ಜಾಗತಿಕ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ, ಗಾಝಾ ಪಟ್ಟಿಯಲ್ಲಿರುವ ಪ್ಯಾಲೆಸ್ಟೀನಿಯನ್ ಮಹಿಳೆಯರಿಗೆ “ಬದುಕಲು ಮತ್ತು ಸುರಕ್ಷಿತವಾಗಿ ಜೀವನ ಸಾಗಿಸಲು ಅಗತ್ಯವಾದ ಪರಿಸ್ಥಿತಿಗಳನ್ನು” ಕೂಡ ಇಸ್ರೇಲ್ ನಿರಾಕರಿಸಿದೆ, ಎಂದು ವರದಿ ಮಾಡಿದೆ
ಇಸ್ರೇಲಿ ಯುದ್ಧವು ಸಾಮೂಹಿಕ ಸ್ಥಳಾಂತರದಿಂದ ಹಿಡಿದು ಸ್ಥಳೀಯ ಆರೋಗ್ಯ ವ್ಯವಸ್ಥೆಯ ನಾಶದವರೆಗೆ ಹಲವಾರು ಕಷ್ಟಗಳನ್ನು ಸೃಷ್ಟಿ ಮಾಡಿರುವುದರಿಂದ ಗಾಝಾದಲ್ಲಿನ ಮಹಿಳೆಯರು ಮತ್ತು ಹುಡುಗಿಯರನ್ನು ” ಅತೀವ ಅಂಚಿಗೆ” ತಳ್ಳಲಾಗಿದೆ ಎಂದು ಅಮ್ನೆಸ್ಟಿ ಮಂಗಳವಾರ ಎಚ್ಚರಿಸಿದೆ
ಗರ್ಭಿಣಿಯರು, ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸಾಕಾಂಶಿಗಳು, ಈ ಪ್ರದೇಶದಲ್ಲಿ ಸಾಕಷ್ಟು ಆರೋಗ್ಯ ಸೇವೆಗಳ ಕೊರತೆಯಿಂದ ವಿಶೇಷವಾಗಿ ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ಆಮ್ನೆಸ್ಟಿ ಹೇಳಿಕೆಯಲ್ಲಿ ತಿಳಿಸಿದೆ.
ಆರೋಗ್ಯ, ಸುರಕ್ಷತೆ, ಘನತೆ ಮತ್ತು ಭವಿಷ್ಯದ ಹಕ್ಕುಗಳ ಈ ವ್ಯವಸ್ಥಿತ ಸವೆತವು ಯುದ್ಧದ ದುರದೃಷ್ಟಕರ ಉಪ-ಉತ್ಪನ್ನವಲ್ಲ; “ಇದು ಮಹಿಳೆಯರು ಮತ್ತು ಹುಡುಗಿಯರನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ನಡೆಸಲಾದ ಯುದ್ಧ ಕೃತ್ಯವಾಗಿದೆ” ಎಂದು ಸಂಸ್ಥೆ ಹೇಳಿದೆ.
ಇದು ಇಸ್ರೇಲ್‌ನ ಬಹು ಸಾಮೂಹಿಕ ಸ್ಥಳಾಂತರ, ಮೂಲಭೂತ ಮತ್ತು ಅಗತ್ಯ ವಸ್ತುಗಳ ಮೇಲೆ ಉದ್ದೇಶಪೂರ್ವಕ ನಿರ್ಬಂಧಗಳು, ಹಾಗೆಯೇ ಮಾನವೀಯ ಪರಿಹಾರ ಮತ್ತು ಗಾಝಾದ ಆರೋಗ್ಯ ವ್ಯವಸ್ಥೆಯನ್ನು ಧ್ವಂಸಗೊಳಿಸಿದ ಮತ್ತು ಇಡೀ ಕುಟುಂಬಗಳನ್ನು ನಾಶಮಾಡಿರುವ ಎರಡು ವರ್ಷಗಳ ನಿರಂತರ ಬಾಂಬ್ ದಾಳಿಯ ನಿರೀಕ್ಷಿತ ಪರಿಣಾಮವಾಗಿದೆ.l
2023 ರ ಅಕ್ಟೋಬರ್‌ನಲ್ಲಿ ಗಾಝಾದ ಮೇಲೆ ಇಸ್ರೇಲ್ ನಡೆಸಿದ ಯುದ್ಧ ಪ್ರಾರಂಭವಾದಾಗಿನಿಂದ 72,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಅಮೆರಿಕ ಮಧ್ಯಸ್ಥಿಕೆಯ “ಕದನ ವಿರಾಮ”ದ ಹೊರತಾಗಿಯೂ ಇಸ್ರೇಲಿ ದಾಳಿಗಳು ಮುಂದುವರೆದಿದ್ದು, ಗಾಝಾದಲ್ಲಿನ ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಎಂದು ವರದಿ ಬಹಿರಂಗ ಪಡಿಸಿದೆ.
ಇನ್ನಷ್ಟು ವರದಿಗಳು
ಮಹಾರಾಷ್ಟ್ರ: ದ್ವೇಷ ಅಪರಾಧ ಸಂತ್ರಸ್ತರ ಕಾನೂನು ಹಕ್ಕುಗಳಿಗಾಗಿ ಕಾರ್ಯಪಡೆ ಸ್ಥಾಪಿಸಲಿರುವ ಮುಸ್ಲಿಂ ಸಂಘಟನೆಗಳು.
ಸಾಮೂಹಿಕ ಮತದಾನದ ಹಕ್ಕು ನಿರಾಕರಣೆಯ ಕಾನೂನುಬದ್ಧಗೊಳಿಸುವಿಕೆ:ಸುಪ್ರೀಂ ಕೋರ್ಟ್ನ ಎಸ್.ಐ.ಆರ್ ತೀರ್ಪನ್ನು ಖಂಡಿಸಿದ ಪಿಯುಸಿಎಲ್.
ಮಕ್ಕಳ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವದ ಬಗ್ಗೆ ‘ ತಕ್ಷಣ ‘ ಗಮನತೆಗೆ ವಿಶ್ವಸಂಸ್ಥೆ ಕರೆ.