January 22, 2025

Vokkuta News

kannada news portal

ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ಪೀಕರ್ ಯು.ಟಿ.ಖಾದರ್ ಮುಖ್ಯಮಂತ್ರಿಗೆ ಪತ್ರ.

ಬೆಂಗಳೂರು : ಬೆಂಗಳೂರಿನ ಬ್ಯಾರಿ ವೆಲ್ವೇರ್ ಅಸೋಸಿಯೇಷನ್‌ ಮಾಡಿರುವ ಮನವಿ ಹಿನ್ನೆಲೆಯಲ್ಲಿ 2025ನೆ ಸಾಲಿನ ರಾಜ್ಯ ಬಜೆಟ್‌ನಲ್ಲಿ ‘ಕರ್ನಾಟಕ ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ’ ಸ್ಥಾಪಿಸುವ ಘೋಷಣೆಯನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಸಭೆ ಸ್ಪೀಕ‌ರ್ ಯು.ಟಿ.ಖಾದರ್ ಫರೀದ್ ಪತ್ರ ಬರೆದಿದ್ದಾರೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವಾಸಿಸುವ ಸುಮಾರು 20 ಲಕ್ಷಕ್ಕೂ ಹೆಚ್ಚು ಕರ್ನಾಟಕದ ಮೂಲ ನಿವಾಸಿಗಳಾದ ಬ್ಯಾರಿ ಜನಾಂಗವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಈ ಸಮುದಾಯವು ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ.ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಕರಾವಳಿ ಜಿಲ್ಲೆಯ ಹಲವು ಸಂಘಟನೆಗಳು ಈ ಹಿಂದೆ ಹಲವು ನಿಯೋಗಗಳ ಮೂಲಕ ಸಭಾಧ್ಯಕ್ಷರು , ಮುಖ್ಯ ಮಂತ್ರಿಗಳು , ಉಪ ಮುಖ್ಯ ಮಂತ್ರಿ, ಅಲ್ಪ ಸಂಖ್ಯಾತ ಸಚಿವರನ್ನು ಈ ಹಿಂದೆ ಭೇಟಿ ಮಾಡಿ ಮನವಿ ಸಲ್ಲಿಸಿದೆ.