December 23, 2024

Vokkuta News

kannada news portal

ಸುರತ್ಕಲ್ ಟೋಲ್ ಹೆಜ್ಮಾಡಿಯಲ್ಲಿ ಸಂಗ್ರಹ,ಮುಸ್ಲಿಮ್ ಒಕ್ಕೂಟ ಖಂಡನೆ,ಮುಂದುವರಿದ ಹೋರಾಟಕ್ಕೆ ಬೆಂಬಲ: ಕೆ.ಅಶ್ರಫ್.

ರಾ.ಹೆ 66 ರ ಸುರತ್ಕಲ್ ಟೋಲ್ ಸಂಗ್ರಹ ಅಕ್ರಮ ಬಗ್ಗೆ ನಿರಂತರ ಹೋರಾಟದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್ ತಿಂಗಳ ತಾರೀಖು 1ರಿಂದ ಸುರತ್ಕಲ್ ಟೋಲ್ ತೆರವಿಗೆ ಮುಂದಾಗಿದ್ದು,ತನ್ನ ಸುರತ್ಕಲ್ ಟೋಲ್ ಸಂಗ್ರಹದ ಬದಲಿಗೆ ಉಡುಪಿಯ ಹೆಜಮಾಡಿ ಟೋಲ್ ನಲ್ಲಿ ಹೆಚ್ಚುವರಿ ಟೋಲ್ ಸಂಗ್ರಹ ಗೊಳಿಸಲು ಮುಂದಾಗಿದ್ದು, ಕೇಂದ್ರ ಸರಕಾರದ ವತಿಯಿಂದ ಜನಸಾಮಾನ್ಯರ ಅಕ್ರಮ ಲೂಟಿ ನೀತಿಯನ್ನು ಮುಂದುವರಿಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹಠಮಾರಿ ನೀತಿಯನ್ನು ವಿರೋಧಿಸಿ ಮುಸ್ಲಿಮ್ ಒಕ್ಕೂಟವು, ಹೆಜಮಾಡಿ ಅಕ್ರಮ ಹೆಚ್ಚುವರಿ ಟೋಲ್ ಸಂಗ್ರಹ ವಿರೋಧಿ ಹೋರಾಟವನ್ನು ಕೈ ಗೊಳ್ಳುವ ಸಮಾನ ಮನಸ್ಕರ ನಿಲುವನ್ನು ಬೆಂಬಲಿಸಿ, ಹೋರಾಟವನ್ನು ಮುಂದುವರಿಸಲಿದೆ.ತನ್ನ ಕ್ಷೇತ್ರದಲ್ಲಿ ಅನಗತ್ಯ ಉದ್ವೇಗ ಸೃಷ್ಟಿಸುವ ಕಿರು ಘಟನೆಗೂ ಹಾರಿ ಬಂದು ಹೇಳಿಕೆ ನೀಡುವ ಸಂಸದೆ ಶೋಭಾ ಕರಂದ್ಲಾಜೆ ಯವರು ತನ್ನದೇ ಪಕ್ಷದ ಸರ್ಕಾರದ ಈ ನಿರ್ಧಾರದ ಬಗ್ಗೆ ಮೌನವಾಗಿದ್ದು,ತನ್ನ ಕ್ಷೇತ್ರದ ಜನರಿಗೆ ಸೂಕ್ತ ಉತ್ತರ ನೀಡಲಿ. ಡಬ್ಬಲ್ ಇಂಜಿನ್ ಸರಕಾರದ ಸಾಧನೆ ಎಂದು ಕನಸಿನಲ್ಲೂ ಉಚ್ಚರಿಸುವ ನಳಿನ್,ರಘುಪತಿ ಭಟ್,ವೇದವ್ಯಾಸರು,ಭರತ್ ಶೆಟ್ಟಿ,ಸುನಿಲ್ ಕುಮಾರ್ ರವರ ಸೈಲೆನ್ಸರ್ ನಿಂದಲೂ ಈಗ ಟೋಲ್ ವಿಲೀನದ ಬಗ್ಗೆ ಶಬ್ದ ಕೇಳಿಸುತ್ತಿಲ್ಲ.

ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.