July 27, 2024

Vokkuta News

kannada news portal

ದ.ಕ.ಉಪ್ಪಿನಂಗಡಿ ಪೊಲೀಸರ ಲಾಠಿ ದೌರ್ಜನ್ಯ,ಪ್ರತಿಭಟನಾಕಾರರ ಮೇಲೆ ಗಂಭೀರ ಹಲ್ಲೆ; ಮುಸ್ಲಿಮ್ ಒಕ್ಕೂಟ,ಕೆ.ಅಶ್ರಫ್ ಖಂಡನೆ.

ಅಮಾಯಕರ ಬಂಧನ ವಿರೋಧಿಸಿ ನಡೆಸಿದ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸು ಲಾಠಿ ಚಾರ್ಜ್.


ಮಂಗಳೂರು: ಇತ್ತೀಚೆಗಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಿನ್ನೆ ಪಿ.ಎಫ್. ಐ.ಸಂಘಟನೆಯ ಮೂವರು ನಾಯಕರನ್ನು ಬಂಧಿಸಿ ದ್ದನ್ನು ವಿರೋಧಿಸಿ ಮತ್ತು ಬಂಧಿತ ನಾಯಕರನ್ನು ಬಿಡುಗಡೆ ಗೊಳಿಸ ಬೇಕೆಂದು ಆಗ್ರಹಿಸಿ ಇಂದು ಸಂಘಟನೆಯ ಸದಸ್ಯರು ಉಪ್ಪಿನಂಗಡಿ ಪೊಲೀಸು ಸ್ಟೇಶನ್ ಎದುರಿಗೆ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದು ಪೊಲೀಸರು ಅಪ್ರಚೋಧಿತವಾಗಿ ಪ್ರತಿಭಟನಾಕಾರರ ಮೇಲೆ ಅನ್ಯಾಯವಾಗಿ ಲಾಠಿ ಚಾರ್ಜ್ ಮಾಡಿದ್ದು, ಅಮಾಯಕ ಪ್ರತಿಭಟನಾಕಾರರು ಘಂಭೀರ ಗಾಯ ಗೊಂಡಿದ್ದು,ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜ.ಆತೂರ್ ಇಬ್ರಾಹಿಂ ತಂಗಲ್ ರವರಿಗೆ ರಕ್ತ ಗಾಯವಾಗಿದ್ದು,ಪೊಲೀಸರ ದೌರ್ಜನ್ಯ ಕ್ಕೇ ತೀವ್ರ ಖಂಡನೆಯಿದೆ.ಪೊಲೀಸರು ಶಾಂತಿ ಕಾಪಾಡುವುದರ ಹೊರತು,ಹಿಂಸೆಯನ್ನು ಪ್ರಚೋದಿಸಿ ದ್ದಾರೆ. ಪೊಲೀಸರ ಈ ದೌರ್ಜನ್ಯವನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಿನ್ನೆಯ ಪೊಲೀಸು ದೌರ್ಜನ್ಯ ಖಂಡಿಸಿ ಇಂದು ಪಿ. ಎಫ್ಫ್. ಐ.ಸಂಘಟನೆ ಮಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿ ಕೊಂಡಿದೆ.