June 14, 2024

Vokkuta News

kannada news portal

ರಾಜತಾಂತ್ರಿಕ ತೀವ್ರ ಪ್ರಯತ್ನಗಳ ಮದ್ಯಸ್ತಿಕೆಯಿಂದ ವಿಸ್ತರಣೆಗೊಂಡ ಇಸ್ರೇಲ್ ಹಮಾಸ್ ಕದನವಿರಾಮ.

ಖತಾರ್: ಈಜಿಪ್ಟ್ ಮತ್ತು ಕತಾರ್ ದೇಶದ ಪ್ರಮುಖ ಸಮಾಲೋಚಕರು ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಹೊಸ ಎರಡು ದಿನಗಳ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ.

ಕದನ ವಿರಾಮದ ಒಂದು ವಾರದಲ್ಲಿ, ಗಾಝಾ ಪಟ್ಟಿಯಲ್ಲಿರುವ ನಿವಾಸಿಗಳು ಮುಂದೆ ಏನಾಗಬಹುದು ಎಂಬ ಭಯದಲ್ಲಿಯೇ ಜೀವಿಸುವಂತಾಗಿದೆ.

ಗಾಝಾದ ಮೇಲಿನ ‘ಜನಾಂಗೀಯ’ ಯುದ್ಧವನ್ನು ತಡೆಯಲು ಅಮೆರಿಕ ಸಾಕಷ್ಟು ಮಾಡುತ್ತಿಲ್ಲ: ವಿಶ್ಲೇಷಣೆ

ಕತಾರ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದ ಇಬ್ರಾಹಿಂ ಅಬುಶರೀಫ್, ರವರು ಅಲ್ ಜಝೀರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಗಾಝಾದ ಮೇಲೆ ತನ್ನ ಯುದ್ಧವನ್ನು ಮುಂದುವರೆಸುವುದನ್ನು ತಡೆಯಲು ಅಮೆರಿಕ, ಇಸ್ರೇಲ್ ಮೇಲೆ ಒತ್ತಡವನ್ನು “ಹೆಚ್ಚಳ” ಮಾಡಬೇಕಾಗಿದೆ ಎಂದು ಹೇಳಿದರು.

ಅಬ್ಬಾಸ್, ಬ್ಲಿಂಕನ್ ಜೊತೆಗಿನ ಭೇಟಿಯಲ್ಲಿ ಸಂಪೂರ್ಣ ಕದನ ವಿರಾಮವನ್ನು ಒತ್ತಾಯಿಸಿದ್ದಾರೆ.

ಪಲೇಸ್ಟಿನಿಯನ್ ಸ್ಟೇಟ್ ನ್ಯೂಸ್ ಏಜೆನ್ಸಿ ವಾಫಾದಲ್ಲಿನ ವರದಿಯ ಪ್ರಕಾರ, “ಗಾಜಾ ಮತ್ತು ಜೆರುಸಲೇಮ್ ಸೇರಿದಂತೆ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿ ಆಕ್ರಮಣದ ಅಪರಾಧವನ್ನು ದಾಖಲಿಸುವ ಸಮಗ್ರ ಫೈಲ್” ಅನ್ನು ಪ್ಯಾಲೇಸ್ಟಿನಿಯನ್ ಅಥಾರಿಟಿ ಅಧ್ಯಕ್ಷರು ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಪ್ರಸ್ತುತಪಡಿಸಿದರು.

ಅಬ್ಬಾಸ್ ಗಾಝಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪಲೆಸ್ಟೀನಿಯನ್ನರ ಬಲವಂತದ ಸ್ಥಳಾಂತರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ, ಅಕ್ಟೋಬರ್ 7 ರಿಂದ ಅಲ್ಲಿ ನೆಲೆಸಿರುವವರಿಂದ ಹೆಚ್ಚಿನ ದಾಳಿಯಾಗಿದೇ ಎಂದರು.

ಗಾಝಾ ಮತ್ತು ವೆಸ್ಟ್ ಬ್ಯಾಂಕ್ ನಡುವಿನ ಏಕತೆಯನ್ನು ಅವರು ಒತ್ತಿ ಹೇಳಿದರು, “ಪಲೆಸ್ತೀನ್ ನಾಯಕತ್ವವು ಗಾಝಾದ ಜನರಿಗೆ ತನ್ನ ಜವಾಬ್ದಾರಿಯನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.