December 23, 2024

Vokkuta News

kannada news portal

ಸೌಜನ್ಯ ಪರ ಬೆಳ್ತಂಗಡಿ ಚಲೋ ಪ್ರತಿಭಟನೆಗೆ ಬೆಂಬಲ: ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ.

ಮಂಗಳೂರು: ಬಹು ಚರ್ಚಿತ ಉಜಿರೆ ಅತ್ಯಾಚಾರ ಮತ್ತು ಹತ್ಯೆ ನತದೃಷ್ಟೆ ಸೌಜನ್ಯಾ ಪ್ರಕರಣದಲ್ಲಿ ನೈಜ ದುಷ್ಕರ್ಮಿ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದ ಬಗ್ಗೆ ಪ್ರಕರಣದ ಬಹು ಆಯಾಮಗಳು ವ್ಯತ್ಯಸ್ತ ರೀತಿಯಲ್ಲಿ ಪ್ರಕಟವಾಗುತ್ತಿದ್ದು, ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆಯ ಮರು ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಆಗೋಸ್ಟು 28 ರಂದು ನಡಯಲಿರುವ ವಿವಿಧ ಸಂಘಟನೆಗಳ ಸಾಮೂಹಿಕ ಪ್ರತಿಭಟನೆ ಬೆಳ್ತಂಗಡಿ ಚಲೋಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸುತ್ತದೆ. ಸೌಜನ್ಯ ಪ್ರಕರಣದಲ್ಲಿ ರಾಜ್ಯದ ಜನತೆ ಸಮರ್ಪಕ ನ್ಯಾಯದ ನಿರೀಕ್ಷೆಯಲ್ಲಿದೆ ಎಂದು ಕೆ.ಅಶ್ರಫ್( ಮಾಜಿ ಮೇಯರ್),ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ರವರು ಹೇಳಿದ್ದಾರೆ.