May 23, 2026

Vokkuta News

kannada news portal

ಬೆಂ.ಸಮಾವೇಶ, ಮುಸ್ಲಿಮ್ ಸಮುದಾಯ ಸರಕಾರದೊಂದಿಗೆ ಭಿನ್ನ ರೀತಿಯಲ್ಲಿ ವ್ಯವಹರಿಸಬೇಕಿದೆ: ಮು.ವಾಯ್ಸ್ ಆನ್ಲೈನ್ ಸಂವಾದದಲ್ಲಿ ಮುಝಾಫರ್ ಅಹಮದ್.

ವೆಬ್: ಸಾಮಾಜಿಕ ಜಾಲ ತಾಣ ಮುಸ್ಲಿಮ್ ವಾಯ್ಸ್ ವಾಟ್ಸ್ ಆ್ಯಪ್ ಹ್ಯಾಂಡಲ್ ನಲ್ಲಿ ನಡೆದ ಇತ್ತೀಚೆಗೆ ಮೇ 16 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಯೋಜಿಸಿದ ಕರ್ನಾಟಕ ಮುಸ್ಲಿಮ್ ಸಮಾವೇಶ ದಲ್ಲಿ ಬಿಡುಗಡೆ ಗೊಂಡ ಕರ್ನಾಟಕ ಸರಕಾರದ ಈ ಹಿಂದಿನ ಚುನಾವಣಾ ಪೂರ್ವ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯಕ್ಕೆ ನೀಡಿದ ಭರವಸೆ, ಅನುಷ್ಟಾನ, ನಿರ್ಲಕ್ಯ ವಿಶ್ಲೇಷಣಾ ವರದಿ, ಕಾಂಗ್ರೆಸ್ ಹೇಳಿದ್ದೇನು ಮಾಡಿದ್ದೇನು ಮುಂದೇನು ಎಂಬ ಶೀರ್ಷಿಕೆ ಬಗ್ಗೆ ನಿನ್ನೆ ಭಾ. ಕಾ. ಗಂಟೆ ರಾತ್ರಿ ಗಂಟೆ 09.00 ಕ್ಕೆ ನಡೆದ ಆನ್ ಲೈನ್ ವಿಮರ್ಶಣ ಸಂವಾದದಲ್ಲಿ ಮಾತನಾಡಿದ ಮುಜಾಫರ್ ಅಹಮದ್, ವಕೀಲರು ಅವರು ಬೆಂಗಳೂರು ಸಮಾವೇಶದ ಬಗ್ಗೆ ಚರ್ಚಿಸುತ್ತಾ  ಮುಸ್ಲಿಮ್ ಸಮುದಾಯ ಸರಕಾರದೊಂದಿಗೆ ಭಿನ್ನ ರೀತಿಯಲ್ಲಿ ವ್ಯವಹರಿಸಬೇಕಿದೆ  ಎಂದು ವಿಮರ್ಶಿಸಿದ್ದಾರೆ. ಸಂವಾದ ಕಾರ್ಯಕ್ರಮವನ್ನು  ಅಡ್ಮಿನ್ ಮೊಹಮ್ಮದ್ ಹನೀಫ್.ಯು. ನಿರೂಪಿಸಿದರು.

ಮುಜಾಫರ್ ಅಹಮದ್ ವಕೀಲರು:  ಪ್ರಥಮವಾಗಿ ನಾನು ಓರ್ವ ಸಾಮಾನ್ಯ ವ್ಯಕ್ತಿ ಯಾಗಿ ಈ ಸಂವಾದದಲ್ಲಿ ಭಾಗವಹಿಸಿದ್ದೇನೆ, ಕೆ.ಆರ್. ಎಮ್. ಒ ಸಂಘಟನೆಗೆ ಅದರದ್ದೇ ಆದ ನೇಮಿತ ಬೇರೆಯೇ ವಕ್ತಾರರು ಇದ್ದಾರೆ. ನಾನು ಕೂಡ ಒಕ್ಕೂಟದ ಸದಸ್ಯ ಹೌದು , ಸಮಾವೇಶದಲ್ಲಿ ಭಾಗಿಯಾಗಿದ್ದೇನೆ. ಪ್ರಶ್ನೆ ಕೇಳಿದ್ದು ಸಮಾವೇಶದ ಅಗತ್ಯ ಇತ್ತಾ? , ಈ ಪ್ರಶ್ನೆ ವಿಬಿನ್ನ ರೀತಿಯಲ್ಲಿ ಕೂಡ ಕೇಳಬಹುದು, ಈ ಸಮಾವೇಶ ಅಗತ್ಯ ಇಲ್ಲ ಎನ್ನುವುದು ಕೂಡಾ ಸರಿಯೇ? ಎಂದು ಕೇಳಬಹುದು. ಸಮಾವೇಶ ಆಯೋಜಿಸಲು ಇದ್ದ ಕಾರಣ ಇಂದು ನಿನ್ನೆಯದಲ್ಲ,ತಾರೀಕು 16 ಮೇ ರಂದು ಆಗಿದೆ, ಅದರ ಒಂದು ವಾರದ ಪೂರ್ವದಲ್ಲಿ ನಿರ್ಧರಿಸಿದ್ದು ಅಲ್ಲ. ಕಳೆದ ಒಂದೂವರೆ ವರ್ಷದಿಂದ ಈಚೆಗೆ ಕರ್ನಾಟಕ ಸರಕಾರವನ್ನು ಪ್ರತಿನಿಧಿಸುವ ಮಂತ್ರಿ, ಸಚಿವರು , ಮುಖ್ಯ ಮಂತ್ರಿಯಾದಿಯಾಗಿ, ಉಪ ಮುಖ್ಯಮಂತ್ರಿ ಯಾದಿಯಾಗಿ ಇವರ ಬಳಿ ಹಲವು ನಿಯೋಗವು ಭೇಟಿ ನೀಡಿದೆ. ಈ ವಿಷ್ಯದಲ್ಲಿ ಚರ್ಚೆ ಕೂಡ ಮಾಡಿದೆ, ಪ್ರತಿ ಸಲ ಒಂದಲ್ಲ ಒಂದು ನೆಪ ಹೇಳಿ, ಉದಾಹರಣೆಗೆ ಚುನಾವಣೆ ಇದೆ ಇತ್ಯಾದಿ ಕಾರಣ ನೀಡಿ ಈ ವಿಷಯಗಳು ಮುಂದುವರಿಕೆ ಆಗುತ್ತ ಬಂದಿದೆ. ಇನ್ನು ಸರಕಾರದ ಅವಧಿ ಬಾಕಿ ಇರುವುದು ಎರಡು ವರ್ಷ, ಈ ಸಂಧರ್ಬದಲ್ಲಿ ಕೂಡ ನಾವು ಸರ್ಕಾರಕ್ಕೆ ಒತ್ತಡ ಹೇರದಿದ್ದರೆ ಇನ್ನೂ ಯಾವಗ ಮಾಡುವುದು?. ಬೇಡಿಕೆ ನೀಡದೆ ಇದ್ದಲಿ, ಪಕ್ಷ ನೀಡಿದ ಆಶ್ವಾಸನೆ ಈಡೇರಿಕೆ ಆಗುವ ಗ್ಯಾರೆಂಟಿ ಏನು? ಈ ಎರಡು ಕಾರಣಗಳಿಗಾಗಿ ಇಂತಹ ಒಂದು ಸಮಾವೇಶ ಕರ್ನಾಟಕ ಎಲ್ಲ ಜಿಲ್ಲೆಯ ಪ್ರತಿನಿಧಿಗಳ ಮೂಲಕ ಕಳೆದ ಒಂದು ವರ್ಷದಿಂದ ನಿರಂತರ ಶ್ರಮ ವಹಿಸಿ ವಿವಿಧ ಸಭೆ ನಡೆಸಿ ಈ ಸಮಾವೇಶವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಯಶಸ್ವಿ ಕೂಡ ಆಗಿದೆ.

ನಮ್ಮ ಸಮುದಾಯದ ವಿವಿಧ ಸಂಘಟನೆಗಳು ಸರ್ಕಾರ ದ ಪ್ರತಿನಿಧಿಗಳೊಂದಿಗೆ ಹಲವು ಸಭೆ ನಡೆದಿದೆ, ವಕೀಲರ ಸಭೆ ನಡೆದಿದೆ, ಎಲ್ಲಾ ವಿಧದಲ್ಲಿ ಪ್ರಯತ್ನ ಆಗಿದೆ, ಆ ನಂತರ ಸಮಾವೇಶದ ಅನಿವಾರ್ಯತೆ ಕಂಡು ಬಂದಿದೆ.ರಾಜ್ಯದ ಎಲ್ಲ ಜಿಲ್ಲೆಯ ಪ್ರತಿಂಧಿಗಳೂ ಸೇರಿದ್ದಾರೆ. ಉಡುಪಿಯಲ್ಲಿ ಸಭೆ ನಡೆಸಿದೆ, ದಾರವಾಡ, ಗುಲ್ಬರ್ಗ ದಲ್ಲಿ ಕೂಡ ಒಳಾಂಗಣ ಸಭೆ ನಡೆಸಲಾಗಿದೆ. ನಂತರ ಅಂಕಿ ಅಂಶ ಕೂಡ್ರೀಕರಿಸಲಾಗಿದೆ, ಮುಕ್ತವಾಗಿ ಸಂವಹನ ಮಾಡಿದರೆ ಯಾವುದೇ ಮೌಲ್ಯ ಇಲ್ಲ. ನಮ್ಮಲ್ಲಿ ಅಂಕಿ ಅಂಶಗಳು ಲಭ್ಯ ಇರುವ ಕಾರಣ ಯಾವುದೇ ಸವಾಲು ಎದುರಿಗೆ ಇಲ್ಲ. ಪ್ರತಿ ವಿಷಯದ ಬಗ್ಗೆ ಮೌಲ್ಯ ಮಾಪನ ವರದಿ ಇರುವ ಕಾರಣ, ಇಂತಹ ಅವಹಾಲು ಸಂಪರ್ಕ ನಮ್ಮ ಸಮುದಾಯಕ್ಕೆ ಒಂದು ಘನತೆಯನ್ನು ತಂದಿದೆ. ಆಧಾರ ರಹಿತ ಮಾತುಕತೆ ಆಗಬಾರದು ಎಂಬ ನೆಲೆಯಲ್ಲಿ, ಸಮಾವೇಶ ನಡೆಸುವಾಗ ಒಂದು ಘನ ಸಮಾವೇಶ ಆಗಬೇಕು, ಜನ ಜಮಾವಣೆ ಉದ್ದೇಶ ಕೂಡ ಇಲ್ಲ, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಷ , ಬಹಳ ಉತ್ತಮ ರೀತಿಯಲ್ಲಿ ಮಾಡಿದೆ. ಯಾವುದೇ ರಾಜಕಾರಣಿ, ಪ್ರತಿನಿಧಿ, ಅಧಿಕಾರಿಗಳಲ್ಲಿ ಹೇಳಿಯೇ ಈ ಸಮಾವೇಶ ನಡೆಸಲಾಗಿದೆ. ಎಲ್ಲ ಪೂರ್ವ ಸಿದ್ಧತೆಯೊಂದಿಗೆ ಕಾರ್ಯ ಕ್ರಮ ನಡೆಸಿದೆ.

ಪೂರ್ವ ಸಿದ್ಧತಾ ಸಭೆಗೆ ನಾನು ಹಾಜರಾಗಿದ್ದೆ, ಉಲೇಮಾ ಸಮುದಾಯ ಪೂರ್ವ ಸಿದ್ಧತಾ ಸಭೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು, ಸಮಾವೇಶದ ದಿನಾಂಕ, ಸ್ಥಳ,ರೂಪುರೇಷೆ ಎಲ್ಲಾ ನಿರ್ಧಾರಗಳು ಉಲೇಮಾ ಸಮಕ್ಷಮ ದಲ್ಲಿಯೂ ನಡೆದಿದೆ,ಅವರಿಗೇ ಬೃಹತ್ ಹೊಣೆಗಾರಿಕೆ ಕೂಡ ನೀಡಲಾಗಿತ್ತು, ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಹಾಲಿ ಯಾರನ್ನೂ ಕೂಡ ಆಪಾದಿಸುವ ಕಾರ್ಯಕ್ರಮ ಇದು ಆಗಿರಲಿಲ್ಲ,ಯಾರಿಗೂ ಅಂತಹ ಉದ್ದೇಶ ಹೊಂದಿಲ್ಲ. ಅಂತಿಮ ಕೊನೆಯ ಮೂರು ದಿನಗಳಲ್ಲಿ ತೀವ್ರ ಒತ್ತಡ ಸೃಷ್ಟಿಸಲಾಗಿತ್ತು, ಕಾರ್ಯಕ್ರಮ ಮಾಡಕೂಡದು, ಅದು ಮುಖ್ಯ ಮಂತ್ರಿಗೆ ಬೇಜಾರು ಆಗಬಹುದು, ಹೆಚ್ಚಿನ ಮುಸ್ಲಿಮ್ ರಾಜಕಾರಣಿಗಳು ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಕಾರಣ ಹೈ ಕಮಾಂಡ್ ಆದೇಶ ಪಾಲನೆ ಮಾಡಲು, ಹಾಗೆ ಇರುವ ಹಿರಿಯ ನಾಯಕರು ಅವರು ಎಲ್ಲ ಪ್ರಯತ್ನ ಮಾಡಿ ಉಲೇಮಾ ಸಮುದಾಯ ಈ ಕಾರ್ಯಕ್ರಮಕ್ಕೆ ಗೈರು ಆಗುವಂತೆ ನೋಡಿ ಕೊಂಡಿದ್ದಾರೆ. ಇದು ನನ್ನ ಅಪವಾದ ಅಲ್ಲ, ಅವರವರ ಸ್ಥಿತಿಯಲ್ಲಿ ಅವರು ಸರಿ ಇರಲೂ ಬಹುದು! ನಮಗೆ ಇದು ತಪ್ಪು ಕಂಡರೂ , ಪ್ರತಿ ಓರ್ವನಿಗೂ ಅವನದ್ದೇ ಆದ ನಿರ್ಧಾರ ತೆಗೆದುಕೊಳ್ಳಲು ಹಕ್ಕು ಇದೆ. ಕೊನೆ ಕ್ಷಣದಲ್ಲಿ ಬರಲೂ ಸಾಧ್ಯವಾಗದ ಅನೇಕರು ದೂರವಾಣಿ ಮೂಲಕ ಮಾತನಾಡಿಕೊಂಡಿದ್ದಾರೆ. ಕೆಲವು ಕಾರಣದಿಂದ್ನ ಅವರು ಬರಲು ಸಾಧ್ಯವಾಗಲಿಲ್ಲ ಎಂಬ ಬೇಜಾರು ಬಿಟ್ಟರೆ, ಯಾರೊಂದಿಗೂ ನಮಗೆ ಇದರಲ್ಲಿ ದ್ವೇಷ ಇಲ್ಲ, ಅಂತಃ ಪ್ರಸ್ತಾಪ ಬಂದೂ ಕೂಡ ಇಲ್ಲ. ಉಳೆಮಾಗಳ ಬಗ್ಗೆ ಯಾರೂ ಒಂದು ಶಬ್ದ ಉಚ್ಚಾರಣೆ ಆಗಲಿಲ್ಲ. ಕೊನೆಯ ಕ್ಷಣದಲ್ಲಿ ಬಹುಶಃ ಯಾವುದೂ ಸಮಂಜಸ ಕಾರಣ ಗಳಿಗಾಗಿ ಗೈರು ಆಗಿರಬಹುದು. ಇಲ್ಲಿ ಪ್ರಜಾ ಪ್ರಭುತ್ವ ಯಾರಿಗೂ ಅವರವರ ತೀರ್ಮಾನ ಕೈ ಗೊಳ್ಳುವ ಅಧಿಕಾರ ಇದೆ. ಇಂದು ಕೈಗೊಂಡ ತೀರ್ಮಾನ ನಾಳೆ ಬದಲಿಸಬಹುದು. ಅದಕ್ಕೆ ಯಾವುದೇ ಒತ್ತಡ ಸಲ್ಲದು.ನಮ್ಮ ಉದ್ದೇಶ ಇದ್ದದು ಸರ್ಕಾರ ದ ಗಮನಕ್ಕೆ ಬರಬೇಕು. ನಮ್ಮ ಜನ ಪ್ರತಿನಿಧಿಗಳು ಮುಖ್ಯ ಮಂತ್ರಿ , ಉಪ ಮುಖ್ಯ ಮಂತ್ರಿ ವರು ನೂರು ಸಲ ಮಾತನಾಡಿದ್ದರು ಕೂಡ ಅದನ್ನು ಗಂಭೀರವಾಗಿ ಗಣನೆಗೆ ತೆಗೆದು ಕೊಳ್ಳುವುದಿಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ, ಯಾಕೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ ಅಂದರೆ, ನಮ್ಮ ನಾಯಕರ ಹತ್ತಿರ ನಿಮ್ಮ ಸಮುದಾಯದವರನ್ನು ನೀವು ಸ್ವಲ್ಪ ಸುಧಾರಿಸಿ ಕಳುಹಿಸಿ ಕೊಡಿ, ಸ್ವಲ್ಪ ಸುಮ್ಮನೆ ಇರಿಸಿಬಿಡಿ ಎಂದು ಹೇಳಲಾಗುತ್ತದೆ. ಇಂತಹ ಸಲಹೆಗಳು ಅತಿ ಶಕ್ತಿ ಹೊಂದಿರುತ್ತದೆ.ಇಂತಹ ಬೆಳವಣಿಗೆ ಎಲ್ಲವನ್ನೂ ನಿಶ್ಯಬ್ದ ಮಾಡುತ್ತದೆ. ಅದು ಆಗಬಾರದು ನಮ್ಮ ಒತ್ತಡ ಇದೆ ಎಂದು ನಾವು ಪ್ರದರ್ಶಿಸಿದರೆ, ಮತ್ತು ಇದರಲ್ಲಿ ಒಂದು ಪ್ರಯೋಜನ ಏನು ಅಂದರೆ ಇಂತಹ ಒಂದು ಸಮಾವೇಶ ಆಗುವಾಗ ಆ ಸಂಘಟನೆ ಬಲಿಷ್ಠ ಆಗುತ್ತದೆ, ಸಮುದಾಯದಲ್ಲಿ ಉತ್ತರದಾಯಿತ್ವ ಇದೆ ಎಂದು ಆಗುತ್ತದೆ. ನಮ್ಮ ನಾಯಕರಿಗೂ ಗೌರವ ಲಭ್ಯವಾಗುತ್ತದೆ. ನಮ್ಮ ನಾಯಕರನ್ನು ಅವರು ಗೌರವಡಿಂದ ಕಾಣುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.ಇದನ್ನು ಕೆಲವು ನಾಯಕರು ಅರ್ಥ ಮಾಡಿಕೊಳ್ಳಲು ವಿಫಲ ಆದ ಕಾರಣ ಕಾರ್ಯಕ್ರಮಕ್ಕೆ ಉಳೆಮಾಗಲು ಬರದ ಹಾಗೆ ಮಾಡಿದ್ದಾರೆ.ಸಾದಾರಣ ಅವರು ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.ಒಟ್ಟಾರೆ ನಾವು ಉದ್ದೇಶಿಸಿದ ಹಾಗೆ ಯಶಸ್ವಿ ಆಗಿದೆ. ಅಲ್ಲಾಹನಿಗೆ ಸರ್ವ ಸ್ತುತಿ.

ಹಿಜಾಬ್ ಬ್ಯಾನ್ ಹಿಂತೆಗೆತ ಉತ್ತಮ ಬೆಳವಣಿಗೆ, ಆ ಕಾರಣಕ್ಕಾಗಿ ನಾವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಹಿಂತೆಗೆಯುವಿಕೆಗೆ ಯಾಕೆ ಮೂರು ವರ್ಷ ಬೇಕಾಯಿತು. ಈ ಸಂಧರ್ಬದಲ್ಲಿ ಯಾಕೆ ಹಿಂತೆಗೆಯಲಾಯಿತು. ಎಂಬ ಪ್ರಶ್ನೆಗೆ ವಿವಿಧ ಜನರಿಗೆ ಭಿನ್ನ ಅಭಿಪ್ರಾಯ ಇದೆ. ನನ್ನ ಅಭಿಪ್ರಾಯ ಇತರರ ಅಭಿಪ್ರಾಯಕ್ಕೆ ಭಿನ್ನ ಆಗಿರಬಹುದು.ಆದುದರಿಂದ ಬಾಕಿ ವ್ಯಕ್ತಿಗಳ ಅಭಿಪ್ರಾಯವನ್ನು ಗೌರವಿಸಿ ಹೇಳುವುದು ಏನೆಂದರೆ ನಿಷೇಧ ಹಿಂಪಡೆಯಬೇಕೆಂದು ನಿರ್ಧಿಷ್ಟ ಕೆಲವು ರಾಜಕೀಯ ನಾಯಕರು ಪ್ರಯತ್ನ ಪಟ್ಟುಕೊಂಡು ಇದ್ದರು. ಸತತ ಪ್ರಯತ್ನ ಪಟ್ಟಿದ್ದಾರೆ.ಅವರು ನಮ್ಮ ಸಂಪರ್ಕ ಇರುವ ಸಂಧರ್ಬದಲ್ಲಿ ಈ ವಿಷಯ ಹೇಳುತ್ತಾ ಇದ್ದರು. ಹಿಜಾಬ್ ನಿಷೇಧ ಹಿಂತೆಗೆತ ನಿರ್ಧಾರ ಒಂದು ಹಂತಕ್ಕೆ ಬರುವ ಸಂಧರ್ಭದಲ್ಲಿ, ನಾವು ಈ ಸಂಘಟನೆಯವರು ಕಳೆದ ಒಂದು ವರ್ಷದಿಂದ ಸರ್ಕಾರವನ್ನು ಸಂಪರ್ಕಿಸುತ್ತಾ, ಕೂಡ ಇದ್ದ.ಕಾರಣ, ಭೇಟಿ ಸಂಧರ್ಬದಲ್ಲಿ ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ ಗಳನ್ನೂ ವಿನಂತಿ ಮಾಡುತ್ತಲೇ ಇದ್ದೆವು. ಇದೆಲ್ಲ ರೆಡಿ ಆಗುತ್ತಾ ಬರುವಾಗ ಯಾವಾಗ ನಿಷೇಧ ಹಿಂತೆಗೆತ ಮಾಡುವುದು ಎಂದು ಸರ್ಕಾರ ನಿರ್ಧರಿಸುವ ಸಂಧರ್ಬದಲ್ಲಿ ನಮ್ಮ ಸಮಾವೇಶ ಘೋಷಣೆ ಆಗುವುದೂ, ಆಗ ಅದೇ ಸೂಕ್ತ ಸಮಯ ಎಂದು ಸರ್ಕಾರಕ್ಕೆ ಅನಿಸಿತು ಎಂದಾಗಿರಬೇಕು
ಹಾಗೆ ಹಿಜಾಬ್ ನಿಷೇಧ ಹಿಂತೆಗೆತ ಮಾಡಿದ್ದಾರೆ. ಹೇಗಿದ್ದರೂ ನಮ್ಮಿಂದ ತೆಗೆದರು, ನಮ್ಮ ಸಂಘಟನೆಯಿಂದಾಗಿ ತೆಗೆದರು ಎಂದು ಹೇಳುವ ಬದಲಿಗೆ ಹಿಜಾಬ್ ನಿಷೇಧ ಸರಕಾರ ಹಿಂಪಡೆದಿದೆ. ಅದಕ್ಕೆ ಪರೋಕ್ಷವಾಗಿ ಈ ಮುಸ್ಲಿಮ್ ನಾಯಕರು, ಸಂಘಟನೆಗಳ ಒಕ್ಕೂಟ ಎಲ್ಲರೂ ಕಾರಣಾರಾಗಿರಲೂ ಬಹುದು, ಎಂದು ನಾವು ತೃಪ್ತಿಪಡಬೇಕಿದೆ.

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಥಮ ಮುಸ್ಲಿಮ್ ಸಮಾವೇಶ ಜರುಗಿದೆ. ಈ ಸಮಾವೇಶ ನಾವು ವಿರೋಧಿಸುವ ಒಂದು ಪಕ್ಷವನ್ನು ದೂರುವ ಕಾರ್ಯಕ್ರಮ ಅಲ್ಲ. ಪ್ರಥಮ ಬಾರಿಗೆ ಅಧಿಕಾರದಲ್ಲಿ ಇರುವ ಪಕ್ಷ ನಮ್ಮ ಸಮುದಾಯಕ್ಕೆ ಆಶ್ವಾಸನೆ ನೀಡಿದನ್ನು ಈಡೇರಿಕೆ ಮಾಡದ ಕಾರಣ ನಾವು ನಮ್ಮ ಮೌಲ್ಯ ಮಾಪನ ವರದಿ ಪ್ರದರ್ಶಿಸಿ ನಮ್ಮ ಆಶ್ವಾಸನೆ ಈಡೇರಿಕೆಗೆ ಒತ್ತಾಯಿಸಿ ನಾವು ಅಪೇಕ್ಷಿಸಿದ್ದೇವೆ. ಇದರಲ್ಲಿ ಆದ ಒಂದು ಉತ್ತಮ ಬೆಳವಣಿಗೆ ಏನು ಅಂದರೆ, ಇಷ್ಟರವರೆಗೆ ನಮ್ಮ ಉಲೇಮಾ ಗಳು , ನಮ್ಮ ನಾಯಕರು, ನಮ್ಮನ್ನು ಪ್ರತಿನಿಧಿಸಿ ಸರಕಾರವನ್ನು ಸಂಪರ್ಕಿಸಿ ಬೇಡಿಕೆ ಇಡುವುದು ಆಗಿದ್ದು ನಾವು ನೋಡಿದ್ದೇವೆ.ರಾಜಕೀಯ ನಾಯಕರು ಯಾವತ್ತೂ ಅವರು ನಮ್ಮ ಬೇಡಿಕೆ ಮುಂದಿಡುವಗ ಸರಕಾರ ಅವರನ್ನು ಸುಮ್ಮನಾಗಿಸುತ್ತದೆ. ಮುಖ್ಯಮಂತ್ರಿ ಹೇಳಿದರೆ ಅವರು ಅದನ್ನು ಪಾಲಿಸಬೇಕಾಗುತ್ತದೆ, ನಿಮ್ಮ ಸಮುದಾಯದವರಲ್ಲಿ ಸ್ವಲ್ಪ ತಾಳ್ಮೆ ಇರಲು ಹೇಳಿ ಎಂದು. ಯಾವಾಗ ನಾವು ಇವರೆನ್ನಲ್ಲ ಹೊರತುಪಡಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದಾಗ ಸರಕಾರಕ್ಕೆ ಅರಿವು ಮೂಡುವುದು, ಕೇವಲ ಮುಸ್ಲಿಮ್ ರಾಜಕೀಯ ನಾಯಕರು ಮಾತ್ರ ಇರುವುದಲ್ಲ, ಸಾಮಾಜಿಕ ನೇತೃತ್ವ ಕೂಡ ಇದೆ.ಧಾರ್ಮಿಕ ನೇತೃತ್ವ ಕೂಡ ಇದೆ . ಅದೇ ರೀತಿಯಲ್ಲಿ ಮುಸ್ಲಿಮರಲ್ಲಿ ರಾಜಕೀಯ ನಾಯಕರು , ವೈದ್ಯರು, ಇಂಜಿನಿಯಾರರು, ಸರ್ವ ಮಟ್ಟದ ಜನರು ಮುಸ್ಲಿಮರಲ್ಲಿ ಇದ್ದಾರೆ. ಮುಸ್ಲಿಮ್ ಸಮುದಾಯಕ್ಕೆ ತಮ್ಮ ಬೇಕು ಬೇಡಗಳು ಏನು ಎಂದು ತೀರ್ಮಾನಿಸುವ ಶಕ್ತಿ ಇದೆ ಎಂದು ರಾಜಕೀಯ ಮಾತ್ರ ಅಲ್ಲ ಎಂದು ಅರ್ಥ ಆದ ಕಾರಣ. ಈ ಕಾರ್ಯ ಕ್ರಮ ಆಯೋಜನೆ ಮಾಡಿದ್ದಕ್ಕೆ ಸರ್ಕಾರಕೆ ನಮ್ಮಲ್ಲಿ ನಿಷ್ಠುರ ವಿರೋಧ ಇದ್ದರು ಕೂಡ, ನಮ್ಮ ಬೇಡಿಕೆ ಈಡೇರಿಸಲು ಒಂದು ಶ್ರಮ ಸರಕಾರ ಮಾಡಲೇಬೇಕಾಗುತ್ತದೆ. ಅದು ಶ್ರಮ ಪಡುತ್ತಾರೆ ಎಂದು ನಮಗೆ ಖಾತರಿ ಇದೆ ಕಾರಣ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ.ನಾವು ಈ ಉದ್ದೇಶಕ್ಕಾಗಿ ಅಧಿಕ ಬಾಗುವ ಅಗತ್ಯ ಕೂಡ ಇಲ್ಲ. ನಮ್ಮ ಯಾವುದೇ ಹೇಳಿಕೆಯಲ್ಲಿ ಸರಕಾರವನ್ನು ನಾವು ಏನು ತರಾಟೆಗೆ ತೆಗೆಯುವುದಾಗಲಿ, ಸರಕಾರ ವಿರುದ್ಧ ಏನು ಘೋಷಣೆ ಕೂಗುವು ದು ಮಾಡಲಿಲ್ಲ.ನಾವು ನಮ್ಮ ಬೇಡಿಕೆ ಇಟ್ಟಿದ್ದೇವೆ.ಸರಕಾರ ಈಗ ಚಿಂತನೆ ಮಾಡುತ್ತಾ ಇದೆ. ಹಿರಿಯ ನಾಯಕರು ಈ ಬಗ್ಗೆ ಚಿಂತಿಸುತ್ತಾ ಇದ್ದಾರೆ. ಈ ಸಮುದಾಯವನ್ನು ಸರಕಾರದ ವಿಶ್ವಾಸಕ್ಕೆ ತರಬೇಕು ಎಂಬುದಾಗಿದೆ. ಮತ್ತು ಅದರ ಮುಂದುವರಿಕೆ ಆಗಿದೆ. ಯಾವುದು ಒಳ್ಳೆಯದೇ ಆಗುತ್ತದೆ. ಎಂದು ಹಲವು ಪ್ರಶ್ನೆಗೆ ಉತ್ತರಿಸಿದರು.