ದೆಹಲಿ: ಬುಧವಾರ ಸಂಜೆ ಭಾರೀ ಮಳೆಯಾದ ದೆಹಲಿ-ಎನ್‌ಸಿಆರ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು.
ಭಾರೀ ಮಳೆಯಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ
ಮುಂಬರುವ ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ನೀಡಲಾಗಿದೆ
ದೆಹಲಿ-ಎನ್‌ಸಿಆರ್‌ನಲ್ಲಿ (ರಾಷ್ಟ್ರೀಯ ರಾಜಧಾನಿ ಪ್ರದೇಶ) ಹಲವಾರು ಪ್ರಮುಖ ರಸ್ತೆಗಳು ಮತ್ತು ಅನೇಕ ತಗ್ಗು ಪ್ರದೇಶಗಳು ಬುಧವಾರ ಸಂಜೆ ನಗರದಲ್ಲಿ ಸುರಿದ ಭಾರೀ ಮಳೆಯ ನಂತರ ಜಲಾವೃತವಾಗಿದ್ದು, ಸಂಚಾರ ದಟ್ಟಣೆಯ ಮೇಲೆ ಪರಿಣಾಮ ಬೀರಿತು ಮತ್ತು ಸಾಮಾನ್ಯ ಜೀವನವು ದುರ್ಬಲಗೊಂಡಿತು. ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯಿಂದ ಹತ್ತು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ದೆಹಲಿ-ನೋಯ್ಡಾ ಎಕ್ಸ್‌ಪ್ರೆಸ್‌ವೇ ಮತ್ತು ಮಥುರಾ ರಸ್ತೆ ಮತ್ತು ಐಟಿಒ, ಏ ಐ ಐ ಎಂ ಎಸ್ ಸರಾಯ್ ಕಾಲೇ ಖಾನ್‌ನಂತಹ ಪ್ರಮುಖ ಸ್ಥಳಗಳು ಸೇರಿದಂತೆ ಹಲವಾರು ಪ್ರಮುಖ ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸಾಲುಗಳನ್ನು ಕಾಣಬಹುದಾಗಿದೆ.
ಇನ್ನಷ್ಟು ವರದಿಗಳು
‘ಐ ಲವ್ ಮುಹಮ್ಮದ್’ ವಿವಾದ, ಶುಕ್ರವಾರದ ಪ್ರಾರ್ಥನಾ ಪೂರ್ವ ಬರೇಲಿಯಲ್ಲಿ ಹೈ ಅಲರ್ಟ್, ಬಿಗಿ ಭದ್ರತೆ.
‘ಕ್ರಿಮಿನಲ್ ಸಂಸದರ’ ಮಸೂದೆ: ಅಮಿತ್ ಶಾ ವಿರುದ್ಧ ಕರಡು ಎಸೆದು ಪ್ರತಿಪಕ್ಷಗಳ ಆಕ್ರೋಶ
ಬಿಹಾರ,ಚುನಾವಣಾ ಕರಡು ಪಟ್ಟಿಯಲ್ಲಿ ಮುಸ್ಲಿಮರಿಗಿಂತ ಹಿಂದೂಗಳದ್ದೇ ಹೆಚ್ಚಿನ ಹೊರಗಿಡುವಿಕೆ: ಸ್ಕ್ರೋಲ್ ವಿಶ್ಲೇಷಣೆ.