ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025 ರ ಏಪ್ರಿಲ್ 22 ರಂದು ಮಧ್ಯಾಹ್ನ ಒಬ್ಬ ಸ್ಥಳೀಯ ನಿವಾಸಿ – ಪೋನಿ ರೈಡ್ ಆಪರೇಟರ್ ಮತ್ತು ನೇಪಾಳದ ಒಬ್ಬ ನಾಗರಿಕ ಸೇರಿದಂತೆ 26 ಪ್ರವಾಸಿಗರ ಹತ್ಯೆಯನ್ನು ಪಿಯುಸಿಎಲ್ ಬಲವಾಗಿ ಖಂಡಿಸುತ್ತದೆ. ಈ ದಾಳಿಗಳು 25 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ. ‘ಪ್ರವಾಸಿಗರ ಕಣಿವೆ’ಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದು, ದೇಶದಾದ್ಯಂತ ಆಘಾತ ಮತ್ತು ಭಯೋತ್ಪಾದಕ ಅಲೆಗಳನ್ನು ಕಳುಹಿಸುವ ಅವರ ಕಠೋರ ಉದ್ದೇಶವನ್ನು ಸಾಧಿಸಿದೆ, ಕಾಶ್ಮೀರ ಕಣಿವೆಯಲ್ಲಿ ಸಹಜತೆಯ ಸ್ಥಿತಿಯನ್ನು ನಾಶಪಡಿಸಿದೆ ಮತ್ತು ಹೆಚ್ಚಿನ ಪ್ರವಾಸಿಗರು ತಮ್ಮ ಪ್ರವಾಸಗಳನ್ನು ಅರ್ಧದಾರಿಯಲ್ಲೇ ತ್ಯಜಿಸಿ ಮನೆಗೆ ಮರಳಲು ಪ್ರೇರೇಪಿಸಿದೆ ಮತ್ತು ಪ್ರವಾಸೋದ್ಯಮಾವನ್ನು ದಂಗು ಗೊಳಿಸುವಂತೆ ಮಾಡಿದೆ.
ಸಂತ್ರಸ್ತ ಕುಟುಂಬದ ನೋವಿನೊಂದಿಗೆ ಪಿಯುಸಿಎಲ್ ತೀವ್ರ ಸಂತಾಪ ದೊಂದಿಗೆ ನಿಲ್ಲುತ್ತದೆ. ಘಟನೆ ನಡೆದ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸರ್ವ ಪ್ರಯತ್ನಗಳಿಗೆ ಸರಕಾರ ಮುಂದಾಗುತ್ತದೆ ಎಂದು ಪಿಯುಸಿಎಲ್ ನಂಬುತ್ತದೆ ಮತ್ತು ಘಟನೆ ಮತ್ತು ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಿ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಬೇಕಿದೆ.
ಪಿಯುಸಿಎಲ್ ಅಚ್ಚರಿ ವ್ಯಕ್ತ ಪಡಿಸಿ ಪಲ್ವಾಮದ ಈ ಹಿಂದಿನ ಘಟನೆಯಂತೆ ಗುಪ್ತಚರ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೇಗೆ ವಿಫಲವಾಗಿದೆ, ಎಂಬುದು ಕೂಡ ಮಹಾತ್ವದ ವಿಷಯ ಆಗಿದೆ.
ಕೇಂದ್ರ ಸರಕಾರ ಮತ್ತು ಜಮ್ಮು ಕಾಶ್ಮೀರ ಸರಕಾರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಪೂರೈಸಬೇಕು. ಈ ದುಸ್ತರ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ತಮ್ಮ ವಿದೇಶಿ ಪ್ರವಾಸ ಮೊಟಕು ಗೊಳಿಸಿ ಭಾರತಕ್ಕೆ ಹಿಂತಿರುಗಿದ್ದ ಮತ್ತು ಗೃಹ ಮಂತ್ರಿ ಅಮಿತ್ ಶಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕ್ರಮ ಶ್ಲಾಘನೀಯ. ಸಂತ್ರಸ್ತ ಅವಲಂಬಿತರನ್ನು ತಕ್ಷಣ ಅವರ ತವರಿಗೆ ತಲುಪಿಸುವ ಸರಕಾರದ ಪ್ರಯತ್ನ ಶ್ಲಾಘನೀಯ. ಸುಮಾರು ಹದಿನೈದು ಸಾವಿರ ಪ್ರವಾಸಿಗರು ಹಿಂತಿರುಗಲು ಸಿದ್ಧರಾಗಿರುತ್ತಾರೆ.ಕಾಶ್ಮೀರದ ಜನತೆ ಈ ಸಂದರ್ಭದಲ್ಲಿ ನಡೆಸಿದ ಮಾನವೀಯ ಸೇವೆಗಳು ಮೆಚ್ಚುವಂತದ್ದು. ಮತ್ತು ಈಬಗ್ಗೆ ಕ್ಯಾಂಡಲ್ ಪ್ರೊಟೆಸ್ಟ್ನ್ ಮಾಡಿರುವುದು.
ಆರ್ಟಿಕಲ್ 370 ನೇ ವಿಧಿ ಹಿಂತೆಗೆತ ನಂತರ ಪರ್ವೆಜ್ ಕುರ್ರಾಮ್ ರಂತಹ ಪತ್ರಕರ್ತರೂ ಮತ್ತು ಈತರರನ್ನು ಜೈಲು ಗೊಳಿಸುವಿಕೆ ಅವರಿಗೆ ಸುದ್ಧಿಜಾಲ ಮತ್ತು ಪತ್ರಿಕೆಗಳ ನಿರಾಕರಣೆ ಇತ್ಯಾದಿ ಸಂಭವಿಸಿರುವುದು ಖೇದಕರ. ವಿದ್ಯಾರ್ಥಿಗಳನ್ನು ತಮ್ಮ ಇರುವಿಕೆಯ ಸ್ಥಳದಿಂದ ತೆರವು ಗೊಳಿಸಿದ ಸುದ್ದಿಯೂ ಕೆಳಿಬಂದಿದೆ.
ಬೇಡಿಕೆಗಳು
ಸಂತ್ರಸ್ತರಿಗೆ ಪರಿಹಾರ ನೀಡುವಿಕೆ, ಸರಕಾರ ಪಾಕಿಸ್ತಾನದೊಂದಿಗೆ ಯಾವುದೇ ಶೀತಲ ಸಮರ ನಡೆಸದೆ ಇರುವುದು,ಸಮಸ್ಯೆ ಇತ್ಯರ್ಥಕ್ಕೆ ಅಂತರರಾಷ್ಟ್ರೀಯ ವೇದಿಕೆ, ವಿಶ್ವಸಂಸ್ಥೆ ಎನ್ನು ಬಳಸುವುದು, ಕಾಶ್ಮೀರದ ಜನತೆಗೆ ಪ್ರಜಾಪ್ರಭುತ್ವದ ಹಕ್ಕನ್ನು ಪುನರ್ ಸ್ಥಾಪಿಸುವುದು, ನಾಗರಿಕ ಸಂಸ್ಥೆಗಳ ಮುಖ್ಯಸ್ಥರು, ವಕೀಲರು, ಪತ್ರಕರ್ತರನ್ನು ಜೈಲಿನಿಂದ ಬಿಡುಗಡೆ ಗೊಳಿಸುವುದು, ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಇತ್ಯಾದಿ ಬೇಡಿಕೆಗಳನ್ನು ರಾಷ್ಟ್ರೀಯ ಪಿಯುಸಿಎಲ್ ಸರಕಾರದ ಮುಂದಿಟ್ಟಿದೆ ಎಂದು ಅಧ್ಯಕ್ಷೆ ಕವಿತಾ ಶ್ರೀ ವಾಸ್ತವ ಮತ್ತು ಪ್ರಧಾನ ಕಾರ್ಯದರ್ಶಿ ವಿ.ಸುರೇಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವರದಿಗಳು
‘ಐ ಲವ್ ಮುಹಮ್ಮದ್’ ವಿವಾದ, ಶುಕ್ರವಾರದ ಪ್ರಾರ್ಥನಾ ಪೂರ್ವ ಬರೇಲಿಯಲ್ಲಿ ಹೈ ಅಲರ್ಟ್, ಬಿಗಿ ಭದ್ರತೆ.
‘ಕ್ರಿಮಿನಲ್ ಸಂಸದರ’ ಮಸೂದೆ: ಅಮಿತ್ ಶಾ ವಿರುದ್ಧ ಕರಡು ಎಸೆದು ಪ್ರತಿಪಕ್ಷಗಳ ಆಕ್ರೋಶ
ಬಿಹಾರ,ಚುನಾವಣಾ ಕರಡು ಪಟ್ಟಿಯಲ್ಲಿ ಮುಸ್ಲಿಮರಿಗಿಂತ ಹಿಂದೂಗಳದ್ದೇ ಹೆಚ್ಚಿನ ಹೊರಗಿಡುವಿಕೆ: ಸ್ಕ್ರೋಲ್ ವಿಶ್ಲೇಷಣೆ.