January 3, 2025

Vokkuta News

kannada news portal

ಇಸ್ರೇಲ್-ಹಮಾಸ್ ಯುದ್ಧ:ಇಸ್ರೇಲ್ ದಾಳಿಯ ಮತ್ತೊಂದು ಮಾರಣಾಂತಿಕ ರಾತ್ರಿ,ನೂರಾರು ಸಾವು.

ಗಾಝಾ: ಶನಿವಾರದಿಂದೀಚೆಗೆ ಇಸ್ರೇಲ್ ಧಾಳಿಯಿಂದ 800 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಪಲೇಸ್ಟಿನಿಯನ್ ಅಧಿಕಾರಿಗಳು ಹೇಳುತ್ತಿದ್ದಂತೆಯೇ , ಇಸ್ರೇಲ್‌ನ ಮಿಲಿಟರಿ ದಕ್ಷಿಣ ಗಾಝಾದಲ್ಲಿ ತನ್ನ ನೆಲದ ಆಕ್ರಮಣವನ್ನು ವಿಸ್ತರಿಸಿದೆ.

ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ರಾತ್ರಿ ಮತ್ತು ಮುಂಜಾನೆ ದಾಳಿಗಳಲ್ಲಿ ಹೆಚ್ಚಿನ ಪಲೆಸ್ಟೀನಿಯನ್ನರನ್ನು ಬಂಧಿಸಿದೆ.

ಈ ಮದ್ಯೆ ಗಾಝಾ ಮೇಲಿನ ಇಸ್ರೇಲಿ ದಾಳಿಗಳು ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ದಾಳಿಗಳ ಮೇಲೆ ಕೇಂದ್ರೀಕೃತವಾಗಿರುವಾಗ,ಬ್ರಷ್ಟಾಚಾರದ ಪ್ರಕರಣದಲ್ಲಿ ಪಿಎಂ ನೆತನ್ಯಾಹು ಅವರ ವಿಚಾರಣೆಯು ಇಂದು ಜೆರುಸಲೆಮ್ ಜಿಲ್ಲಾ ನ್ಯಾಯಾಲಯದಲ್ಲಿ ಪುನರಾರಂಭಗೊಂಡಿದೆ ,ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.

ನೆತನ್ಯಾಹು ಅವರು ತನ್ನ ಮೂಲ ಯೋಜನೆಗೆ ಹಿಂತಿರುಗಿದಂತಿದೆ.

ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮೊಹಮ್ಮದ್ ಚೆರ್ಕೌಯಿರವರು ತನ್ನ ಅಭಿಪ್ರಾಯ ವ್ಯಕ್ತ ಪಡಿಸಿ ,ನವೀಕರಿಸಿದ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯು ನೆತನ್ಯಾಹು ಅವರ ಗಾಝಾ ಪಟ್ಟಿಯನ್ನು ನಿರ್ಜನಗೊಳಿಸುವ ಮೂಲ ಯೋಜನೆಯ ಭಾಗವಾಗಿದೆ ಎಂದು ಹೇಳುತ್ತಾರೆ.

ನೆದರ್ಲ್ಯಾಂಡ್ಸ್ ಇಸ್ರೇಲಿಗೆ ಪೂರೈಸುವ ಮಿಲಿಟರಿ ಸರಬರಾಜು ಯುದ್ಧ ಅಪರಾಧಗಳಿಗೆ ಸಮವಾಗಿದೆ ಎಂದು ಆರೋಪಿಸಲಾಗಿದೆ.

ಡಚ್ ದೇಶವು ಇಸ್ರೇಲ್‌ಗೆ ವಿಮಾನದ ಭಾಗಗಳನ್ನು ರಫ್ತು ಮಾಡುವುದರಿಂದ ಅದು ಗಾಝಾ ಯುದ್ಧ ಅಪರಾಧಗಳಲ್ಲಿ ಭಾಗಿಯಾಗಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಹೇಳುತ್ತಿವೆ.