ನವ ದೆಹಲಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ಸಂಪೂರ್ಣ ನೆಲದ ಆಕ್ರಮಣಕ್ಕೆ ಸಜ್ಜಾಗುತ್ತಿದ್ದಂತೆ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾದ ಗಾಜಾ ಅಡಿಯಲ್ಲಿ ನ ಹಮಾಸ್‌ನ ವ್ಯಾಪಕ ಸುರಂಗ ಜಾಲವಾಗಿದೆ. ನೆಲದ ಆಕ್ರಮಣದಲ್ಲಿ, ಇಸ್ರೇಲ್ ತನ್ನ ಫೈರ್ ಪವರ್ ಚೂಪುನ್ನು ಕಳೆದುಕೊಳ್ಳಲಿದೆ ಮತ್ತು ಅದರದ್ದೇ ಭೂಪ್ರದೇಶದಲ್ಲಿ ಇದ್ದು ಕೊಂಡು ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ಸುರಂಗಗಳ ಜಾಲವನ್ನು ಹೊಂದಿರುವ ಜನನಿಬಿಡ ಪ್ರದೇಶವು ಇಸ್ರೇಲ್‌ನ ಬೃಹತ್ ಭದ್ರತಾ ಸವಾಲಿನ ಪ್ರಮುಖ ಅಂಶವಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ನಿನ್ನೆ ಅವರು ಸುರಂಗ ಜಾಲದ ಭಾಗಗಳನ್ನು ಹೊಡೆಯುತ್ತಿದ್ದೇವೆ ಎಂದು ಹೇಳಿದರು, ಆದರೆ ಇದು ಅಷ್ಟು ಸುಲಭವಾದ ಹೋರಾಟವಲ್ಲ.
ಹಮಾಸ್ ಸುರಂಗಗಳು: ‘ಗಾಝಾ ಮೆಟ್ರೋ’
2021 ರಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಹಮಾಸ್‌ನ 100 ಕಿಲೋಮೀಟರ್‌ಗಿಂತಲೂ ಹೆಚ್ಚು ಸುರಂಗ ಜಾಲಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತ್ತು. ಗಾಜಾದಲ್ಲಿನ ಸುರಂಗ ಜಾಲವು 500 ಕಿಮೀ ಉದ್ದವಿದ್ದು, ಕೇವಲ 5 ಪ್ರತಿಶತದಷ್ಟು ಮಾತ್ರ ನಾಶವಾಗಿದೆ ಎಂದು ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹೇಳಿಕೊಂಡಿದ್ದರು. ಇದನ್ನು ತುಲನಾತ್ಮಕ ವಾದ ದೃಷ್ಟಿಕೋನದಿಂದ ಹೇಳುವುದಾದರೆ, ಇಡೀ ದೆಹಲಿ ಮೆಟ್ರೋ ಜಾಲವು ಸುಮಾರು 392 ಕಿ.ಮೀ ಉದ್ದವಿದೆ. ಮತ್ತು ದೆಹಲಿಯು ಗಾಜಾಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ, ಇದು ಗಾಝಾ ಪಟ್ಟಿಯಲ್ಲಿರುವ ಭೂಗತ ಜಾಲವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಸೂಚಿಸುತ್ತದೆ.
ನಾಗರಿಕ ವಸತಿ ಕಟ್ಟಡಗಳ ಗುರಿಯ ಬಗ್ಗೆ ಜಾಗತಿಕ ಟೀಕೆಗಳಿಗೆ ಪ್ರತಿಕ್ರಿಯಿಸಿದ ಇಸ್ರೇಲಿ ಪಡೆಗಳು ಹಮಾಸ್ ಕಾರ್ಯಕರ್ತರು ನಾಗರಿಕ ವಾಸ ಕಟ್ಟಡಗಳ ಕೆಳಗಿನ ಸುರಂಗಗಳಲ್ಲಿ ಅಡಗಿಕೊಳ್ಳುತ್ತಾರೆ ಎಂದು ನಿರಂತರ ವಾದಿಸಿದ್ದಾರೆ. 2007 ರಲ್ಲಿ ಗಾಝಾ ಪಟ್ಟಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ, ನಗರದೊಳಗೆ ಮತ್ತು ಗಾಜಾ-ಇಸ್ರೇಲ್ ಗಡಿಯಾದ್ಯಂತ ಸುರಂಗ ಜಾಲಗಳನ್ನು ವಿಸ್ತರಿಸಲು ಹಮಾಸ್ ಕೆಲಸ ಮಾಡಿದೆ.
ವಿಸ್ತಾರವಾದ ಜಾಲದಿಂದಾಗಿ, ಇಸ್ರೇಲಿ ಪಡೆಗಳು ಸುರಂಗಗಳನ್ನು ‘ಗಾಜಾ ಮೆಟ್ರೋ’ ಎಂದು ಉಲ್ಲೇಖಿಸುತ್ತದೆ. ಈ ಸುರಂಗಗಳ, ಹಿಂದಿನ ವೀಡಿಯೊಗಳು ಒಳಗೆ ಅಳವಡಿಸಲಾಗಿರುವ ದೀಪಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಮರೆಮಾಚಲು ಸಾಕಷ್ಟು ಸ್ಥಳವನ್ನು ತೋರಿಸುತ್ತವೆ. ಗೋಡೆಗಳನ್ನು ಸಿಮೆಂಟ್‌ನಿಂದ ಮಾಡಲಾಗಿದ್ದು, ಹಮಾಸ್ ಚಟುವಟಿಕೆಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸಲು ಗಾಝಾಕ್ಕೆ ಮಾನವೀಯ ನೆರವಿನ ಮೂಲವನ್ನು ಪರಿವರ್ತಸಲಾಗಿದೆ ಎಂಬ ಆರೋಪವನ್ನು ಒತ್ತಿ ಹೇಳಿದೆ.
ಕಳೆದ ವಾರಾಂತ್ಯದಲ್ಲಿ ಹಮಾಸ್‌ನ ಆಘಾತಕಾರಿ ದಾಳಿಗಳು ಬೃಹತ್ ರಾಕೆಟ್ ಆಕ್ರಮಣ, ನೆಲ ಮತ್ತು ಜಲದ ಏಕಕಾಲಿಕ ದಾಳಿಯ ಸಂಯೋಜನೆಯಾಗಿದೆ. ಗಾಜಾದೊಂದಿಗಿನ ಇಸ್ರೇಲ್‌ನ ಗಡಿಯು ಬೇಲಿಯಿಂದ ಸುತ್ತುವರಿದಿದೆ ಮತ್ತು ಚಲನೆಯನ್ನು ಪತ್ತೆಹಚ್ಚಲು ಸಂವೇದಕಗಳನ್ನು ಹೊಂದಿದೆ. ಆದರೆ ಹಮಾಸ್ ನಾಗರಿಕರ ಮೇಲೆ ಹಠಾತ್ ದಾಳಿ ನಡೆಸುವ ಮುನ್ನ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಹಮಾಸ್ ಕಾರ್ಯಕರ್ತರು ನಿಗೂಢವಾಗಿ ಇಸ್ರೇಲ್‌ಗೆ ಪ್ರವೇಶಿಸುವಲ್ಲಿ ಸುರಂಗಗಳು ಪ್ರಮುಖ ಪಾತ್ರವಹಿಸಿವೆ ಎಂದು ನಂಬಲಾಗಿದೆ.
ಇನ್ನಷ್ಟು ವರದಿಗಳು
ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆಗೆ ಪ್ರತಿಕ್ರಿಯಿಸಿದ ಹಮಾಸ್, ಸೌದಿ, ಅಷ್ಟ್ರೇಲಿಯ.
ಅಮೃತಸರದಲ್ಲಿ ಇಂದು 205 ಅಕ್ರಮ ಭಾರತೀಯ ವಲಸಿಗರೊಂದಿಗೆ ಇಳಿಯಲಿರುವ ಯು.ಎಸ್.ಸಿ-17 ಮಿಲಿಟರಿ ವಿಮಾನ.
ಭಾರತೀಯ ಅಮೆರಿಕನ್ ಉದ್ಯಮಿ ಶ್ರೀರಾಮ ಕೃಷ್ಣನ್ ಅವರನ್ನು ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ ಟ್ರಂಪ್.