ವೆಬ್: ಪಬ್ಲಿಕ್ ವಾಯ್ಸ್ ವಾಟ್ಸ್ ಆಪ್ ಹ್ಯಾಂಡಲ್ ಸಾಮಾಜಿಕ ಜಾಲತಾಣ ಆನ್ ಲೈನ್ ನಲ್ಲಿ ನಿನ್ನೆ 09 ಜನವರಿ ಬಾ . ಕಾ. ರಾತ್ರಿ ಗಂಟೆ 10.00 ಕ್ಕೆ ನಡೆದ ಸಂವಾದದಲ್ಲಿ ರಾಜ್ಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರಾದ ಅಪ್ಸರ್ ಕೂಡ್ಲಿ ಪೇಟೆ ಅವರು ಕೇಂದ್ರ ಸರಕಾರ ಚುನಾವಣಾ ಆಯೋಗದ ಮೂಲಕ ಜಾರಿ ಗೊಳಿಸಿದ ಎಸ್ ಐ ಆರ್ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ ಬಗ್ಗೆ ಪ್ರಜೆಗಳು ಎಚ್ಚೆತ್ತು ಕೊಳ್ಳಬೇಕು ಎಂದು ಕರೆ ನೀಡಿದರು. ಸಂವಾದವನ್ನು ಸಲೀಮ್ ಪರಂಗಿಪೇಟೆ, ಸ್ವಾಗತಿಸಿ, ರಫೀಕ್ ಪರ್ಲಿಯಾ ನಿರೂಪಿಸಿದರು.
ಅಫ್ಜಲ್ ಕೂಡ್ಲಿ ಪೇಟೆ: ಎಸ್ ಐ ಆರ್ ಅಂದರೆ ಸ್ಪೆಷಲ್ ಇಂಟೆನ್ಸಿವ್ ರಿವಿಶನ್, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ, ಇದು ಬೇರೇನೂ ಅಲ್ಲದೆ ಎನ್.ಆರ್.ಸಿ, ಎನ್ ಆರ್ ಸಿ ಯನ್ನು ಇಂದು ನೇರವಾಗಿ ಅನುಷ್ಠಾನ ತರಲು ಸಾಧ್ಯವಿಲ್ಲದ.ಪರಿಸ್ಥಿತಿಯನ್ನು ನಾವೆಲ್ಲರೂ ಸೇರಿ ನಿರ್ಮಾಣ ಮಾಡಿದ್ದೇವೆ, ಇದಕ್ಕೆ ದೇಶದಾದ್ಯಂತ ಅದರ ವಿರುದ್ಧ ಬೀದಿಗೆ ಇಳಿದು, ಆರಂಭದಲ್ಲಿ ಸಣ್ಣ ಮಟ್ಟದ ಹೋರಾಟ ನಂತರ ತೀವ್ರ ಹೋರಾಟದ ಫಲವಾಗಿ ಶಾಹಿನ್ ಭಾಗ್ ನ ಮಹಿಳೆಯರು ಬೀದಿಗೆ ಇಳಿದಾಗ ಒಂದು ಹೆಜ್ಜೆ ಹಿಂದೆ ಇಟ್ಟರು, ಆದರೆ ಈಗ ಎಸ್ ಐ ಆರ್ ಅನ್ನು ತಂದಾಗ ಇದಕ್ಕೆ ಪ್ರತಿರೋಧ ಬರುತ್ತದೆ ಎಂದು ಮಂಗಂಡಾಗ ಇದನ್ನು ಕೇಂದ್ರ ಚುನಾವಣಾ ಆಯೋಗದ ಮೂಲಕ ಜಾರಿ ಮಾಡುವ ಒಂದು ದೊಡ್ಡ ಹುನ್ನಾರ ಆಗಿದೆ.
ಅಫ್ಜಲ್ ಕೂಡ್ಲಿ ಪೇಟೆ:ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ ಅದು ಸಾಂವಿಧಾನಿಕವಾಗಿ ನಿಷ್ಪಕ್ಷ ವಾಗಿ ದೇಶದಲ್ಲಿ ಚುನಾವಣೆ ನಡೆಸಬೇಕಿದೆ. ಇಂದು ಎಸ್ ಐ ಆರ್ ಅನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸಂಘ ಪರಿವಾರದ ಬೇಯಿಸಿದ ಅಜೆಂಡಾ ಆದ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಕೊಟ್ಟಿದೆ ಹೊರತು, ನಾವು ಭಾರತೀಯರು ಕೊಟ್ಟಿದ್ದು ಅಲ್ಲ. ಇಂದು ಚುನಾವಣಾ ಆಯೋಗ ವನ್ನು ಮುಂದಿಟ್ಟು ನಾಗರಿಕರ ಪೌರತ್ವ ವನ್ನು ಪ್ರಶ್ನೆ ಮಾಡುತ್ತಿದೆ. ಈಗ ಆರಂಭದ ಹಂತದಲ್ಲಿ ಗೊತ್ತಾಗುವುದಿಲ್ಲ, ಈಗ ಮ್ಯಾಪಿಂಗ್ ನಡೆಯುತ್ತಾ ಇದೆ.
ಅಫ್ಜಲ್ ಕೂಡ್ಲಿ ಪೇಟೆ: ಉದಾಹರಣೆಗೆ ನಿನ್ನೆಯ ಸುದ್ದಿ ಪ್ರಕಾರ ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿಗೆ ಚುನಾವಣಾ ಆಯೋಗ ನೋಟೀಸು ಮಾಡಿದೆ.ನಿಮ್ಮ ಪೌರತ್ವವನ್ನು ಸಾಬೀತುಪಡಿಸಿ ಎಂದು. ಈ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ಸಂವಿಧಾನ ನೀಡಲಿಲ್ಲ.ಚುನಾವಣಾ ಆಯೋಗಕ್ಕೆ ಮತದಾರರ ವಿವರ ತಿದ್ದುಪಡಿ.ಸೇರ್ಪಡೆ ಮರಣ ಹೊಂದಿದ ವರ ಹೆಸರನ್ನು ತೆಗೆಯುವ ಅಧಿಕಾರ ಇದೆ ಹೊರತು ಯಾವುದೇ ವೊಂದು ಪೌರನ ಪೌರತ್ವ ದಾಖಲೆ ಕೇಳುವ ಅಧಿಕಾರ ಇಲ್ಲ.
ಅಮೃತ್ ಸೇನ್ ನ ಪೌರತ್ವ ದಾಖಲೆ ಕೂಡ ಕೇಳಲಾಗಿದೆ.ಇದು ಈ ಪ್ರಕ್ರಿಯೆ ಗಂಭೀರತೆಯನ್ನು ಸೂಚಿಸುತ್ತದೆ. ಈಗಾಗಲೇ ಬಿಹಾರದಲ್ಲಿ ಮೂರು ಕೋಟಿ ಮತದಾರರನ್ನು ಹೊರಗೆ ಇಟ್ಟು, ನಂತರ ಸುಪ್ರೀಂ ಕೋರ್ಟು ಆಧಾರ್ ಕಾರ್ಡ್ ಅನ್ನು ದಾಖಲೆ ಆಗಿ ಪರಿಗಣಿಸಲು ಹೇಳಿದಾಗ ಎರಡು ಲಕ್ಷ ನಲವತ್ತು ಸಾವಿರ ಜನ ರಿ ಅಪ್ಲೋಡ್ ಆದರು ಆದರೂ ಅರವತ್ತು ಲಕ್ಷ ಜನರು ಹೊರಗೆ ಉಳಿಯುತ್ತಾರೆ.
ತಮಿಳು ನಾಡುವಿನಲ್ಲಿ ತೊಂಬತ್ತು ಏಳು ಲಕ್ಷ ಜನ ಹೊರಗೆ ಉಳಿಯುತ್ತಾರೆ. ಇದು ಕೋಟಿಗಟ್ಟಲೆ ಜನ ಮತದಾರರನ್ನು ಹೊರಗೆ ಇಡುವ ಹುನ್ನಾರ ಆಗಿದೆ.
ಅಫ್ಜಲ್ ಕೂಡ್ಲಿ ಪೇಟೆ: ಕೊನೆಯ ದಿನದಲ್ಲಿ ಏನಾಗುತ್ತೆ ಅಂದರೆ ಪ್ರಕ್ರಿಯೆ ಮುಗಿದ ನಂತರ ಟ್ರಿಗರ್ ಇರುವುದೂ ಎಸಿ ಎಸ್ಟಿ ಒಬಿಸಿ ಮತ್ತು ಮೈನಾರಿಟಿ , ಬಿಹಾರದಲ್ಲಿ ಮೂರು ಲಕ್ಷ , ತಮಿಳು ನಾಡಿನಲ್ಲಿ ತೊಂಬತ್ತ ಏಳು ಲಕ್ಷ, ಈ ಸಮುದಾಯದಲ್ಲಿ ಅವರು ಅಧಿಕ ದಾಖಲೆ ಕೇಳುತ್ತಾರೆ.ದಾಖಲಾತಿಗಳು ಬಡವನ ಅತ್ತಿರ ಇರುವುದಿಲ್ಲ. ಈ ಹುನ್ನಾರದ ವಿರುದ್ಧ ಎಚ್ಚೆತ್ತು ಕೊಳ್ಳಬೇಕು.
ಅಫ್ಜಲ್ ಕೂಡ್ಲಿ ಪೇಟೆ: ಎಸ್ ಐ ಆರ್ ಇನ್ನೊಂದು ಹುನ್ನಾರ ಏನಿದೆ ಅಂದರೆ, ವಿಶೇಷವಾಗಿ ಮೈನಾರಿಟಿ ಯ ಸಂಘಟನೆ ಪಕ್ಷಗಳಿಗೆ ಇವರಿಗೆ ಬೇರೆ ಆಲೋಚನೆ ಮಾಡಲಿಕೆ ಬಿಡಬಾರದು, ಒಂದರ ಹಿಂದೆ ಇನ್ನೊಂದು ಅಜೆಂಡಾ ಕೊಟ್ಟು ಅದರಲ್ಲಿ ಎಂಗೇಜ್ ಆಗಿ ಇಡಬೇಕು ಷಡ್ಯಂತರ ಕೂಡ ಅಡಗಿದೆ.ಎನ್ ಆರ್ ಸಿ, ಸಿ ಏ ಏ ಇತ್ಯಾದಿ ಸೀರೀಸ್ ಆಫ್ ಅಜೆಂಡಾ ವನ್ನು ತಯಾರು ಮಾಡುತ್ತಾ ಇರುತ್ತಾರೆ. ಇದು ಸಂಘ ಪರಿವಾರದವರು ಕುಳಿತು ಟೈಮ್ ಟು ಟೈಮ್, ಪ್ರೀ ಪ್ಲಾನ್ ಆಗಿ ಅಜೆಂಡಾ ವನ್ನು ಇಳಿಸುತ್ತಾ ಇರುತ್ತಾರೆ.ನಾವು ಅದನ್ನು ಪ್ರತಿ ರೂದ ಮಾಡುವುದರಲ್ಲೇ ಇಡೀ ಶ್ರಮ ವ್ಯಯ ಆಗುತ್ತದೆ.
ಇನ್ನಷ್ಟು ವರದಿಗಳು
ಕರ್ನಾಟಕದಲ್ಲಿ ಎಳೆ ಶಿಶುವಿನಿಂದ 18 ವರ್ಷ ವಯಸ್ಸಿನ 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಪತ್ತೆ
ಸಮಾನಾಂತರ ವಕೀಲರ ಸಂಘದ ಪ್ರಸ್ತಾವಿತ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ,ಕ.ಹೈಕೋರ್ಟ್ ಬೆಂಗಳೂರಿನ ವಕೀಲರ ಸಂಘ (ಎಎಬಿ)ಕ್ಕೆ ಮಧ್ಯಂತರ ಆದೇಶ.
ಧರ್ಮಸ್ಥಳ ಪ್ರಕರಣ, ಬೃಹತ್ ತಿರುವು, ಸುಳ್ಳು ಸಾಕ್ಷ್ಯದಾರ ಮುಸುಕುಧಾರಿ ವ್ಯಕ್ತಿ ಬಂಧನ.