭಿಯಾನ 23 ರ ಭಾಗವಾಗಿ ಇಂದು ಉಳ್ಳಾಲದ ನಗರಸಭಾ ಆವರಣದಲ್ಲಿ ಸಂದೇಶ ಪ್ರಚಾರ ಸಭಾ ಕಾರ್ಯಕ್ರಮ ನಡೆಯಿತು.
ಯುನಿವೆಫ್ ಕರ್ನಾಟಕ ಸಂಸ್ಥೆಯ ಮುಖ್ಯಸ್ಥರಾದ ಜ. ರಫಿಉದ್ದೀನ್ ಕುದ್ರೋಳಿ ರವರು ಪ್ರಮುಖ ಭಾಷಣ ಮಾಡುತ್ತಾ 1400 ವರ್ಷದ ಹಿಂದೆ ಅರೇಬಿಯಾದಲ್ಲಿ ಹುಟ್ಟಿದ ಪ್ರವಾದಿ ಮುಹಮ್ಮದ್ ಸ.ಅ. ರವರ ಜೀವನ ಕ್ರಮ, ಇಂದು ಲೌಕಿಕ ಮತ್ತು ಆದ್ಯಾತ್ಮಿಕ ಜೀವನದ ಮಾದರಿ ಕ್ರಮವಾಗಬೇಕಿದೆ. ಪ್ರವಾದಿ ಬೋಧಿಸಿದ ಅಂದಿನ ವಿಷಯವು ಪ್ರಸಕ್ತ ಜಾಗತಿಕ ಜೀವನ ಕ್ರಮಕ್ಕೆ ಮಾದರಿಯಾಗಿದೆ. ಪ್ರವಾದಿಯವರು ಪ್ರಭೋಧಿಸಿದ ವಿಷಯವನ್ನು ಇಂದು ಪ್ರತೀ ಮನುಷ್ಯನಿಗೆ ತಲುಪಿಸುವ ಕರ್ತವ್ಯ ಮುಸ್ಲಿಮ್ ಸಮುದಾಯ ಮಾಡಬೇಕಾಗಿದೆ. ಇಸ್ಲಾಮಿಕ್ ಸಮಾಜ ಪರಿವರ್ತನೆಯಾಗಬೇಕಾಗಿದೆ. ಮುಸ್ಲಿಮ್ ಸಮುದಾಯದಲ್ಲಿರುವ ಅನಿಷ್ಟ ಪದ್ಧತಿಗಳು ಬದಲಾಗಬೇಕಾಗಿದೆ. ಪ್ರವಾದಿರವರು ಮತ್ತು ಸಹಾಬಿರವರ ಕಾಲಾವಧಿಯಲ್ಲಿ ಮಾನವನ ಕನಿಷ್ಠ ಹಕ್ಕುಗಳ ಸಂರಕ್ಷಣೆಗೆ ಮಹತ್ವ ನೀಡಲಾಗಿತ್ತು.ಮುಸ್ಲಿಮ್ ಮಹಿಳೆಯರು ಇಂದು ಮುಕ್ತವಾಗಿ, ಮಿಶ್ರವಾಗಿ ಸಾಮಾಜಿಕ ಕಾರಣದಿಂದ ಪ್ರದರ್ಶಿತವಾಗುವುದು ಅತಿ ಗಂಭೀರವಾಗಿದೆ. ಈ ಕಾರಣದಿಂದಾಗಿ ಮುಸ್ಲಿಮ್ ಮಹಿಳೆಯರು ದಾರಿ ತಪ್ಪುವ ಸಾದ್ಯತೆ ಅತಿಯಾಗಿದೆ. ಮಹಿಳೆಯರಿಗೆ ಸಮರ್ಪಕ ವಿದ್ಯೆ, ದೀನಿ ವಿದ್ಯೆ,ಖುರಾನ್ ಪಠಣ ಇತ್ಯಾದಿ ಅಗತ್ಯವಿದೆ. ವಿವಾಹ ಸಂಧರ್ಬದಲ್ಲಿ ನಡೆಯುವ ಅನಗತ್ಯ ಪದ್ಧತಿ,ಆಡಂಬರ ಇಸ್ಲಾಮಿನ ಸಂಸ್ಕಾರವನ್ನು ಬದಲಾಯಿಸಿದೆ. ನಿರ್ಗತಿಕ ಸಮುದಾಯದ ಬಡತನವನ್ನು ಸ್ಥಿತಿವಂತರು ನಿರ್ಲಕ್ಷಿಸಿರುವುದು ಗಂಭೀರ ವಿಷಯವಾಗಿದೆ. ಸರಳ ವಿವಾಹವನ್ನು ಪ್ರೋತ್ಸಾಹಿಸ ಬೇಕಾಗಿದೆ. ಇಸ್ಲಾಂ ಭಾರತಕ್ಕೆ ಬಂದಾಗ ವಿವಾಹ ಸರಳವಾಯಿತು. ಇಂತಹ ವಿವಾಹ ಸಮೃದ್ಧಿಗೆ ಕಾರಣವಾಗಿದೆ. ಮನೆಯಲ್ಲಿ ಆರಾಧನಾ ಕ್ರಮ ಸ್ಥಾಪಿಸಿರಿ, ಅದನ್ನು ಎಳೆ ಮಕ್ಕಳು ನೋಡಿ ಕಲಿಯಿರಿ, ಪ್ರವಾದಿ ರವರು ನಮಗೆ ಸಂಸ್ಕಾರ ಕಲಿಸಿದ್ದಾರೆ. ಹಜ್ರತ್ ಹುಸೈನ್ ರವರು ಆರಾಧನಾ ಸಮಯದಲ್ಲಿಯೇ ಹೋರಾಟದಲ್ಲಿ ಶಹೀದ್ ಆದರು,ಎಂದು ಇಸ್ಲಾಮಿನ ಚರಿತ್ರೆಯನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಯು.ಬೀ.ಮೊಹಮ್ಮದ್,ಯು.ಕೆ.ಖಾಲಿದ್,ಮೊಹಮ್ಮದ್ ಫಝಲ್,ಸಿರಾಜುದ್ದೀನ್,ಉಮರ್ ಮುಖ್ತಾರ್ ರವರು ಉಪಸ್ಥಿತರಿದ್ದರು.
ಇನ್ನಷ್ಟು ವರದಿಗಳು
ಡಿ. 31, ಬ್ಯಾರಿ ಜಿಲ್ಲಾ ಸಮಾವೇಶ: ಕಾರ್ಯಾಲಯ ಉದ್ಘಾಟನೆ, ಸಂಘಟಿತವಾಗಿ ಪ್ರಯತ್ನಿಸೋಣ: ಇಬ್ರಾಹಿಮ್ ಕೋಡಿಜಾಲ್.
ಮಂಗಳೂರು: ಆನ್ಲೈನ್ ವಂಚಕ ಪೊಲೀಸ್ ಅಧಿಕಾರಿಯಂತೆ ನಟಿಸಿ 50 ಲಕ್ಷ ರೂ ಮಹಿಳೆಗೆ ವಂಚನೆ.
‘ಐಕ್ಯ ಮಂತ್ರ’ ಕೃತಿ ಬಿಡುಗಡೆ, ‘ಕಾಸರಗೋಡು ಕರ್ನಾಟಕದ ಭಾಗವಾಗಬೇಕಿತ್ತೆಂಬ ಆಶಯ ‘ ಮಂಗಳೂರಿನಲ್ಲಿ ಕಯ್ಯಾರ ಕಿಂಞಣ್ಣ ರೈಗೆ ಶ್ರದ್ಧಾಂಜಲಿ.