February 17, 2026

Vokkuta News

kannada news portal

ಸೌದಿ ಅರೇಬಿಯ: ಚಂದ್ರದರ್ಶನ,  ಬುಧವಾರ ರಂಜಾನ್ ಆರಂಭ.

ರಿಯಾದ್: ರಂಜಾನ್ ತಿಂಗಳ ಆರಂಭವನ್ನು ಸೂಚಿಸುವ ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಬುಧವಾರದಿಂದ ಆರಂಭವಾಗುವಂತೆ  ಸುಪ್ರೀಂ ಕೋರ್ಟ್ ಮಂಗಳವಾರ ರಂಜಾನ್ ವೃತ ಪ್ರಕಟಿಸಿದೆ.

ಆದ್ದರಿಂದ ರಂಜಾನ್ ಬುಧವಾರ, ಫೆಬ್ರವರಿ 18 ರಂದು ಆರಂಭವಾಗುತ್ತದೆ ಮತ್ತು ಮುಸ್ಲಿಮರು ಪವಿತ್ರ ತಿಂಗಳಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಆಹಾರ ಸೇವನೆಯನ್ನು ಮತ್ತು  ಉಪೇಕ್ಷಿಸಿ ವೃತ ಆಚರಿಸಲಿದ್ದಾರೆ.

ಇದು ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಇದನ್ನು ವಿಶ್ವಾದ್ಯಂತ ಮುಸ್ಲಿಮರು ಉಪವಾಸ, ಸಾಮೂಹಿಕ ಪ್ರಾರ್ಥನೆ, ಚಿಂತನೆ ಮತ್ತು ಸಮುದಾಯದ ತಿಂಗಳಾಗಿ ಆಚರಿಸುತ್ತಾರೆ.

ಈ ತಿಂಗಳಲ್ಲಿ ಕುರಾನ್ ಸಂದೇಶವೇ ಪ್ರವಾದಿ ಮುಹಮ್ಮದ್‌ ರವರಿಗೆ ಅವತೀರ್ಣ ವಾಯಿತು  ಎಂದು ಮುಸ್ಲಿಮರು ನಂಬುತ್ತಾರೆ.

ಪವಿತ್ರ ಮಾಸವು ಈದ್ ಅಲ್-ಫಿತರ್ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ.