November 27, 2025

Vokkuta News

kannada news portal

ಪ್ರವಾದಿ ಮುಹಮ್ಮದ್  ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಚುನಾವಣೆಗೂ ಮುನ್ನ ಸ್ಟಾಲಿನ್  ಮುಸ್ಲಿಂ ಪ್ರಚಾರ.

ಶಾಲಾ ಪಠ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಬೋಧನೆಗಳನ್ನು ಸೇರಿಸಬೇಕೆಂಬ ಎಸ್‌ಡಿಪಿಐ ನಾಯಕ ನೆಲ್ಲೈ ಮುಬಾರಕ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪ್ರವಾದಿ ಕುರಿತ ವಿಷಯವು ಈಗಾಗಲೇ ಪಠ್ಯಕ್ರಮದ ಭಾಗವಾಗಿದೆ ಎಂದು ಭಾನುವಾರ ಸ್ಪಷ್ಟಪಡಿಸಿದರು.

ಪಕ್ಷವು ಯಾವಾಗಲೂ ಮುಸ್ಲಿಂ ಸಮುದಾಯದ ಜೊತೆ ನಿಲ್ಲುತ್ತದೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಭದ್ರಪಡಿಸಲು ಬದ್ಧವಾಗಿರುತ್ತದೆ ಎಂದು ಎಂ ಕೆ ಸ್ಟಾಲಿನ್ ಭರವಸೆ ನೀಡಿದರು.

“ಎಸ್‌ಡಿಪಿಐ ನಾಯಕ ನೆಲ್ಲೈ ಮುಬಾರಕ್ ಅವರು ಪ್ರವಾದಿ ಮುಬಾರಕ್ ಅವರನ್ನು ಪಠ್ಯಕ್ರಮದಲ್ಲಿ ಸೇರಿಸಲು ವಿನಂತಿಸಿದ್ದಾರೆ. ಇದನ್ನು ಈಗಾಗಲೇ ತಮಿಳುನಾಡು ಶಿಕ್ಷಣ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ” ಎಂದು ಸಿಎಂ ಸ್ಟಾಲಿನ್ ಹೇಳಿದರು.