ಬೆಂಗಳೂರು: ಇತ್ತೀಚೆಗೆ ಘಟಣೆಯೊಂದಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವರಾದ ಮಾಂಕಾಳ ವೈದ್ಯ ಅವರು ಗೋಹತ್ಯೆಗಾರರನ್ನು ಗುಂಡಿಟ್ಟು ಕೊಳ್ಳಬೇಕು ಎಂಬಿತ್ಯಾದಿಯಾಗಿ ಸಂಭೋಧಿಸಿರುವ ಹೇಳಿಕೆಗೆ ಕರ್ನಾಟಕ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಯು ಖಂಡನೆ ವ್ಯಕ್ತ ಪಡಿಸಿದೆ.
ಮಾನ್ಕಾಲ ಅವರು ತನ್ನ ಸಾಂವಿಧಾನಿಕ ಭದ್ಧತೆನ್ನು ಮುರಿದಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಸ್ವ ಇಚ್ಛೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದೆ. ಮಾನ್ಕಳ ರವರ ಹೇಳಿಕೆ ಸಂವಿಧಾನದ ಮೂಲಭೂತ ಹಕ್ಕುಗಳಾದ ಜೀವಿಸುವ ಹಕ್ಕು ಮತ್ತು ವೈಯುಕ್ತಿಕ ಘನತೆಯನ್ನು ಉಲ್ಲಂಘಿಸಿದೆ ಮಾತ್ರವಲ್ಲ ಕಾನೂನಾತ್ಮಕ ಉಲ್ಲಂಘನೆ ಕೂಡಾ ಆಗಿದೆ.
ಮಾಂಕಾಳ ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣ ಧಾಖಲಿಸಬೇಕಿದೆ. ಮಾಣ್ಕಳ ಅವರ ವಿರುದ್ಧ ಅಪರಾಧಕ್ಕೆ ಪ್ರೇರಣೆ, ವಿಭಿನ್ನ ಸಮುದಾಯಗಳ ವಿರುದ್ಧ ಹೇಳಿಕೆ, ಮತೀಯ ವೈಶ್ಯಮ್ಮ ಸೃಷ್ಟಿ, ಗಲಭೆಗೆ ಕುಮ್ಮಕ್ಕು ಇತ್ಯಾದಿ ಪ್ರಕರಣ ದಾಖಲು ಮಾಡಬೇಕೆಂದು ಪಿಯುಸಿಎಲ್ ಕರ್ನಾಟಕ ಅಧ್ಯಕ್ಷರಾದ ಅರವಿಂದ್ ನರೈನ್ ಮತ್ತು ಪ್ರಧಾನ ಕಾರ್ಯದರ್ಶಿ ಶುಜಯತುಲ್ಲಾ ರವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಇನ್ನಷ್ಟು ವರದಿಗಳು
ಅಮೆರಿಕ ಭಾರತೀಯ ಪ್ರಜೆಗಳನ್ನು ಗಡೀಪಾರು ಮಾಡಿದ ರೀತಿ,ಕೈಕೋಳ ತೊಡಿಸಿದ ಕೃತ್ಯ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ: ಪಿಯುಸಿಎಲ್.
ಎನ್ಐಎ ಲಕ್ನೋ ನ್ಯಾಯಾಲಯ ತೀರ್ಪು: ಮಾನವ ಹಕ್ಕು ಸಂಘಟನೆಗಳ ಬಗ್ಗೆ ನಕಾರಾತ್ಮಕ ಉಲ್ಲೇಖ,ಪಿಯುಸಿಎಲ್ ಪ್ರತಿಕ್ರಿಯೆ.
ರವಿಕಿರಣ್ ಜೈನ್ ರಂತಹ ಓರ್ವ ಸಮರ್ಥ ಹಕ್ಕು ಕಾರ್ಯಕರ್ತನನ್ನು ಪಿಯುಸಿಎಲ್ ಕಳೆದು ಕೊಂಡಿದೆ, ಸಂತಾಪ; ಕವಿತಾ ಶ್ರೀವಾಸ್ತವ.