November 20, 2024

Vokkuta News

kannada news portal

ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ 94 ರಲ್ಲಿ ಕಾಂಗ್ರೆಸ್ ಘೋಷಿಸಿ, ಜಾರಿಗೊಳಿಸಿದ್ದು 95 ಇಸವಿಯಲ್ಲಿ ದೇವೇಗೌಡ ಸರ್ಕಾರ.

ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಎಚ್‌ಡಿ ಸರ್ಕಾರ ಜಾರಿಗೆ ತಂದಿತು.ದೇವೇಗೌಡರು 1995ರಲ್ಲಿ ಮುಸ್ಲಿಮರಿಗೆ ಒಬಿಸಿ ಕೋಟಾ ಜಾರಿಗೆ ತಂದರು.1994ರಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು, ಆದರೆ ಜಾರಿಯಾಗಿರಲಿಲ್ಲ.ದೇವೇಗೌಡರ ಜೆಡಿ(ಎಸ್) ಈಗ ಬಿಜೆಪಿಯ ಮಿತ್ರಪಕ್ಷವಾಗಿದೆ

ಮುಸ್ಲಿಂ ಸಮುದಾಯವನ್ನು ರಾಜ್ಯದ ಒಬಿಸಿ ಪಟ್ಟಿಗೆ ಸೇರಿಸುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸುತ್ತಿದ್ದಂತೆ, ಈ ಮೀಸಲಾತಿಯನ್ನು ಮೊದಲ ಬಾರಿಗೆ 1995 ರಲ್ಲಿ ಎಚ್.ಡಿ.ದೇವೇಗೌಡರ ಜನತಾದಳ ಜಾರಿಗೊಳಿಸಿತು ಎಂದು ದಾಖಲೆಗಳು ತೋರಿಸುತ್ತವೆ. ಕುತೂಹಲಕಾರಿಯಾಗಿ, ದೇವೇಗೌಡರ ಜೆಡಿ (ಎಸ್) ಈಗ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರ ಪಕ್ಷವಾಗಿದೆ.

ಮಧ್ಯಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ಅನ್ನು “ಒಬಿಸಿಗಳ ದೊಡ್ಡ ಶತ್ರು” ಎಂದು ಲೇಬಲ್ ಮಾಡಿದ ಪಿಎಂ ಮೋದಿ, “ಮತ್ತೊಮ್ಮೆ, ಕಾಂಗ್ರೆಸ್ ಹಿಂಬಾಗಿಲ ಮೂಲಕ ಓಬಿಸಿಗಳ ಜೊತೆಗೆ ಎಲ್ಲಾ ಮುಸ್ಲಿಂ ಜಾತಿಗಳನ್ನು ಸೇರಿಸುವ ಮೂಲಕ ಕರ್ನಾಟಕದಲ್ಲಿ ಧಾರ್ಮಿಕ ಆಧಾರಿತ ಮೀಸಲಾತಿ ನೀಡಿದೆ. ಈ ಕ್ರಮವು ಒಬಿಸಿ ಸಮುದಾಯದಿಂದ ಮೀಸಲಾತಿಯ ಗಮನಾರ್ಹ ಭಾಗವನ್ನು ವಂಚಿತಗೊಳಿಸಿದೆ,ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮದ್ಯೆ ದೇಶದ ಸಂಪತ್ತನ್ನು ಮರು ಹಂಚಿಕೆ ಮಾಡುವ ವಿಷಯದ ಬಗ್ಗೆ ಬಿಜೆಪಿ ಕಾಂಗ್ರೆಸ್ ಪ್ರಣಾಳಿಕೆ ಯನ್ನೂ ಗುರಿಯಾಗಿಸಿ, ಮುಸ್ಲಿಮರ ವಿರುದ್ಧದ ತಮ್ಮ ದ್ವೇಷ ಭಾಷಣವನ್ನು ಮಾಡಲಾಗಿದೆ ಎಂದು ಅಘಾದ ಪ್ರಮಾಣದ ದೂರುಗಳನ್ನು ಹಕ್ಕು ಸಂಘಟನೆ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ನೀತಿ ಉಲ್ಲಂಘನೆ ಎಂದು ಆರೋಪಿಸಿದೆ. ಆದರೆ ನರೇಂದ್ರ ಮೋದಿ ಪ್ರಸ್ತುತ ತಮ್ಮ ಹೇಳಿಕೆಗೆ ಬದ್ಧವಾಗಿಯೇ ಉಳಿದು ಕೊಂಡಿದ್ದಾರೆ.