November 27, 2025

Vokkuta News

kannada news portal

ಯುನಿವೆಫ್ ಕರ್ನಾಟಕ ಸಂಸ್ಥೆಯ ಸೀರತ್ ಅಭಿಯಾನ ಅಂಗವಾಗಿ ಶಿಕ್ಷಕರ ಮತ್ತು ವಕೀಲರ ಸ್ನೇಹ ಸಮ್ಮಿಲನ ಕಾರ್ಯಕ್ರಮ.

ಮಂಗಳೂರು: ಯುನಿವೆಫ್ ಕರ್ನಾಟಕ ವತಿಯಿಂದ ಇಪ್ಪತ್ತನೇ ವರ್ಷದ ‘ ಅರಿಯಿರಿ ಮನುಕುಲದ ಪ್ರವಾದಿ ಮುಹಮ್ಮದ್ ಸ.ಅ ‘  ರವರ ಸೀರತ್ ಪ್ರಚಾರ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಇಂದು ಮುಸ್ಲಿಮ್ ಶಿಕ್ಷಕರು ಮತ್ತು ವಕೀಲರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಫಲ್ನೀರ್ ಲುಲು ಸೆಂಟರ್ ಅಲ್ ವಹ್ದಾ ಆಡಿಟೋರಿಯಂ ನಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸ್ತೆಯ ಮುಖ್ಯಸ್ಥರಾಗಿದ್ದ ಜ. ರಫೀಉದ್ಡೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಪ್ರವಾದಿ ಮೊಹಮ್ಮದ್ (ಸ) ರವರ ಮೇಲಿನ ಅಪಪ್ರಚಾರ ನಿವಾರಣಾ ನಿಟ್ಟಿನಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಬದ್ರಿಯಾ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾಗಿದ್ದ ಜ. ಯೂಸುಫ್ ಡಿ ಮತ್ತು ಜ. ಹಂಝ ಯು.ಎನ್. ರವರು ಮಾತಾಡಿದರು. ಪ್ರವಾದಿ ಮತ್ತು ದಾರ್ಶನಿಕರ ಮೇಲಿನ ಅಪಪ್ರಚಾರದ ಮೂಲದ ಬಗ್ಗೆ ವಕೀಲರು ಮತ್ತು ಸಾಮುದಾಯಿಕ ಎನ್.ಜಿ.ಒ ಸದಸ್ಯರಾದ ಮೊಹಮ್ಮದ್ ಹನೀಫ್. ಯು ವಿವರಣೆ ನೀಡಿದರು. ಯು. ಕೆ. ಖಾಲಿದ್ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಹಿರಿಯ ವಕೀಲರಾದ ನೂರುದ್ದೀನ್ ಸಾಲ್ಮರ ಚರ್ಚಾ ವಿಷಯವನ್ನು ಪ್ರಸ್ತಾಪಿಸಿ ಉದ್ಘಾಟಿಸಿದರು. ಪ್ರವಾದಿ ( ಸ ) ರವರ ಮೇಲಿನ ಆಕ್ಷೇಪಗಳು ಮತ್ತು ಪರಿಹಾರ ಸೂತ್ರ ಎಂಬ ಬಗ್ಗೆ ಚರ್ಚೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ವಕೀಲರಾದ ಅಸ್ಗರ್, ಇಬ್ರಾಹಿಂ ಕುದ್ರೋಳಿ , ಸಿರಾಜುದ್ದೀನ್ ಮತ್ತಿತರ ವಕೀಲ ಮಿತ್ರರು ಭಾಗವಹಿಸಿದ್ದರು. ಜಮಿಯತುಲ್ ಫಲಾಹದ ಶಾಹುಲ್ ಹಮೀದ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.