December 3, 2024

Vokkuta News

kannada news portal

ಉಳ್ಳಾಲ, ಬಸ್ಥಾನುಲ್ ಉಲೂಮ್ ಮದರಸಾ ಪೇಂಟೆ,ಮಿಲಾದ್ ಫೆಸ್ಟ್ ಆಚರಣೆ.

ಉಳ್ಳಾಲ : ರಹಮಾನಿಯ ಜುಮಾ ಮಸೀದಿ ಅಧ್ಯಕ್ಷ ಮೊಹಿಯುದ್ದೀನ್ ಹಸನ್ ಹಾಜಿ ಅಧ್ಯಕ್ಷತೆಯಲ್ಲಿ ಬುಸ್ತಾನುಲ್ ಉಲೂಮ್ ಮದರಸ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಮಕ್ಕಳ ಕಾರ್ಯಕ್ರಮ ನಡೆಯಿತು. ರಹ್ಮಾನಿಯ ಮಸೀದಿಯ ಜುಮಾ ಖತಿಬ್ ಹಾಜಿ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೇಟೆ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ದೀರ್ಘಕಾಲದ ಬುಸ್ತಾನುಲ್ ಉಲೂಮ್ ಮದರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶರೀಫ್ ಮದನಿ ಉಸ್ತಾದ್ ಅವರಿಗೆ ಸನ್ಮಾನಿಸಲಾಯಿತು ಹಾಗೂ ಪೇಟೆ ಮೊಹಲ್ಲಾದವರಿಗೆ ಕ್ವಿಝ್ 2024 ವಿಜೇತ ಅಭ್ಯರ್ಥಿಗಳಿಗೆ ಪ್ರಥಮ,ದ್ವೀತಿಯ ಮತ್ತು ತೃತೀಯ ಬಹುಮಾನ ನೀಡಲಾಯಿತು.

ಅಕ್ಟೋಬರ್ 27ರಂದು ಪೇಟೆ ಜುಮಾ ಮಸೀದಿ ವತಿಯಿಂದ ರಕ್ತದಾನ ಶಿಬಿರ ಪೋಸ್ಟರ್ ಉದ್ಘಾಟನೆ ಉಳ್ಳಾಲ ದರ್ಗಾ ಅಧ್ಯಕ್ಷ ಮತ್ತು ಪೇಟೆ ಮಸೀದಿ ಆಡಳಿತ ಸಮಿತಿಯವರು ನೆರೆವೆರೆಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾದ ಅಧ್ಯಕ್ಷರಾಗಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬ್ ಸಖಾಫಿ, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು. ಎಚ್. ಫಾರೂಕ್, ಇಶಾಕ್, ಉಳ್ಳಾಲ ಪೇಟೆ ಮಸೀದಿ ಉಪಾಧ್ಯಕ್ಷ ನಝಿರ್ ಕರಾವಳಿ, ಖಜಾಂಜಿ ಯು.ಬಿ ಯೂಸುಫ್, ಸದಸ್ಯ ಶರೀಫ್ ಬಸ್ತಿಪಡ್ಪು, ಶರಫಾತ್, ಅಝೀಮ್, ಫಾರೂಕ್ ಸಾದುಕನ, ಇಸ್ಮಾಯಿಲ್ ಪುತ್ತೂಬಾವ, ಆಫ್ರಿದ್ ಕೊಟ್ಟಾರ,ಸದರ್ ಆಶ್ರಫ್, ನಾಸಿರ್ ಮುಸ್ಲಿಯಾರ್, ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಫಯಾಜ್ ಕೊಟ್ಟಾರ, ಬ್ಲಾಕ್ ಅಂಡ್ ವೈಟ್ ಶಹಿರ್, ಪೇಟೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುಸ್ತಫ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.( ವರದಿ: ತೌಸೀಫ್)