June 29, 2025

Vokkuta News

kannada news portal

ದ.ಕ.ಕಾಂಗ್ರೆಸ್ ರಾಜಿನಾಮೆ ಪ್ರಕ್ರಿಯೆಯಿಂದ ಘಾಡ ಪರಿಣಾಮ ಆಗಿದೆ: ಆನ್ ಲೈನ್ ಸಂವಾದದಲ್ಲಿ ಸಿರಾಜ್ ಬಜ್ಪೆ.

ಕೆಪಿಸಿಸಿ ಮಟ್ಟದಲ್ಲಿ ಒಂದು ಅಧ್ಯಯನ ಸಮಿತಿ ರಚನೆ ಆಗಿ ಹಾಲಿ ,ಮಾಜಿ ಶಾಸಕರು, ರಾಜ್ಯ ಸಭಾ ಸದಸ್ಯರೂ, ಸಮುದಾಯದ ಸೈಯದ್ ನಾಸೀರ್ ಹುಸೇನ್ ಸಮಿತಿಯ ನೇತೃತ್ವ ಅವರೊಂದಿಗೆ ನಾವು, ಅವಹಾಲುಗಳನ್ನು ಇಲ್ಲಿನ ಸ್ಥಿತಿ ಗತಿಯ ಬಗ್ಗೆ ಸಮುದಾಯಕ್ಕೆ ಎಷ್ಟು ನೋವಾಗಿದೆ ಎಂಬ ಬಗ್ಗೆ , ಮನದಟ್ಟು ಮಾಡಿದ್ದೇವೆ.

ವೆಬ್: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡದ ಅಹಿತಕರ ಘಟನೆಯ ನಿಯಂತ್ರಣ ವೈಫಲ್ಯಕ್ಕೆ ಬೇಸತ್ತು ಹಾಲಿ ಆಡಳಿತದಲ್ಲಿರುವ ಕಾಂಗ್ರೆಸ್ ರಾಜ್ಯಸರಕಾರದ ನಿರ್ಲಕ್ಷ್ಯ ಮತ್ತು ಜಿಲ್ಲೆಯಲ್ಲಿ ಪೋಲೀಸ್ ವೈಫಲ್ಯದ ವಿರುದ್ಧ ಬೇಸತ್ತು ದ.ಕ.ಜಿಲ್ಲಾ ಮಟ್ಟದಲ್ಲಿನ ಅಲ್ಪಸಂಖ್ಯಾತ ಮುಸ್ಲಿಂ ನಾಯಕರು ಮತ್ತು ಕಾರ್ಯ ಕರ್ತರು  ಕಳೆದ ವಾರ ದ.ಕ. ಜಿಲ್ಲಾ ಕಾಂಗ್ರೆಸ್ ನ ವಿವಿಧ ಹುದ್ದೆಗಳಿಗೆ ನೀಡಿದ ಸಾಮೂಹಿಕ ರಾಜಿನಾಮೆ ಪ್ರಕ್ರಿಯೆ ಮತ್ತು ನಂತರದ ಬೆಳವಣಿಗೆಯಲ್ಲಿ ರಾಜ್ಯ ಮಟ್ಟದ ಅಧ್ಯಯನ ಸಮಿತಿ ಆಗಮನ, ಸಂದರ್ಶನ, ಅಧಿಕಾರಿಗಳ ಬದಲಾವಣೆ ಕಾನೂನಾತ್ಮಕ ಕ್ರಮ ಇತ್ಯಾದಿ ಗಳಿಂದಾಗಿ ಜಿಲ್ಲೆಯಲ್ಲಿ ಘಾಡ ಬದಲಾವಣೆ ಸಂಭವಿಸಿದೆ ಎಂದು ದ.ಕ.ಮುಸ್ಲಿಮ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ಸಿರಾಜ್ ಬಜ್ಪೆ ಹೇಳಿದ್ದಾರೆ. ತಾರೀಕು 10 ಜೂನ್ 2025 ರಂದು ಭಾ. ಕಾ. ರಾತ್ರಿ ಘಂಟೆ 9.15 ಕ್ಕೆ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಡೆದ ಆನ್ ಲೈನ್ ಸಂವಾದದಲ್ಲಿ ಅವರು ನಿರೂಪಕರ ಪ್ರಶ್ನೆಗೆ ಉತ್ತರಿಸಿದರು. ಸಂವಾದ ಆರಂಭದಲ್ಲಿ ಮೊಹಮ್ಮದ್ ಹನೀಫ್.ಯು ಸ್ವಾಗತಿಸಿ ಸಂವಾದ ನಿರೂಪಿಸಿದರು. ಸದಸ್ಯರ ಹಲವು ಪ್ರಶ್ನೆಗೆ ಉತ್ತರಿಸಿದರು, ಅಡ್ಮಿನ್ ಅಶ್ಫಾಕ್ ತೋಟಾಲ್, ಹನೀಫ್ ಖಾನ್ ಕೊಡಾಜೆ ಮುಂತಾದವರು ಉಪಸ್ಥಿತರಿದ್ದರು, ಕೊನೆಯಲ್ಲಿ ಹುಸೈನ್ ಮದನಿ ನಗರ ವಂದಿಸಿದರು.

ಮೊಹಮ್ಮದ್ ಹನೀಫ್ ಯು: ಸಿರಾಜ್ ಬಜ್ಪೆಯವರೇ ನೀವು ಹಲವು ವರ್ಷಗಳಿಂದ ಪ್ರಮುಖ ರಾಜಕೀಯ ಪಕ್ಷ,ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ,ಮುಖಂಡ ನಾಯಕ ಆಗಿದ್ದೀರಿ, ಮಂಗಳೂರು ಗ್ರಾಮಾಂತರ ಮಟ್ಟದಲ್ಲಿ ಈ ಪಕ್ಷಕ್ಕೆ ನೀವು ಅಘಾದ ಸೇವೆ ಸಲ್ಲಿಸಿರುತ್ತೀರಿ? ಇತ್ತೀಚಿನ ಕೆಲವು ಅವಧಿಗಳ ಬೆಳವಣಿಗೆ, ಅದರಲ್ಲೂ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕ ಅಥವಾ ವಿಭಾಗ ಮುಸ್ಲಿಮರು ಅಥವಾ ಇನ್ನಿತರ ಪಂಗಡ ಸಮುದಾಯ ಇವರಿಗೆ ದ.ಕ.ಜಿಲ್ಲಾ ಮಟ್ಟದಲ್ಲಿ ಪಕ್ಷದ ವ್ಯಾಪ್ತಿಯಲ್ಲಿ ಅಸಮಾಧಾನ ಮೂಡಿ ಕಳೆದ ಅವಧಿಯಲ್ಲಿ ವಿವಿಧ ಬೆಳವಣಿಗೆ ನಡೆದಿದೆ, ಸಾಮೂಹಿಕ ರಾಜಿನಾಮೆ ಪ್ರಕ್ರಿಯೆ,ಬೆಂಗಳೂರಿನಿಂದ ರಾಜ್ಯ ಮಟ್ಟದ ನಿಯೋಗ ಬರುವಿಕೆ, ಸಂದರ್ಶನ,ಕೆಲವು ಮುಖಂಡರಿಗೆ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ನೋಟೀಸು ಜ್ಯಾರಿ ಆಗಿದೆ, ಈ ವಿಷಯಗಳ ನಿಮ್ಮಲ್ಲಿ ಏನು ಮಾಹಿತಿ ಇದೆ?.

ಸಿರಾಜ್ ಬಜ್ಪೆ: ಇಂದಿನ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯದ ಪಾಲಿಗೆ ಬಾರಿ ಇಂದು ದೊಡ್ಡ ಹಿನ್ನಡೆ ಮತ್ತು ನೋವು ಎಂದು ಅಭಿಪ್ರಾಯ ಪಡಬಹುದಾಗಿದೆ.
ಅದೇ ರೀತಿಯಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ವಿಷಯದಲ್ಲಿ ನಮ್ಮ ಸಹೋದರರು ಎಂದು ಬೀದಿ ಮದ್ಯದಲ್ಲಿ ಶವವಾಗುತ್ತಿರುವುದು ನಾವು ನೋಡುತ್ತಾ ಇದ್ದೇವೆ, ಇದು ಬಾರಿ ಬೇಸರದ ವಿಷಯ, ಅದೇ ರೀತಿಯಲ್ಲಿ ಕಳೆದ ಗೋಲಿಬಾರ್ ನಲ್ಲಿ ಕೂಡ ನಮ್ಮ ಸಹೋದರರನ್ನು ನಾವು ಕಳೆದು ಕೊಂಡಿದ್ದೇವೆ, ಅದೇ ರೀತಿಯಲ್ಲಿ ಹಲವು ಸಹೋದರರನ್ನು ಈ ಒಂದು ಜಾತಿ ಧರ್ಮದ ದ್ವೇಷಕ್ಕೆ ಬಲಿಯಾಗಿದ್ದಾರೆ,ಹಲವು ಸಹೋದರರು ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇನ್ನೂ ಜೈಲಿನಲ್ಲಿ ಇರುವ ಸ್ಥಿತಿ ಆಗಿದೆ, ಎನ್ನುವುದು ನಮ್ಮ ಸಮುದಾಯಕ್ಕೆ ಬಂದು ಮುಟ್ಟಿದೆ.

ಇಂದು ರೌಡಿ ಶೀಟರ್ ಒಬ್ಬರ ಕೊಲೆ ಆದ ವಿಷಯದಲ್ಲಿ ಎನ್ ಐ ಏ ಗೆ ನೀಡುವುದು ಒಂದು ರೀತಿಯಲ್ಲಿ ಕಾನೂನನ್ನು ದುರ್ಬಳಕೆ ಒಂದು ಸಾಕ್ಷಿ ಎಂದು ನಾನು ಭಾವಿಸುತ್ತೇನೆ.ಇದಕ್ಕೆಲ್ಲಾ ಕಾರಣ ನಮ್ಮ ಪಕ್ಷದ ಸಮುದಾಯದ ನಾಯಕರ ಒಂದು ಅಧಿಕಾರ ದಾಹ ಇಂದು ನಮ್ಮ ಸಮುದಾಯ ಕಾರ್ಯ ಕರ್ತರ ಒಂದು ಧ್ವನಿಗೆ ಮೌಲ್ಯ ಇಲ್ಲದಂತಾಗಿದೆ ಎಂಬುದು ಬಾರಿ ಬೇಸರದ ವಿಷಯ.

ಈ ಒಂದು ಮಯ್ಯತ್ ನ ರಾಜಕೀಯ ಮಾಡುವ ಸಂಘ ಪರಿವಾರದವರ ಒಂದು ಹಾರಾಟ ಅದು ನಮ್ಮ ಪಕ್ಷ ಒಂದು ಸರಿಯಾದ ರೀತಿಯಲ್ಲಿ ಅದಕ್ಕೆ ಕಡಿವಾಣ ಹಾಕದ ರೂಪದಲ್ಲಿ ಇರುವುದು ಒಂದು ಮಹಾ ಕಾರಣ ಆಗಿರುತ್ತದೆ, ಅದು ಬಾರಿ ಬೇಸರದ ವಿಷಯ ಕೂಡ, ಮತ್ತು ಅದು ಸಮುದಾಯಕ್ಕೆ ಒಂದು ಆಘಾತಃ ಕಾರೀ ಬೆಳವನಿಗೆ ಕೂಡ ಎಂದು ನಾನು ಭಾವಿಸುತ್ತೇನೆ.ಬಾರಿ ಸಮರ್ಪಕವಾಗಿ ನಾವು ಇಂದು ಅರ್ಥ ಮಾಡಬೇಕು, ಇಂದು ಮುಸ್ಲಿಮ್ ವಾಯ್ಸ್ ಗ್ರೂಪ್ ನಲ್ಲಿ ಬೇರೆ ಬೇರೆ ಪಕ್ಷದ ನಾಯಕರು , ವಿವಿಧ ಸಾಮಾಜಿಕ ಸಂಘದ ಪದಾಧಿಕಾರಿಗಳು,ಸಂಘಟನೆಗಳಲ್ಲಿ ತೊಡಗಿಸಿ ಕೊಂಡ ನನ್ನ ಸಹೋದರರೂ ನಾವು ಒಂದು ಆಲೋಚನೆ ಮಾಡಬೇಕು, ಈ ಮೊದಲು ಮಸೂದ್ , ಪ್ರವೀಣ್, ಫಾಝಿಲ್ ಕೊಲೆ ಆಗಿದೆ, ಆಗ ಬಿಜೆಪಿ ಸರಕಾರ ಇತ್ತು, ಆಗ ಪ್ರವೀಣ್ ಎಂಬ ಕೊಲೆ ಆದವನಿಗೆ ಮಾತ್ರ ಎನ್ ಐ ಗೆ ತನಿಖೆಗೆ ಆದೇಶ ಮಾಡಲಾಗಿದೆ, ಮಸೂದ್ ಮತ್ತು ಫಾಝಿಲ ಕೊಲೆಯ ಎಲ್ಲಾ ಆರೋಪಿಗಳು ಹೊರ ಬಂದಿದ್ದು, ಪ್ರವೀಣ್ ಹತ್ಯೆ ಆರೋಪಿಗಳು ಇನ್ನೂ ಒಳಗೆ ಇದ್ದಾರೆ!. ಅದೇ ರೀತಿಯಲ್ಲಿ ಮೊನ್ನೆ ಗುಂಪು ಹತ್ಯೆಯಲ್ಲಿ ಶವವಾದ ಸಹೋದರ ಅಶ್ರಫ್ ಅಥವಾ ಸುಹಾಸ್ ಶೆಟ್ಟಿ ಆಗಿರಬಹುದು, ಇನ್ನೊಂದು ಅಮಾಯಕ ಸಹೋದರ ರಹೀಮ್ ಕೊಲೆ ನಡೆದಾಗ ಈಗಿನ ಸರಕಾರ ಇಂದು ಪುನರಾವರ್ತನೆ ಆಗಿದೆ, ಪ್ರವೀಣ್ ನೆಟ್ಟಾರ್ ಗೆ ಎನ್ ಐ ಏ ಗೆ ನೀಡಲಾಗಿದೆ ಸುಹಾಸ್ ಶೆಟ್ಟಿ ಎನ್ ಐ ಏ ಗೆ ನೀಡಿದೆ ಇದು ಬಾರಿ ದುರಂತ ಎಂದು ಹೇಳಬಹುದು ನಮ್ಮ ಸಮುದಾಯಕ್ಕೆ ಇದಕ್ಕಿಂತ ದೊಡ್ಡ ನೋವು ಬೇರೆ ಏನು ಇದೆ ಎಂದು ನಾನು ಭಾವಿಸುತ್ತೇನೆ, ಅದೇ ಅಶ್ರಫ್ ಕೊಲೆ ಪ್ರಕರಣದಲ್ಲಿ ಆಗಲೇ ಐದು ಜನ ಹೊರಗೆ ಬಂದು ಆಯಿತು, ರಹೀಮ್ ಒಂದೆರಡು, ಯ ಆರು ತಿಂಗಳಲ್ಲಿ ಅವರು ಹೊರಗೆ ಬರುತ್ತಾರೆ, ಸುಹಾಸ್ ಶೆಟ್ಟಿಯದ್ದುಎನ್ ಐ ಏ ಗೆ ನೀಡಿದ ನಂತರ ಸಮುದ್ದಾಯ್ದ ಹಲವಾರು ಒಳಗೆ ಇರುತ್ತಾರೆ ಎಂಬುದು ನಾವು ನೆನಪಿಸಬೇಕಿದೆ.

ಇದಕ್ಕೆಲ್ಲಾ ಒಂದು ರೀತಿಯ ಅವಲೋಕನ ಮಾಡುವಾಗ ,ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಎಲ್ಲಾ ರಾಜಕೀಯ ನಾಯಕರ ಮಧ್ಯದೊಳಗಿನ ಒಂದು ವ್ಯಾಪಾರ ಸಂಭಂದ, ಬಿಸಿನೆಸ್ ಒಪ್ಪಂದ ಇಂದು ಈ ಒಂದು ಹಂತಕ್ಕೆ ನಮ್ಮ ಸಮುದಾಯವನ್ನು ತಂದು ನಿಲ್ಲಿಸಿವೆ ಎಂದು ಹೇಳಬಹುದು.
ಇವರ ರಾಜಕೀಯ ಲಾಭಕ್ಕೋಸ್ಕರ ಮುಸ್ಲಿಮ್ ಸಮುದಾಯದ ದ್ವನಿ ಇಂದು ಇವರಿಗೆ ಕೇಳಿಸುವುದಿಲ್ಲ, ನಮ್ಮ ಪಕ್ಷದ ಕಾರ್ಯ ಕರ್ತರ ದ್ವನಿ ಇವರಿಗೆ ಅಗತ್ಯ ಇಲ್ಲ, ಇವರಿಗೆ ವ್ಯಾಪಾರವೇ ಮುಖ್ಯ ಆಗಿದೆ ಎಂದು ನಾನು ಭಾವಿಸುತ್ತೇನೆ, ಇದರಿಂದಾಗಿಯೇ ಇಂದು ನಮ್ಮ ಸಮುದಾಯ ಈ ಒಂದು ಅಧ ಪತನಕ್ಕೆ ತಲುಪಿದೆ.
ಎಲ್ಲಿಯವರೆಗೆ ಪ್ರಚೋದನಾ ಕಾರೀ ಭಾಷಣ ಮಾಡುತ್ತಾರೋ ಅದಕ್ಕೆ ಕಡಿವಾಣ ಹಾಕುವುದಿಲ್ಲವೇ ಅಲ್ಲಿಯವರೆಗೆ ಈ ಜಿಲ್ಲೆಯಲ್ಲಿ ಶಾಂತಿಯಿಂದ ನೆಲೆಸಲು ಸಾದ್ಯವೇ ಇಲ್ಲ, ಎಂಬುದು ನಾವೆಲ್ಲರೂ ಅರ್ಥ ಮಾಡಬೇಕು, ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಬೇಕಿದೆ.

ಇದಕ್ಕೇ ಪೂರಕವಾಗಿ ನಾನು ನಿಮಗೆ ಒಂದು ವಿಷಯ ಹೇಳುವುದಾದರೆ ಈ ಎಲ್ಲಾ ಆಘಾತಕಾರಿ ಬೆಳವಣಿಗೆ, ಮತ್ತು ಸಮುದಾಯಕೆ ನಿರಂತರವಾಗಿ ನಡೆಯುವ ದೌರ್ಜನ್ಯ , ವಿವಿಧ ಕಾನೂನು ರೂಪದಲ್ಲಿ ಸಮುದಾಯಕೆ ಆಗುವ ಅನ್ಯಾಯವನ್ನು ಮನಗಂಡು ನಾನು ಒಂದು ಮೂರು ತಿಂಗಳ ಹಿಂದೆ ಸುಮಾರು ಆರು ತಿಂಗಳ ಹಿಂದಿನಂದ ಒಂದು ದಕ್ಷಣ ಕನ್ನಡ ಮುಸ್ಲಿಮ್ ಜನಪ್ರತಿನಿಧಿಗಳ, ಅದು ಗ್ರಾಮ ಪಂಚಾಯತ್, ತಾಲ್ಲೂಕು, ಜಿಲ್ಲಾ, ಕಾರ್ಪೊರೇಟರ್ ಗಳು ಈ ಒಕ್ಕೂಟದಲ್ಲಿ ಇದ್ದಾರೆ , ಇವರನ್ನೆಲ್ಲ ಸೇರಿಸಿ ನಮ್ಮ ಸಮುದಾಯಕ್ಕೆ ಒಂದು ದ್ವನಿ ನೀಡಬೇಕು ಎಂಬ ಉದ್ದೇಶದಿಂದ ಸುಮಾರು ಆರು ತಿಂಗಳಿಂದ ನನ ಎಫಾರ್ಟ್ ನಲ್ಲಿ ನಾನು ಈ ಒಂದು ಒಕ್ಕೂಟ ನಾನು ರಚನೆ ಮಾಡಿದ್ದೇನೆ, ರಚನೆ ಮಾಡಿದ ಉದ್ದೇಶವೇ ಇದು.

ಆ ಒಂದು ಉದ್ದೇಶದ ಮೊದಲು ಆಗಿ ನಾನು ಹೇಳುವುದಾದರೆ ಮೊನ್ನೆ ಶಾದಿ ಮಹಲ್ ನಲ್ಲಿ ನಡೆದ ರಾಜೀನಾಮೆಯ ಒಂದು ದೊಡ್ಡ ಅಜೆಂಡಾ ಹೊಂದಲು ಕಾರಣ ನಮ್ಮ ಒಕ್ಕೂಟ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.ಅದಕ್ಕಿಂತಲೂ ಏನು ಶಾದಿ ಮಹಲ್ ನಲ್ಲಿ ಮೊನ್ನೆ ಸಾಮೂಹಿಕ ರಾಜಿನಾಮೆಗೆ ಕಾಂಗ್ರೆಸ್ ಮುಖಂಡರು,ಕಾರ್ಯ ಕರ್ತರೂ, ಜನ ಪ್ರತಿನಿಧಿಗಳು ಒಟ್ಟು ಸೇರುವಿಕೆಯ ಮೊದಲು, ಏನು ಕುಡುಪು ಎಂಬಲ್ಲೇ ನಮ್ಮ ಸಹೋದರ ಅಮಾಯಕ ಅಶ್ರಫ್ ಗುಂಪು ಹತ್ಯೆಯಲ್ಲಿ, ಕೊಂಡು ಎಸೆದು ಹಾಕಿದಾಗ ಆದ ನೋವು ನಾವು ನಮ್ಮ ಪಕ್ಷದ ಉಸ್ತುವಾರಿ ಸಚಿವ ಯಾದಿ ಯಾಗೀ, ಗೃಹ ಸಚಿವರು ಸೇರಿ, ನಾವು ಎರಡು ಘಂಟೆಯ, ಈ ಜಿಲ್ಲೆಯ ಸಮುದಾಯದ ಎಲ್ಲಾ ಪಕ್ಷದ ನಾಯಕರು ಅವಿರತ ಅವರಲ್ಲಿ ಎಲ್ಲಾ ವಿಷಯದಲ್ಲಿ ಒಂದು ಹೋರಾಟ ಮಾಡಿದ ಹಾಗೆ ಅವರ ಕಿವಿಗೆ ರಾಚುವ ಹಾಗೆ ಹೇಳಿದರೂ ಒಂದು ಕಾರ್ಯ ಕೂಡ ಆಗಿಲ್ಲ ಎಂದು ಹೇಳುವುದು, ಒಂದು ಸಮಯದಲ್ಲಿ ಹೇಳಿ ಕೂಡ ನಮ್ಮ ಕಾರ್ಯ ಆಗಿಲ್ಲ ಎನ್ನುವುದು ಬೇಸರದ ವಿಷಯ ನಮಗೆ ಎಲ್ಲರಿಗೂ ಇತ್ತು. ಸ್ವಲ್ಪ ಸಮಯದಲ್ಲಿಯೇ ಇನ್ನೋರ್ವ ಸಹೋದರ ಕೊಳೆತ ಮಜಲು ರಹ್ಮಾನ್ ಓರ್ವ ಅಮಾಯಕರು ಒಂದು ಧರ್ಮ ರಾಜಕೀಯಕ್ಕೆ ಬಲಿಯಾದಾಗ ಈ ನಮ್ಮ ಸಮುದಾಯದ ನಮ ನಾಯಕರ ನೋವು ಸ್ಫೋಟಗೊಂಡು ಅದು ಶಾದಿ ಮಹಲ್ ನಲ್ಲಿ ಸೇರಿ ರಾಜಿನಾಮೆ ಅಜೆಂಡಾಕ್ಕೆ ಬಂದು ತಲುಪಿದೆ , ಇಂದು ಪಕ್ಷಕ್ಕೆ ಆ ಒಂದು ದೊಡ್ಡ ಮೆಸೇಜ್ ನೀಡಿದ ಕಾರಣಕ್ಕೆ ಈ ಜಿಲ್ಲೆಯ ಆಯುಕ್ತರು ಮತ್ತು ಎಸ್ಪಿಯವರನ್ನು ಉನ್ನತ ಅಧಿಕಾರಿಗಳ ಬದಲಿಸಲು ಕಾರಣ ಆಗಿದ್ದು ಕೂಡ ಒಂದು ಸಂತೋಷದ ವಿಷಯ, ಇದರ ಮಧ್ಯದಲ್ಲಿ ಬಾರಿ ಬೇಸರದ ವಿಷಯ ಏನು ಅಂದರೇ ನಾವು ಇಂದು ಓ ಗ್ಗಟ್ಟಿನಲ್ಲಿ ಈ ಜಿಲ್ಲೆಯ ಮುಸ್ಲಿಮ್ ನೇತಾರರು ಒಂದಾಗಿ ಪಕ್ಷದ ತಳಮಟ್ಟದ ಕಾರ್ಯ ಕರ್ತರೂ ಕೂಡ ಒಂದಾಗಿ ರಾಜಿನಾಮೆ ಪ್ರಸ್ತಾಪ ಇಟ್ಟ ಕಾರಣದಿಂದ ಇಷ್ಟೊಂದು ಬದಲಾವಣೆ, ಪರಿವರ್ತನೆ,ಆದ್ರೆ ಪೂರ್ತಿ ಬದಲಾವಣೆ ಆಗಲಿಲ್ಲ, ಬಡಾವಣೆಗೆ ಒಂದು ಫೌಂಡೇಶನ್ ಹಾಕಿದ ಹಾಗೆ ಆಗಿದೆ.

ಅದು ಎಷ್ಟು ಯಶಸ್ವಿ ಆಗಬಹುದು ಎಂದು ಹೇಳಲು ನನಗೆ ದೈರ್ಯ ಇಲ್ಲ, ಆದರೆ ಒಂದು ರೀತಿಯಲ್ಲಿ ಅದು ಸಮುದಾಯಕ್ಕೆ ಸಹಾಯ ಆಗಿದೆ ಎಂದು ನಾನು ಭಾವಿಸುತ್ತೇನೆ.ಅದರಲ್ಲಿ ಕೆಪಿಸಿಸಿ ಮಟ್ಟದಲ್ಲಿ ಒಂದು ಅಧ್ಯಯನ ಸಮಿತಿ ರಚನೆ ಆಯ್ತು ಅದರಲ್ಲಿ ಹಾಲಿ ,ಮಾಜಿ ಶಾಸಕರು, ರಾಜ್ಯ ಸಭಾ ಸದಸ್ಯರೂ, ನಮ್ಮದೇ ಸಮುದಾಯದ ನಾಸೀರ್ ಹುಸೇನ್ ಆಗಿರಬಹುದು, ಆ ಸಮಿತಿಯಲ್ಲಿ ಇದ್ದರೂ, ಅವರೊಂದಿಗೆ ನಾವು, ನಮ್ಗೆ ಬೇಕಾದ ಅವಹಾಲುಗಳನ್ನು ನಾವು, ಇಲ್ಲಿನ ಸ್ಥಿತಿ ಗತೀಯ ಬಗ್ಗೆ ಸಮುದಾಯಕ್ಕೆ ಎಷ್ಟು ನೋವಾಗಿದೆ ಎಂಬ ಬಗ್ಗೆ , ಮನದಟ್ಟು ಆಗಿ ಅವರಿಗೆ ನಾವು ಹೇಳಿದ್ದೇವೆ, ಬೇಸರದ ವಿಷಯ ಏನೆಂದರೆ, ಏನು ನಾವು ಆ ಶಾದಿ ಮಹಲ್ ಸಭ್ಯೆಯಲ್ಲಿ ತೀ ರ್ಮಾನ ಕೈ ಗೊಂಡಿದೇವೆ, ನಮ ಎಲ್ಲ ನಾಯಕರೂ ಕಾರ್ಯ ಕರ್ತರು ಒಟ್ಟಾಗಿ ಒಂದಾಗಿ ಇರಬೇಕು ಮುಂದಿನ ದಿನ ಉಸ್ತುವಾರಿ ಮಂತ್ರಿ ಬಂದರೆ ಭೇಟಿ ನಿರಾಕರಣೆ , ಅಂದರೆ ನಾವು ಅಂತರ ರೀತಿಯಲ್ಲಿ ಇರಬೇಕು ನಮ್ಮ ನೋವು ಅವರಿಗೆ ತಿಳಿಯಬಹುದು ಎಂಬ ಉದ್ದೇಶ ನಮ್ಮಲ್ಲಿ ಇತ್ತು, ಬೇಸರ ಏನು ಅಂದರೆ ಮರು ದಿನ ಕೆಲವು ಅಧಿಕಾರ ದಾಹದ ನಮ್ಮ ಸಮುದಾಯದ ನಾಯಕರು ಅಲ್ಲಿ ಹೋಗಿ ಅವರನ್ನು ಭೇಟಿ ಮಾಡಿ, ನಮ ಒಗ್ಗಟ್ಟಿಗೆ ಅವರು ಮುರಿಯುವಿಕೆ ಪ್ರಯತ್ನ ಬಾರಿ ಬೇಸರದ ವಿಷಯ, ಎಂದರು.