ಮುಂಬೈ: ಇತ್ತೀಚೆಗೆ ಖ್ಯಾತ ರಾಜಕೀಯ ಹಾಸ್ಯ ಪ್ರಹಸನಕಾರ ಕುನಾಲ್ ಕಮ್ರಾ ರವರ ಪ್ರದರ್ಶನ ಸ್ಥಳ ಹೆಬಿಟೇಟ್ ಸ್ಟುಡಿಯೋ, ಮತ್ತು ಅಲ್ಲಿ ನೇರಿದಿದ್ದ ಸಭಿಕರ ವಿರುದ್ಧ ಶಿಂಧೆ ಶಿವಸೇನಾ ಬಣದ ಪುಂಡರು ನುಗ್ಗಿ ದಾಂದಲೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ದ ವಿರುದ್ಧದ ಘೋರ ಕೃತ್ಯವಾಗಿದೆ ಮತ್ತು ಕೃತ್ಯದಾರರ.ವಿರುದ್ಧ ಮಹಾರಾಷ್ಟ್ರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ವಿರುದ್ಧ ಮಹರಾಷ್ಟ್ರ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲೈಬರ್ಟೀಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಕಮ್ರಾ ಕುನಾಲ್ ರವರು ಸರಕಾರವು ಜನರನ್ನು ಹೇಗೆ ವಿಫಲಗೊಳಿಸಿದೆ ಎಂಬುದರ ಬಗ್ಗೆ ಹಿಂದಿ ಸಿನಿಮಾ ಹಾಡುಗಳ ಧಾಟಿಯಲ್ಲಿ ಸಭಿಕರ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಇಂತಹ ಚಟುವಟಿಕೆ ಪ್ರಜಾಪ್ರಭುತ್ವದಲ್ಲಿ ನ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿದೆ ಎಂದು ಪಿಯುಸಿಎಲ್ ಹೇಳಿದೆ. ಸಭೆಯಲ್ಲಿ ಸುಮಾರು ಎಂಬತ್ತು ಜನರು ಭಾಗಿಯಾಗಿ ಪ್ರದರ್ಶನ ಇನ್ನೇನು ಆರಂಭವಾಗುತ್ತಿತ್ತು. ಶಿವಸೇನಾ ಪುಂಡರ ಗುಂಪು ಪ್ರದರ್ಶನ ಸ್ಥಳಕ್ಕೆ ನುಗ್ಗಿ ಆಯುಧಗಳಿಂದ ಹಾನಿಗೊಳಿಸಿದೆ.ದೃಶ್ಯವನ್ನು ವೇದಿಯೂ ಮೂಲಕ ವ್ಯಾಪಕ ಗೊಳಿಸ ಲಾಗಿದೆ. ಕೃತ್ಯಕ್ಕೆ ಅವರು ನೀಡಿದ ಸಮಜಾಯಿಷಿ ಏನೆಂದರೆ ಈ ಪ್ರದರ್ಶನ ಅವರ ಭಾವಣೆಗಳನ್ನು ಕೆರಳಿಸಿದೆ ಎಂದಾಗಿದೆ. ಮುಂದುವರಿದು ಮುಂಬೈ ನಗರಪಾಲಿಕೆ ಯಾವುದೇ ಮುನ್ಸೂಚನೆ ನೀಡದೆ ಸ್ಟುಡಿಯೋದ ರಚನೆಯನ್ನು ದ್ವಂಸ ಮಾಡಿದೆ. ಈ ಏಕ ಪಕ್ಷೇಯ ಕ್ರಮ ಇತ್ತೀಚೆಗಿನ ಸುಪ್ರೀಮ್ ಕೋರ್ಟಿನ ನಿರ್ದೇಶನ ದ ಉಲ್ಲಂಘನೆ ಆಗಿದೆ. ಏಕಾ ಏಕೀ ಇಂತಹ ಶಿಕ್ಷಾತ್ಮಕ ನೆಡೆ ಸಂವಿದಾನ ವಿರೋಧಿ ಆಗಿದೆ ಎಂದು ಪಿಯುಸಿಎಲ್ ಹೇಳಿದೆ. ಸರಕಾರದ ಮುಖ್ಯಸ್ಥರು ವಿಧಾನ ಸಭೆಯ ಅಂಗಣದಲ್ಲಿ ಏಕಾ ಏಕೀ ಕಮ್ರಾ ರವ್ರನ್ನು ನಗರ ನಕ್ಷೆಲ್ ದೇಶದ್ರೋಹಿ ಎಂದು ಹೇಳಿಕೆ ನೀಡಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯ ದ ಹರಣವಾಗಿದೆ. ಪ್ರಜಾ ಪ್ರಭುತ್ವ ವಿರೋಧಿ ನಡೆ ಸರಕಾರದ್ದು ಎಂದು ಹೇಳಿದೆ.
ಕಮ್ರ ವಿರುದ್ಧ ಮತ್ತು ಕೃತ್ಯಾದಾರರ ವಿರುದ್ಧ ತಲಾ ಪ್ರಥಮ ವರ್ತಮಾನ ವರದಿ ದಾಖಲು ಆಗಿದೆ. ಪಿಯುಸಿಎಲ್ ತನ್ನ ಬೇಡಿಕೆಯಲ್ಲಿ ಮುಂಬೈ ಪೊಲೀಸರ ವಿರುದ್ಧ ಮಹಾರಾಷ್ಟ್ರ ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲು ಗೊಳಿಸಬೇಕು, ರಚನೆ ಧ್ವಂಸಕ್ಕೆ ಪರಿಹಾರ ನೀಡಬೇಕು, ಕಾಮ್ರ ವಿರುದ್ಧದ ಪ್ರಕರಣವನ್ನು ಹಿಂಪಡೆಯಬೇಕು, ಪರಿಹಾರ ಘೋಷಿಸಬೇಕು ಎಂದು ಮಹಾ ರಾಷ್ಟ್ರ ಪಿಯುಸಿಎಲ್ ಶಿರಾಝ್ ಪ್ರಭು, ಸಂಧ್ಯಾ ಗೋಖಲೆ ಹಾಗೂ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀ ವಾಸ್ತವ ಮತ್ತು ಕಾರ್ಯದರ್ಶಿ ವಿ.ಸುರೇಶ್ ಒತ್ತಾಯಿಸಿದ್ದಾರೆ.
kannada news portal
ಇನ್ನಷ್ಟು ವರದಿಗಳು
ಪತ್ರಿಕಾ ಸ್ವಾತಂತ್ರ್ಯ – ಚಟುವಟಿಕೆ ಮೇಲೆ ಜಮ್ಮು. ಕಾಶ್ಮೀರ ಸರಕಾರದ ಕಣ್ಗಾವಲು ಆದೇಶ ಖಂಡಿಸಿದ ಪಿಯುಸಿಎಲ್.
ಭಾರತದ ಬೃಹತ್ ಅಲ್ಪಸಂಖ್ಯಾತ ವರ್ಗ ಮಹಿಳೆಯರು: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಅಪೇಕ್ಶಿಸಿದ ಸು.ಕೋರ್ಟ್.
ಆಪರೇಷನ್ ಸಿಂದೂರ್ ನಿಂದ ಪಾಕಿಸ್ತಾನ ಮತ್ತು ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ: ಬಿಹಾರ ರ್ಯಾಲಿಯಲ್ಲಿ ಪ್ರಧಾನಿ ಮೋದಿ ವ್ಯಂಗ.