ಬೆಂಗಳೂರು: ಧರ್ಮಸ್ಥಳದಲ್ಲಿ ಹಲವಾರು ವರ್ಷಗಳಿಂದ ಈಚೆಗೆ ನಡೆದಿದೆ ಎನ್ನಲಾದ ಕೊಲೆ ಆರೋಪ ಹಾಗೂ ಅನಧಿಕೃತ ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ಎಸ್ಐಟಿ ರಚಿಸಿ ತನಿಖೆ ಮಾಡಿ ಕಾನೂನಾತ್ಮಕ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ಎಸ್‌ಐಟಿ ತಂಡದಲ್ಲಿ ಐಪಿಎಸ್ ಅಧಿಕಾರಿ ಅನುಚೇತ್, ಜಿತೇಂದ್ರ ಕುಮಾರ್, ಸೌಮ್ಯಲತಾ ಇರಲಿದ್ದಾರೆ.
ಶೀಘ್ರದಲ್ಲಿ ಎಸ್‌ಐಟಿ ತಂಡದಿಂದ ತನಿಖೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ಬಿಡುಗಡೆಗೊ ಳಿಸಿರುವ ದ.ಕ ಜಿಲ್ಲಾ ಎಸ್.ಪಿ ಡಾ. ಅರುಣ್ ಕೆ., ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಹೆಸರನ್ನು ಬಹಿರಂಗ ಪಡಿಸದೆ ಇರುವ ವ್ಯಕ್ತಿಯೋರ್ವ ತಾನು ಈ ಹಿಂದೆ ಧರ್ಮಸ್ಥಳ ಧಾರ್ಮಿಕ ಸಂಸ್ಥೆ ಒಂದರಲ್ಲಿ ನೈರ್ಮಲ್ಯ ನೌಕರಸ್ತ ನಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ತನಗೆ ತನ್ನ ಮೇಲುಸ್ತುವಾರಿ ವ್ಯಕ್ತಿಗಳು ಹಲವಾರು ಶವಗಳನ್ನು ಗುಪ್ತವಾಗಿ ವಿಲೇವಾರಿ ಮಾಡಲು ನಿರ್ದೇಶನ ನೀಡುತ್ತಿದ್ದರು ಮತ್ತು ಅದರಂತೆ ತಾನು ಹಲವಾರು ಮಹಿಳೆ ಅಪ್ರಾಪ್ತ ಹೆಣ್ಣು ಮಕ್ಕಳ ಮತ್ತು ಭಿಕ್ಷುಕರ ಶವಗಳನ್ನು ಧರ್ಮಸ್ಥಳ ಆಸು ಪಾಸು ಕಾಡಿನಲ್ಲಿ ಗುಪ್ತವಾಗಿ ಹೂತು ಹಾಕಿದ್ದೇನೆ, ಆ ಶವಗಳ ದೇಹದ ಮೇಲೆ ಅತ್ಯಾಚಾರ ಗುರುತುಗಳು ಕಂಡು ಬಂದಿರುತ್ತದೆ, ಇಂತಹ ವೃತ್ತಿಯಲ್ಲಿ ತಾನು ಬೇಸತ್ತು ತಾನು ತನ್ನ ಕುಟುಂಬವನ್ನು ಕರೆದು ಕೊಂಡು ನಿಗೂಢವಾಗಿ ಬೇರೆ ರಾಜ್ಯಕ್ಕೆ ವಲಸೆ ಹೋಗಿ ವಾಸಿಸುತ್ತಿದ್ದೆ, ಹಾಲಿ ತನಗೆ ತನ್ನ ಹಿಂದಿನ ವೃತ್ತಿ ಬಗ್ಗೆ ಪಶ್ಚಾತಾಪ ಹೊಂದಿ ಈ ಹಿಂದಿನ ಶವಗಳನ್ನು ಹೂತಿಟ್ಟ ಬಗ್ಗೆ ಪಾಪ ಪ್ರಜ್ಞೆ ಬಂದಿದ್ದು , ತನ್ನ ಕಾರ್ಯದ ಬಗ್ಗೆ ಕಾನೂನು ತನಿಖೆ ನಡೆಯ ಬೇಕೆಂದು ವಕೀಲರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ದೂರು ಸಲ್ಲಿಸಿರುತ್ತಾರೆ, ದೂರಿನ ಅನ್ವಯ ಸ್ಥಳೀಯ ಪೊಲೀಸು ಸ್ಟೇಶನ್ ನಲ್ಲಿ ದೂರು ದಾರರ ಹೇಳಿಕೆ ಪಡೆಯಲಾಗಿದ್ದು, ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಬಹು ಆಯಾಮದಲ್ಲಿ ಚರ್ಚೆ ಆಗುತ್ತಿದ್ದು, ಸರಕಾರದ ಮುಂದೆ ಕ್ರಮದ ಬೇಡಿಕೆ ದ್ವನಿ ಕೇಳುತ್ತಿದ್ದು ಸರಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.
ಸ್ಥಳೀಯವಾಗಿ ಈ ಹಿಂದೆ ನಿಗೂಢವಾಗಿ ಕೊಲೆ ಆದ ಸ್ಥಳೀಯ ವಿಧ್ಯಾರ್ಥಿನಿ ಪರ ಹೋರಾಟ ರಚನೆ ಆಗಿದ್ದು ಈ ಕೊಲೆಯ ನೈಜ ಆರೋಪಿತರ ಬಗ್ಗೆ ಕೂಡ ಮರು ತನಿಕ ಆಗಬೇಕೆಂದು ಆಗ್ರಹ ಕೇಳಿಬಂದಿದೆ.
ಪ್ರಕರಣದ ವಿಷಯವು ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ಆಗುತ್ತಿದ್ದು, ಈ ಬಗ್ಗೆಗಿನ ಸುದ್ದಿಗಳು ಇಂದು ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ.
ಧರ್ಮಸ್ಥಳ ಧಾರ್ಮಿಕ ಕೇಂದ್ರದ ಮುಖ್ಯಸ್ಥರ ಕುಟುಂಬ ಸದಸ್ಯರ ವಿರುದ್ಧ ಅಪರಾಧಗಳ ಆರೋಪ ಗುರಿ ಆಗುತ್ತಿದ್ದು, ಪ್ರಭಾವೀ ವ್ಯಕ್ತಿಗಳು ಆದ ಕಾರಣ , ತನಿಖೆಯ ಹಾದಿ ಮತ್ತುನ್ಯಾಯ ಬೇಡಿಕೆಯ ವಿಷಯವು ತೀವ್ರ ಕುತೂಹಲ ಕೆರಳಿಸಿದೆ.
ಇನ್ನಷ್ಟು ವರದಿಗಳು
ಕರ್ನಾಟಕದಲ್ಲಿ ಎಳೆ ಶಿಶುವಿನಿಂದ 18 ವರ್ಷ ವಯಸ್ಸಿನ 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಪತ್ತೆ
ಸಮಾನಾಂತರ ವಕೀಲರ ಸಂಘದ ಪ್ರಸ್ತಾವಿತ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ,ಕ.ಹೈಕೋರ್ಟ್ ಬೆಂಗಳೂರಿನ ವಕೀಲರ ಸಂಘ (ಎಎಬಿ)ಕ್ಕೆ ಮಧ್ಯಂತರ ಆದೇಶ.
ಧರ್ಮಸ್ಥಳ ಪ್ರಕರಣ, ಬೃಹತ್ ತಿರುವು, ಸುಳ್ಳು ಸಾಕ್ಷ್ಯದಾರ ಮುಸುಕುಧಾರಿ ವ್ಯಕ್ತಿ ಬಂಧನ.