February 16, 2026

Vokkuta News

kannada news portal

ಹಣ ವರ್ಗಾವಣೆ: ಎಸ್‌ಡಿಪಿಐ ರಾಷ್ಟ್ರೀಯಾಧ್ಯಕ್ಷ ಎಮ್.ಕೆ.ಫೈಝಿಗೆ ಜಾಮೀನು.ಮಂಗಳೂರು ಕಾರ್ಯಕಾರಿಣಿ ಸಭೆಯಲ್ಲಿ ಮರು ಆಯ್ಕೆಯಾಗಿದ್ದ ಫೈಝಿ.

ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಧ್ಯಕ್ಷ ಎಂ.ಕೆ. ಫೈಝೀ ಎಂದೇ ಜನಪ್ರಿಯರಾಗಿರುವ ಮೊಯ್ದೀನ್ ಕುಟ್ಟಿ ಕೆ ಅವರಿಗೆ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಎಸ್‌ಡಿಪಿಐ,  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ರಾಜಕೀಯ ವಿಭಾಗವಾಗಿದ್ದು, ಇದನ್ನು ಕೇಂದ್ರ ಗೃಹ ಇಲಾಖೆ , 2022 ರಲ್ಲಿ ನಿಷೇಧಿಸಿತ್ತು.

ಪಿಎಫ್‌ಐಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಸಂದರ್ಭದಲ್ಲಿ ಫೈಝೀ ಅವರನ್ನು ಮಾರ್ಚ್ 2025 ರಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ  ಬಂಧಿಸಿತ್ತು.

ಇಡಿ ಪ್ರಕರಣದ ಪ್ರಕಾರ, ಎಸ್ ಡಿ ಪಿ ಐ, ಪಕ್ಷವು ಪಿಎಫ್ ಐ ನ ರಾಜಕೀಯ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹಣಕಾಸು ಮತ್ತು ಕಾರ್ಯಾಚರಣೆಗಳಿಗೆ ಅದನ್ನು ಅವಲಂಬಿಸಿದೆ, ಕೋಟ್ಯಂತರ ಮೌಲ್ಯದ ಅಪರಾಧದ ಆದಾಯವನ್ನು ಪಿಎಫ್ ಐ ನಿಂದ ಎಸ್ಡಿಪಿಐ ಗೆ ಬಹಿರಂಗಪಡಿಸದ ಮಾರ್ಗಗಳ ಮೂಲಕ ರವಾನಿಸಲಾಗುತ್ತದೆ, ಎಂಬ ಆರೋಪ ಇತ್ತು.

ಫೈಜಿ ಬಂಧನಕ್ಕೆ ಮುನ್ನ ಇಡಿ ಯ ಹಲವು ಸಮನ್ಸ್‌ಗಳನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ, ಇದರಿಂದಾಗಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ, ಎಂಬುದು ಇಡಿ ವಾದ.

ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ಅವರೊಂದಿಗೆ ವಕೀಲರಾದ ರಜತ್ ಭಾರದ್ವಾಜ್, ಅಂಕಿತಾ ಎಂ ಭಾರದ್ವಾಜ್, ದುಷ್ಯಂತ್ ಚೌಧರಿ, ಮೊಹಮ್ಮದ್ ಫಿಯಾಜ್, ವಿಶ್ವಜೀತ್ ಸಿಂಗ್ ಮತ್ತು ಸಿದ್ಧಾರ್ಥ್ ಸಿಂಗ್ ಅವರು ಎಂ.ಕೆ.ಫೈಝಿ  ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಹಾಜರಾಗಿ ವಾದಿಸಿದ್ದರು.

ಇಡಿಯನ್ನು ಅದರ ವಿಶೇಷ ವಕೀಲ ಜೊಹೆಬ್ ಹೊಸೈನ್, ಪ್ಯಾನಲ್ ಕೌನ್ಸಿಲ್ ವಿವೇಕ್ ಗುಮಾನಿ ಮತ್ತು ವಕೀಲರಾದ ಪ್ರಾಂಜಲ್ ತ್ರಿಪಾಠಿ, ಕಾರ್ತಿಕ್ ಸಬರ್ವಾಲ್ ಮತ್ತು ಕನಿಷ್ಕ್ ಮೌರ್ಯ ಪ್ರತಿನಿಧಿಸಿದ್ದರು. ಫೈಝಿ ಅವರನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಗಿತ್ತು. ಮಂಗಳೂರು ನಲ್ಲಿ ನಡೆದ ಬಹಿರಂಗ ಸಭೆ ಮತ್ತು ರ್ಯಾಲಿ ಯಲ್ಲಿ ಬೃಹತ್ ಜನ ಜಮಾವಣೆ ಸೇರಿತ್ತು.