September 17, 2024

Vokkuta News

kannada news portal

ಉಳ್ಳಾಲ ಪೇಟೆ,ಮಸೀದಿ, ಬಸ್ತಾನುಲ್ ಉಲೂಮ್ ಸಂಸ್ಥೆಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ.

ಉಳ್ಳಾಲ: ರಹಮಾನಿಯಾ ಜುಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಪೇಟೆ ಉಳ್ಳಾಲ ಜಂಟಿ ಆಶ್ರಯದಲ್ಲಿ ಇಂದು ಪೇಟೆ ಜುಮಾ ಮಸೀದಿ ವಠಾರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪೇಟೆ ಜುಮಾ ಮಸೀದಿ ಅಧ್ಯಕ್ಷ ಹಾಜಿ. ಮೋಹಿದ್ದಿನ್ ಹಸನ್ ಅವರು ದ್ವಜಾರೋಹಣ ನೆರೆವೇರಿಸಿ ಮಾತನಾಡಿದರು.
ಬ್ರಿಟಿಷರ ಆಳ್ವಿಕೆಯಿಂದ ಭಾರತ ಹೋರಾಟಗಾರರು ಬ್ರಿಟಿಷರ ಗುಲಾಮ ಸಂಕೋಲೆಯಿಂದ ಹೋರಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಪೂರ್ವ ಜನರು ಕಲಾಕಾಲಕ್ಕೆ ಸಾಮಾನ್ಯ ಜನರು ಮೌಲಿಗಳು ಮತ್ತು ಪಂಡಿತರು ಧುಮುಕಿ ಹೋರಾಡಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ದರ್ಗಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹಾಜಿ. ಅಬ್ದುಲ್ ರಶೀದ್ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸ್ವತಂತ್ರೋತ್ಸವದ ಸಲುವಾಗಿ ಮದರಸ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿತ್ತು ಅದರಲ್ಲಿ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಪಿ.ಎಚ್, ಪೇಟೆ ಮಸೀದಿ ಉಪಾಧ್ಯಕ್ಷ ನಾಝಿರ್ ಕರಾವಳಿ, ಕಾರ್ಯದರ್ಶಿ ಮುಸ್ತಫಾ ಅಹ್ಮದ್,ಖಜಾಂಜಿ ಯು.ಬಿ ಯೂಸುಫ್,ಸದಸ್ಯ ಶರೀಫ್,ಅಝೀಮ್, ಶರಾಫತ್ ಬಸ್ತಿಪಡ್ಪು, ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಫಯಾಜ್ ಕೊಟ್ಟಾರ, ಕಾರ್ಯದರ್ಶಿ ಸಿನಾನ್ ಕೊಟ್ಟಾರ, ಪೇಟೆ ಜುಮಾ ಮಸೀದಿ ಖತಿಬ್ ಇಬ್ರಾಹಿಂ ಮದನಿ ಸದರ್ ಅಶ್ರಫ್ ಸಹದಿ,ಮೊಹಲ್ಲಿಮ್ ನಾಸಿರ್ ಮುಸ್ಲಿಯಾರ್ ,ಶರೀಫ್ ಮದನಿ,ಬಿ.ಎಫ್.ಸಿ ಅಧ್ಯಕ್ಷ ಹನೀಫ್, ಬ್ಲಾಕ್ ಅಂಡ್ ವೈಟ್ ಅಧ್ಯಕ್ಷ ಸಫಿಲ್ ಬಸ್ತಿಪಡ್ಪು ಉಪಸ್ಥಿತರಿದ್ದರು.
ಪೇಟೆ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ತೌಸೀಫ್ ಸ್ವಾಗತಿಸಿ ಕಾರ್ಯಕ್ರಮ ನಿರೋಪಿಸಿದರು.