ವೆಬ್: ಪ್ರಸಕ್ತ ರಾಜಕೀಯ ಬೆಳವಣಿಗೆಯ ವಿಷಯದಲ್ಲಿ ನಿನ್ನೆ ತಾರೀಕು 17 ಏಪ್ರಿಲ್ ರಂದು ಬಾ. ಕಾ. ರಾತ್ರಿ ಗಂಟೆ 09.00ಕ್ಕೆ ಸಾಮಾಜಿಕ ಜಾಲತಾಣ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ನಲ್ಲಿ ನಡೆದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಬಜ್ಪೆ ಪಟ್ಟಣ ಪಂಚಾಯಿತಿ ಕೌನ್ಸಿಲರ್ ಸಿರಾಜ್ ಬಜ್ಪೆ ಮಾತನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಅಡ್ಮಿನ್ ಮೊಹಮ್ಮದ್ ಹನೀಫ್ ಯು ನೆರವೇರಿಸಿದರು, ಹಾರೂನ್ ರಶೀದ್ ಅಗ್ನಾಡಿ ಸ್ವಾಗತಿಸಿ, ಹುಸೇನ್ ಮದನಿ ನಗರ ಧನ್ಯವಾದ ಸಮರ್ಪಿಸಿದರು.
: ಬಜ್ಪೆ ಗ್ರಾಮ ಪಂಚಾಯಿತಿ ಯಾ ವಾರ್ಡ್ ನಲ್ಲಿ ಮೂರು ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನನ್ನ ಮಿತಿಯಲ್ಲಿ ನಾನು ಅಂದು ಕಾಂಗ್ರೆಸ್ ಪಕ್ಷವನ್ನು ನಿಷ್ಠೆಯಿಂದ ಕಟ್ಟಿದ್ದೇನೆ. ಚುನಾವಣೆ ಪೂರ್ವವಾಗಿ ಆದ ಕೆಲವು ಹತ್ಯಾ ಬೆಳವಣಿಗೆ ಯ ಬಗ್ಗೆ ನಾನು ಪಕ್ಷದ ವರಿಷ್ಠರಲ್ಲಿ ನೇರವಾಗಿ ಮಾತು ಎತ್ತಿದ ಕಾರಣಕ್ಕಾಗಿ ಕಳೆದ ಬಾರಿ ನಮಗೆ ಪಕ್ಷದ ವತಿಯಿಂದ ಕೆಲವು ಬೆಳೆರಲೆಣಿಕೆ ನಾಯಕರಿಂದಾಗಿ ಟಿಕೆಟ್ ವಂಚಿಸಿಯಲಾಯಿತು.
ಕಾಂಗ್ರೆಸ್ ಪಕ್ಷ ನಿಮ್ಮನ್ನು ಪುನಃ ಪಕ್ಷಕ್ಕೆ ಕರೆ ನೀಡಿದ? ಎಂಬ ಪ್ರಶ್ನೆಗೆ ಉತ್ತರ ವಾಗಿ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಸರಿಯಾಗಿಯೇ ಇದೆ ಆದರೆ ನಮ್ಮ ಕೆಲವು ನಾಯಕರ ಸಿದ್ಧಾಂತ ದಿಂದಾಗಿ ಇದು ಹಾಳಾಗಿದೆ, ಜಿಲ್ಲಾ ಮಟ್ಟದ ಕೆಲವು ನಾಯಕರು ಹಾಲಿ ನನ್ನಲ್ಲಿ ಸಂಪರ್ಕ ಇದ್ದಾರೆ , ಸಿರಾಜ್ ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂಬ ನಿಲುವು ಹಲವು ನಾಯಕರಲ್ಲಿ ಇದೆ.
ಕೊನೆಯ ಹಂತದವರೆಗೂ ನನಗೆ ಈ ಸ್ಪರ್ಧಿಯಲ್ಲಿ ಟಿಕೆಟ್ ನೀಡಬೇಕಿತ್ತು ನಾನು ಸೀನಿಯರ್ ಇದ್ದೇನೆ, ನಾನು ಅಲ್ಲಿ ಗೆಲ್ಲುತ್ತೇನೆ ಎಂದು ನಮ್ಮ ನಾಯಕರಿಗೆ ಗೊತ್ತಿದ್ದು, ಕಾರಣ ನಾನು ಸಮುದಾಯದ ಪರ ನೇರ ನೇರ ಮಾತನಾಡುತ್ತಾನೆ ಎಂಬ ಕಾರಣಕ್ಕೆ ಆಗಿರುತ್ತದೆ. ನಮ್ಮ ಸಮುದಾಯದ ವಿಷ್ಯ ಬಂದಾಗ ಕೆಲವರಿಗೆ ಅದು ಮುಜುಗರ ಆಗಿತ್ತು.
ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ದ. ಕ.ಜಿಲ್ಲಾ ಮುಸ್ಲಿಮ್ ಪ್ರತಿನಿಧಿಗಳ ಒಕ್ಕೂಟ ಎಂಬ ಸಂಘಟನೆಗಳಳ್ಳಿ ನಾನು ನನ್ನನ್ನು ಸಕ್ರಿಯವಾಗಿ ತೊಡಗಿಸಿ ಕೊಂಡು ವಿವಿಧ ನಾಗರಿಕ ಮತ್ತು ಸಾಮುದಾಯಿಕ ಪರಿಹಾರ ಕಂಡು ಕೊಳ್ಳುವ ನನ್ನ ಈ ಧ್ಯೇಯವೇ ನನಗೆ ಪ್ರಮುಖವಾಗಿ ಸೀಟು ತಪ್ಪಲು ಕಾರಣ ಆಯಿತು ಎಂಬುದು ಸರಿ.
ದ.ಕ.ಜಿಲ್ಲಾ ಮುಸ್ಲಿಮ್ ಪ್ರತಿನಿಧಿಗಳ ಒಕ್ಕೂಟ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ನಮ್ಮ ಪಕ್ಷ ಆಡಳಿತದಲ್ಲಿ ಇದ್ದರೂ ಕೂಡ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ವಾಗುತ್ತದೆ ಎಂಬ ಕಾರಣಕ್ಕೆ ನಾನು ಈ ಒಕ್ಕೂಟವನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸಿದ್ದೀನೆ.
ದಾವಣಗೆರೆ ದಕ್ಷಿಣ ಕ್ಷೇತ್ರ ಎಂಬುದು ಮುಸ್ಲಿಂ ಬಾಹುಳ್ಯ ಇರುವ ಕ್ಷೇತ್ರ , ಅಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಈ ಪಕ್ಷ ಇನ್ನು ಯಾವ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುತ್ತಾರೆ ಎಂಬುದು ಮಹತ್ವದ ಪ್ರಶ್ನೆ
ಈ ಹಿಂದೆ ಒರ್ವ ಸಚಿವರು ಹೇಳಿಕೆ ನೀಡುತ್ತಾ ಮುಸ್ಲಿಂರಿಗೆ ಟಿಕೆಟ್ ಕೊಟ್ಟರೆ ಹಿಂದೂಗಳು ಓಟು ಹಾಕುವುದಿಲ್ಲ, ಎಂಬ ಮಾತು ಇರುವಾಗ ಮುಸ್ಲಿಮ್ ಬಾಹುಳ್ಯ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ಪಕ್ಷ ಇನ್ನು ಎಲ್ಲಿ ನೀಡುತ್ತದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇದುವರೆಗೆ ಅದರದೇ ಆದ ಒಂದು ತತ್ವ ಸಿದ್ಧಾಂತ ವನ್ನು ಅವಲಂಬಸಿ ಕೊಂಡು ಬಂದಿದ್ದು, ಜಾತ್ಯಾತೀತ ನಿಲುವು ಮತ್ತು ಡಾಕ್ಟರ್ ಬಾಬಾ ಸಾಹೇಬ್ ರವರು ರಚಿಸಿದ ಸಂವಿಧಾನದ ಅಡಿಯಲ್ಲಿ, ಯಾವ ಯಾವ ಜಾತಿಗೆ ಯಾವ ರೀತಿಯಲ್ಲಿ ಈ ದೇಶದಲ್ಲಿ ಬದುಕಬೇಕು ಎಂಬುದಾಗಿ ಬಹಳ ಸ್ಪಷ್ಟವಾಗಿ ರೂಪಿಸಲಾಗಿದೆ. ಅವರಿಗೆ ರಾಜಕೀಯವಾಗಿ ಯಾವ ಸ್ಥಾನ ಮಾನ ಸಿಗಬೇಕು ಎಂದು ಕೂಡಾ ಹೇಳಲಾಗಿದೆ. ಅದನ್ನು ನಾವು ಕೇಳುತ್ತಾ ಇದ್ದೇವೆ.
ನಮ್ಮ ಹಿರಿಯರ ಮನೆ ಯಲ್ಲೂ ಕೂಡ ಸಣ್ಣ ಪುಟ್ಟ ದೋಷಗಳು ಸೃಷ್ಟಿ ಆದಾಗ ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ಮಾಡಬೇಕಾಗುತ್ತದೆ.
ಪಕ್ಷವನ್ನು ದೂರವುದಕ್ಕಿಂತ ನಮ್ಮ ಸಮುದಾಯ ನಾಯಕರು ಏನು ಜನರು ಜನ ಪ್ರತಿನಿಧಿ ಆಗಿ ಆಯ್ಕೆ ಮಾಡಿ , ಸಮುದಾಯದ ಪರ ಧ್ವನಿ ಎತ್ತಬೇಕು ಎಂದು ಆಗಿದೆ. ನಮ್ಮ ಅಹಿಂದ ವರ್ಗದ ಜನ ಸೇರಿ ಇವರನ್ನು ಗೆಲ್ಲಿಸಿದ್ದಾರೆ, ಹೀಗಿರುವಲ್ಲಿ ಸಮುದಾಯಕ್ಕಾಗಿ ಇವರ ಕೊಡುಗೆ ಕೂಡ ಬೇಕು ಅಲ್ವಾ? ಮತ್ತು ಇವರೆಲ್ಲರ ಒಗ್ಗಟ್ಟು ಬಹಳ ಮುಖ್ಯ ಆಗಿರುತ್ತದೆ. ದಾವಣ ಗೆರೆ ವಿಷಯಕ್ಕೆ ಬಂದಾಗ ಇಷ್ಟು ವರ್ಷ ವಂಶಾ ಆಡಳಿತ ಮಾಡಿಕೊಂಡು ಬಂದ ತಂದೆ, ಮಗ, ಮಗಳು ಮೊಮ್ಮಗ ಎಲ್ಲರಿಗೆ ಟಿಕೆಟ್ ನೀಡುವ ಬದಲು , ಹೇಗೆ ನೋಡಿದರೂ ಅಲ್ಲಿ ಮುಸ್ಲಿಮ್ ಅಲ್ಪ ಸಂಖ್ಯಾತ ವರ್ಗಕ್ಕೆ ಸೀಟು ನೀಡಬೇಕಿತ್ತು.
ಹಾಲಿ ಜನರು ಪ್ರಬುದ್ಧ ರಾಗಿದ್ದಾರೆ, ಮೊದಲಿನ ಹಾಗೆ ಸಮುದಾಯದ ನಾಯಕ ನನಗೆ ಜನ ಮತ ಹಾಕುತ್ತಾರೆ ಎಂಬ ಉದ್ಧಟತನದಿಂದ ಇರುವುದು ಸರಿಯಲ್ಲ , ಜನರು ಚಿಂತಿತರಾಗಿದ್ದಾರೆ. ಇಂದು ಸಚಿವ ಸಂಪುಟದಲ್ಲಿ ಇಂದು ಸಚಿವ ಜಮೀರ್ ಅಹಮದ್ ಬಗ್ಗೆ ವಿಷಯ ಪ್ರಸ್ತಾಪ ಮಾಡಿದಾಗ ಎಲ್ಲರೂ ಅಂದರೆ ಜಾರಕಿಹೊಳಿ, ರಾಜಣ್ಣ, ಬಿ. ಕೆ. ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆ ಅವರು ಬಹಳ ಸ್ಪಷ್ಟವಾಗಿ ಜಮೀರ್ ಪರ ನಿಂತದ್ದು ಏನನ್ನು ಸೂಚಿಸುತ್ತದೆ, ಅವರಿಗೆ ಇರುವ ಕಾಳಜಿ ನಮ್ಮ ನಾಯಕರಿಗೆ ಇರಬೇಕಿತ್ತು.
ಇನ್ನಷ್ಟು ವರದಿಗಳು
ಪೌರತ್ವ ನಿರ್ಧರಿಸುವ ಚುನಾವಣಾ ಆಯೋಗದ ಪ್ರಕ್ರಿಯೆ ಅಸಂವಿಧಾನಿಕ: ಆನ್ಲೈನ್ ಸಂವಾದದಲ್ಲಿ ಚಿಂತಕ ರಾ ಚಿಂತನ್.
ದುಡಿಯುವ ವರ್ಗದ ಹಿತವೇ ದೇಶದ ಅಭಿವೃದ್ಧಿ, ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕಿದೆ: ಆನ್ಲೈನ್ ಸಂವಾದದಲ್ಲಿ ಸುನಿಲ್ ಕುಮಾರ್ ಬಜಾಲ್.
ಯುನಿವೆಫ್ ಕರ್ನಾಟಕ,’ ಅರಿಯಿರಿ ಮನುಕುಲದ ಪ್ರವಾದಿ ‘ ಅಭಿಯಾನ ಭಾಗವಾಗಿ ವಾಟ್ಸ್ ಆಪ್ ಅಡ್ಮಿನ್ ಚರ್ಚಾ ಸಮ್ಮಿಲನ.