ಗಾಝಾ : ಅಲ್ ಜಜೀರಾ ಅರೇಬಿಕ್ ಗಾಝಾ ವರದಿಗಾರ ವೇಲ್ ದಹದೌಹ್ ಅವರ ಕುಟುಂಬ ಸದಸ್ಯರು ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ,ಮೃತರಲ್ಲಿ ಅವರ ಪತ್ನಿ, ಮಗ ಮತ್ತು ಮಗಳು ಸೇರಿದ್ದಾರೆ.ಅವರ ಕುಟುಂಬವು ಗಾಝಾ ನಿರಾಶ್ರಿತರ ಶಿಬಿರದಲ್ಲಿ ವಾಸವಿತ್ತು.
ದಹದೌ ಅವರ ಕುಟುಂಬವು ‘ಗಾಜಾ ಪಟ್ಟಿಯಲ್ಲಿರುವ ಅತ್ಯಂತ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾಗಿದೆ’
ಅಲ್ ಜಜೀರಾ ಅರೇಬಿಕ್ ನಿರ್ಮಾಪಕ ಸಫ್ವತ್ ಅಲ್-ಕಹ್ಲೌಟ್ ಗಾಝಾದ ಡೆರ್ ಅಲ್-ಬಲಾಹ್ ದಹದೌಹ್ ಮತ್ತು ಅವನ ಹತ್ಯೆಗೀಡಾದ ಕುಟುಂಬ ಸದಸ್ಯರ ಬಗ್ಗೆ ಅವರ ಅನುಭವ ಹೇಲಿದ್ದಾರೆ.
“ನಾನು 20 ವರ್ಷಗಳಿಗೂ ಹೆಚ್ಚು ಕಾಲ ವೇಲ್ ಅನ್ನು ತಿಳಿದಿದ್ದೇನೆ “ಸತ್ಯವನ್ನು ವರದಿ ಮಾಡಿದ್ದಕ್ಕಾಗಿ ಅವರಿಗೆ ಈ ಗತಿ ಬಂತು, ಅದು ನಿರೀಕ್ಷಿಸಲಾಗಿತ್ತು. ಮತ್ತು ಈಗ, ನಮ್ಮ ಸ್ಥಳಗಳನ್ನು ಸ್ಥಳಾಂತರಿಸಲು ಮತ್ತು ಬದಲಾಯಿಸಲು ಸಂಬಂಧಿಕರಿಂದ ನಮಗೆ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ, ವಿಶೇಷವಾಗಿ ವಿದೇಶದಲ್ಲಿ ವಾಸಿಸುವವರಿಗೆ ಸುರಕ್ಷಿತ ಸ್ಥಳವಿದೆ ಎಂದು ಸಲಹೆಗಳು ಬರುತ್ತಿದೆ ಎಂದು ಸಫ್ ವತ್ ಹೇಳಿದರು.
ಅವರು ಗಾಝಾದಲ್ಲಿ ಅಲ್ ಜಜೀರಾ ಪ್ರಸಾರದ ಬೆನ್ನೆಲುಬು ಆಗಿದ್ದರು . ಅವರು ಗಾಝಾದಲ್ಲಿ ಪ್ಯಾಲೆಸ್ಟೀನಿಯನ್ನರ ಧ್ವನಿಯಾಗಿದ್ದರು – ನೀವು ಅಲ್ಲಿ ಬೀದಿಗಳಲ್ಲಿ ನಡೆಯುವಾಗ ಯಾರನ್ನಾದರೂ ಕೇಳಿದರು ಅವರು ಈ ಬಗ್ಗೆ ಹೇಳುತ್ತಾರೆ ಎಂದು ಅಲ್ ಜಾಝೀರಾದ ಹೋದಾ ಅಬ್ದುಲ್ ಹಮೀದ್ ವರದಿ ಮಾಡಿದ್ದಾರೆ.
ಇನ್ನಷ್ಟು ವರದಿಗಳು
ಗಾಝಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆಗೆ ಪ್ರತಿಕ್ರಿಯಿಸಿದ ಹಮಾಸ್, ಸೌದಿ, ಅಷ್ಟ್ರೇಲಿಯ.
ಅಮೃತಸರದಲ್ಲಿ ಇಂದು 205 ಅಕ್ರಮ ಭಾರತೀಯ ವಲಸಿಗರೊಂದಿಗೆ ಇಳಿಯಲಿರುವ ಯು.ಎಸ್.ಸಿ-17 ಮಿಲಿಟರಿ ವಿಮಾನ.
ಭಾರತೀಯ ಅಮೆರಿಕನ್ ಉದ್ಯಮಿ ಶ್ರೀರಾಮ ಕೃಷ್ಣನ್ ಅವರನ್ನು ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ ಟ್ರಂಪ್.