ಉಳ್ಳಾಲ: ಉಪವಾಸ ವೃತಾಂತ್ಯದ ಪ್ರಯುಕ್ತ ಉಳ್ಳಾಲ ನಗರ ಮತ್ತು ತಾಲೂಕು ವ್ಯಾಪ್ತಿಯ ಉಳ್ಳಾಲ, ಪೇಟೆ , ಕೋಟೆಪುರ, ಬಸ್ತಿ ಪಡ್ಪು , ಒಂಬತ್ತು ಕೆರೆ, ಉಳ್ಳಾಲ್ ಬೈಲ್ ಕಲ್ಲಾಪು, ಪರ್ಮನ್ನೂರ್, ಕುತ್ತಾರು, ಮದನಿನಗರ ಮುಂತಾದ ಕಡೆಯಿಂದ ಮುಸ್ಲಿಮ್ ಸಮುದಾಯದ ಪುರುಷರು , ಮಹಿಳೆಯರು ಮತ್ತು ಮಕ್ಕಳು ಇಂದು ಉಳ್ಳಾಲದ ಸಲ್ ಸಬೀಲ್ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್ ನಮಾಝ್ ಆಚರಿಸಿದರು.
ಈದ್ ಪ್ರಭಾಷಣವನ್ನು ನೆರವೇರಿಸಿದ ಇಬ್ರಾಹಿಂ ಸೌಶಾದ್ ರವರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ , ಒಂದು ತಿಂಗಳ ನಿರಂತರ ಉಪವಾಸದ ನಂತರದಲ್ಲಿ ನಾವು ಇಲ್ಲಿ ಒಟ್ಟು ಸೇರಿದ್ದೇವೆ. ಇಂದು ನಾವು ಅಲ್ಲಾಹನಿಗೆ ಅರ್ಪಿಸುವ ಈ ಆರಾಧನೆಯಲ್ಲಿನ ಪ್ರತಿ ಓರ್ವ ನಿಗೂ ನಾಳೆ ಅಲ್ಲಾಹನ ಸನ್ನಿಧಿಯಲ್ಲಿ ಭಯ ಗ್ರಸ್ತನಾಗಿ ನಿಲ್ಲಬೇಕಿದೆ. ಅಂದು ನಮ್ಮ ಮುಖವು ಭಯದಿಂದನ ಕೂಡಿರುತ್ತದೆ. ಅಲ್ಲಾಹನು ನಮ್ಮ ಆರಾಧನೆಯನ್ನು ಸ್ವೀಕರಿಸಬೇಕಿದೆ ಮತ್ತು ನಮ್ಮನ್ನು ಸ್ವರ್ಗದ ಪ್ರವೇಶಾರ್ಥಿಯಾಗಿ ಸ್ವೀಕರಿಸಲಿದ್ದಾನೆ.
ನಾವು ಸಲ್ಲಿಸಬೇಕಾದ ಆರಾಧನಾ ವಿಧಕ್ಕೆ ಪ್ರವಾದಿ ವರ್ಯರುಗಳು ಮಾದರಿ ಮಾರ್ಗ ದರ್ಶನ ನೀಡಿದ್ದಾರೆ. ಪ್ರವಾದಿ ಮುಹಮ್ಮದ್ ಸ.ಆ ರವರು ಮತ್ತು ಅವರ ಸಹಾಬತ್ ನಮಗೆ ನೀಡಿದ ಮಾರ್ಗದರ್ಶನ, ಆ ಕಾರಣದಿಂದಲೇ ನಾವು ಇಂದು ಉಪವಾಸ ವೃತ ಮತ್ತು ನಮಾಝ್ ನಿರ್ವಹಿಸುತ್ತಿದ್ದೇವೆ. ಇದನ್ನು ಅಲ್ಲಾಹನು ಸ್ವೀಕರಿಸಲಿ ಎಂದು ನಾವು ಪ್ರಾರ್ಥಿಸಬೇಕಿದೆ.
ಪ್ರಮುಖವಾದ ಇನ್ನೊಂದು ಅಂಶ ಏನೆಂದರೆ ನಾವು ದೇವ ಭಯ ವನ್ನು ಮಾಡಬೇಕಿದೆ. ತೋರಿಕೆಯ ಆರಾಧನೆ ಸರಿಯಲ್ಲ ನಮ್ಮ ಮನಸ್ಸಿನಲ್ಲಿನ ದೇವ ಭಯ ಅದನ್ನು ನಿರೂಪಿಸಬೇಕಿದೇ. ಅಲ್ಲಾಹನು ನಿಶೇಧಿಸಿದ ಯಾವುದನ್ನು ಕೂಡ ನಾವು ಅನುಸರಿಸಬಾರದು.
ಮುಂದಿನ ಉಪವಾಸ ವ್ರತಕ್ಕೆ ನಾವು ಜೀವಂತ ವಿರುವೆವು ಎಂಬುದು ನಮಗೆ ತಿಳಿದಿಲ್ಲ ಆದುದರಿಂದ ಮರಣವನ್ನು ನಾವು ಭಯಪಡಬೇಕಿದೆ. ಮತ್ತು ನಾವು ಎಲ್ಲರೂ ಒಂದು ದಿವಸ ಅಲ್ಲಾಹನ ಅಂತಿಮ ತೀರ್ಪುವಿಗೆ ವಿಧೇಯರಾಗಬೇಕಿದೆ. ನಮ್ಮ ಸಂಪತ್ತು ಅನ್ನು ಅಗಾಧವಾಗಿ ವ್ಯಯಸಬೇಕಿದೆ , ಬಡವರು , ಅನಾಥರಿಗೆ ದಾನ ನೀಡಬೇಕಿದೆ, ಯಾರು ವ್ಯಯಿಸುತ್ತಾನೆ ಅವನಿಗೆ ಅಲ್ಲಾಹನು ದ್ವಿಗುಣ ಸಂಪತ್ತು ನೀಡುತ್ತಾನೆ , ಅಲ್ಲಾಹನು ಅವನ ಅಪಾರ ಅನುಗ್ರಹವನ್ನು ವರ್ಷಿಸಲಿ ಎಂದು ಇಬ್ರಾಹಿಂ ಸೌಶಾದ್ ರವರು ಈದ್ ದುವಾಗೈದರು.
ಮಸ್ಜಿದ್ ಸಲ್ ಸಬೀಲ್ ಈದ್ಗಾ ನಮಾಝ್ ವ್ಯವಸ್ಥೆಯ ನಿರ್ವಣೆಯನ್ನು ಸಂಸ್ತೆಯ ಪ್ರತಿನಿಧಿಗಳಾದ ಅಬ್ದುಲ್ ರಹಿಮಾನ್ ಭಾಷಾ, ಅಬೂ ಹುರೈರಾ, ಯು.ಎನ್. ಫಿರೋಜ್, ಹನೀಫ್ ಪಾಡಿ, ಸಾಜಿದ್ ಮತ್ತಿತರ ಸ್ವಯಂ ಸೇವಕರು ಮಾಡಿದರು.
ಇನ್ನಷ್ಟು ವರದಿಗಳು
ಯುನಿವೆಫ್ ಕರ್ನಾಟಕ ಸಂಸ್ಥೆಯ ಸೀರತ್ ಅಭಿಯಾನ ಅಂಗವಾಗಿ ಶಿಕ್ಷಕರ ಮತ್ತು ವಕೀಲರ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಈದ್ ಮಿಲಾದ್: ಮುಂಬೈ, ಉಪನಗರಗಳಲ್ಲಿ ರಜೆ ಸೆ.8 ಕ್ಕೆ ಮರುಘೋಷಣೆ, ಮಹಾರಾಷ್ಟ್ರದ ಉಳಿದಡೆ ಸೆ. 5 ರಂದು ರಜೆ.
ದ.ಕ.ಕಾಂಗ್ರೆಸ್ ರಾಜಿನಾಮೆ ಪ್ರಕ್ರಿಯೆಯಿಂದ ಘಾಡ ಪರಿಣಾಮ ಆಗಿದೆ: ಆನ್ ಲೈನ್ ಸಂವಾದದಲ್ಲಿ ಸಿರಾಜ್ ಬಜ್ಪೆ.