November 20, 2024

Vokkuta News

kannada news portal

ಮೇ 26ರಂದು ಬ್ಯಾರಿ ವೆಬ್ ಮಾಹಿತಿ ಭಂಡಾರ’ಬ್ಯಾರಿಇನ್‌ಫೋಡಾಟ್‌ಕಾಂ’ ಲೋಕಾರ್ಪಣೆ.

ಮಂಗಳೂರು : ಬ್ಯಾರಿ ಸಮುದಾಯದ ಸಾಹಿತ್ಯ, ಇತಿಹಾಸ, ಭಾಷೆ, ಸಂಸ್ಕೃತಿ, ಸಂಘಟನೆ, ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ಗ್ರಂಥಗಳು, ಪ್ರಬಂಧಗಳು; ಅಗಲಿದ ಮಹನೀಯರ ನೆನಪು, ಸಾಧಕರ ಪರಿಚಯ, ಸಾಧನೆ ಹೀಗೆ ಬ್ಯಾರಿಗಳ ಸಮಗ್ರ ಮಾಹಿತಿಗಳನ್ನೊಳಗೊಂಡ ವೆಬ್ ಮಾಹಿತಿ ಭಂಡಾರ `ಬ್ಯಾರಿಇನ್‌ಫೋಡಾಟ್‌ಕಾಂ’ ಹೆಸರಿನ ವೆಬ್‌ಸೈಟನ್ನು ದಿನಾಂಕ 26-5-2024 ರವಿವಾರ ಅಪರಾಹ್ನ 2.30ಕ್ಕೆ ಮಂಗಳೂರಿನ ಹೊಟೇಲ್ ಮೋತಿ ಮಹಲ್‌ನ `ಕನ್ವೆನ್‌ಷನ್ ಸೆಂಟರ್’ ಸಭಾಂಗಣದಲ್ಲಿ ಜಾಗತಿಕ ಲೋಕಾರ್ಪಣೆ ನೆರವೇರಿಸಲಾಗುವುದು.

ಕಳೆದ 3 ದಶಕಗಳಿಂದ ಬ್ಯಾರಿ ಭಾಷೆ ಮತ್ತು ಸಾಹಿತ್ಯದ ನಿಟ್ಟಿನಲ್ಲಿ ಆಂದೋಲನ ರೂಪದ ಕಾರ್ಯಚಟುವಟಿಕೆಗಳು ನಡೆದಿದ್ದು, ಅದರ ಫಲವಾಗಿ ಕರ್ನಾಟಕ ರಾಜ್ಯ ಸರಕಾರ `ಬ್ಯಾರಿ ಸಾಹಿತ್ಯ ಅಕಾಡೆಮಿ’ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ `ಬ್ಯಾರಿ ಅಧ್ಯಯನ ಪೀಠ’ ಸ್ಥಾಪಿಸಿರುತ್ತದೆ. ನೂರಾರು ಬ್ಯಾರಿ ಕೃತಿಗಳು, ಸಂಶೋಧನಾ ಗ್ರಂಥಗಳು ಪ್ರಕಟವಾಗಿದ್ದು ವಿಶ್ವದಾದ್ಯಂತ ಆಸಕ್ತರಿಗೆ ಬ್ಯಾರಿ ಭಾಷೆ, ಸಾಹಿತ್ಯ, ಸಮುದಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸೃಷ್ಟಿಯಾಗಿದೆ. ಅನೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬ್ಯಾರಿಯ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಲು, ಪ್ರಬಂಧ ಮಂಡಿಸಲು, ಡಾಕ್ಟರೇಟ್ ಪಡೆಯಲು ಮುಂದಾಗಿದ್ದಾರೆ. ಇವರಿಗೆಲ್ಲ ಇರುವ ಏಕೈಕ ಸಮಸ್ಯೆ ಎಂದರೆ ಅಗತ್ಯ ಇರುವ ಗ್ರಂಥಗಳನ್ನು ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದು. ಇದನ್ನು ಮನಗಂಡ ಹಿರಿಯ ಸಾಹಿತಿಗಳಾದ ಮುಹಮ್ಮದ್ ಅಲಿ ಕಮ್ಮರಡಿ ಮತ್ತು ಮುಹಮ್ಮದ್ ಕುಳಾಯಿ ಈ ಸಮಸ್ಯೆಗಳನ್ನೆಲ್ಲ ನೀಗಿಸಲು, ಬ್ಯಾರಿ ಸಮುದಾಯವನ್ನು ಜಗತ್ತಿಗೆ ಪರಿಚಯಿಸಲು ಇಂತಹ ಒಂದು ವೆಬ್‌ಸೈಟನ್ನು ಸ್ಥಾಪಿಸಲು ಮುಂದಾಗಿ, ಸೃಷ್ಟಿಸಿ ಲೋಕಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ.

ಈ ವೆಬ್‌ಸೈಟನ್ನು ಯಾವುದೇ ಆರ್ಥಿಕ ಲಾಭ ಬಯಸದೆ ಸಂಪೂರ್ಣ ಸಾಮಾಜಿಕ ಸೇವಾ ನೆಲೆಯಲ್ಲಿ ಸ್ಥಾಪಿಸಲಾಗಿದೆ. ಈಗಾಗಲೇ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಅಪೂರ್ವ ವೆಬ್‌ಸೈಟಿಗೆ ಸಹಸ್ರಾರು ಜನರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಈ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಲಿದ್ದು, ಬೆಂಗಳೂರು ಟೀಕೇಸ್ ಗ್ರೂಪಿನ ಮುಖ್ಯಸ್ಥ ಉಮರ್ ಟೀಕೆಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜಿನ ಸ್ಥಾಪಕ ಡಾ. ಯು.ಕೆ. ಮೋನು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್, ಸೌದಿ ಅರೇಬಿಯದ ಎಕ್‌ಸ್ಪರ್ಟೈಝ್ ಕಾಂಟ್ರಾಕ್ಟಿAಗ್ ಕಂಪನಿಯ ಉಪಾಧ್ಯಕ್ಷ ಕೆ.ಎಸ್. ಶೇಕ್ ಕರ್ನಿರೆ, ಸೌದಿ ಅರೇಬಿಯದ ಅಲ್ ಮುಝೈನ್ ಕಂಪನಿಯ ಸಿಇಒ ಬಿ. ಝಕರಿಯ ಜೋಕಟ್ಟೆ, ಬೆಂಗಳೂರಿನ ಬ್ಯಾರೀಸ್ ಗ್ರೂಪ್‌ನ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ. ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿಯ ಕುಲಪತಿ ಡಾ. ನಿಸಾರ್ ಅಹಮದ್, ಮಂಗಳೂರಿನ ಆಝಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನ್ಸೂರ್ ಅಹಮದ್, ಬೆಂಗಳೂರಿನ ಪ್ರಿಮಿಯರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಓಸಿಯನ್ ಕನ್‌ಸ್ಟçಕ್ಷನ್ ಪ್ರೆöÊ ಲಿ.(ಇಂಡಿಯಾ) ಇದರ ನಿರ್ದೇಶಕ ಇನಾಯತ್ ಅಲಿ ಮುಲ್ಕಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಎಂದು ವೆಬ್ ಮಾಹಿತಿ ಸಂಯೋಜಕರಾದ ಮುಹಮ್ಮದ್ ಅಲಿ ಕಮ್ಮರಡಿ 9880723929 ಮತ್ತು ಮುಹಮ್ಮದ್ ಕುಳಾಯಿ 9980771298 ರವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.