ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಕೇಂದ್ರ ಸರಕಾರ ಉದ್ದೇಶಿತ ಎನ್. ಇ. ಪಿ ಅನುಷ್ಠಾನ ವಿರೋಧಿಸಿ ಇಂದು ಸಕ್ರಿಯ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಧ್ಯಾರ್ಥಿ ಸಂಘಟನೆಯ ಸುಮಾರು 300 ಅಧಿಕ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ವಿಧ್ಯಾರ್ಥಿ ಸಂಘಟನೆಯ 300ಕ್ಕೊ ಅಧಿಕ ವಿಧ್ಯಾರ್ಥಿಗಳ ಗುಂಪು ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಇಂದು ವಿಧಾನ ಸೌಧ ಮುತ್ತಿಗೆ ಎಂಬ ಪ್ರತಿಭಟನೆ ಕಾರ್ಯಕ್ರಮ ವನ್ನು ಹಮ್ಮಿ ಕೊಂಡಿದ್ದರು.
ವಿಧ್ಯಾರ್ಥಿ ಗುಂಪು ಇಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆ ಇದಾಗಿತ್ತು.
ಸಂಘಟನೆ ರಾಜ್ಯದಾದ್ಯಂತ ಮತ್ತು ದೇಶಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ವಿವಿಧ ರೀತಿಯಲ್ಲಿ ಈ ನೀತಿ ವಿರುದ್ಧ ವಿವಿಧ ರೀತಿಯಲ್ಲಿ ಪ್ರತಿಭಟನೆ,ಮುತ್ತಿಗೆ,ಪ್ರದರ್ಶನ,ಒತ್ತಡ ಕ್ರಮ ಇತ್ಯಾದಿ ರೂಪದಲ್ಲಿ ವಿರೋಧ ವ್ಯಕ್ತ ಪಡಿಸುತ್ತಾ ಬಂದಿದೆ. ಪ್ರತಿಭಟನೆಯ ಮುಂದುವರಿದ ಭಾಗವೆಂಬಂತೆ ಇಂದು ವಿಧಾನ ಸೌಧ ಮುತ್ತಿಗೆ ಯೋಜನೆ ಹಾಕಿತ್ತು. ಆದರೆ ಪೋಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮೈಸೂರು ಬ್ಯಾಂಕ್ ಬಳಿ ತಡೆದ ಕಾರಣ ವಿಧ್ಯಾರ್ಥಿಗಳಿಗೆ ವಿಧಾನ ಸೌಧದ ವರೆಗೆ ತಲುಪಲು ಸಾಧ್ಯವಾಗಲಿಲ್ಲ.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಿಧ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.ಇದರಿಂದಾಗಿ ಹಲವು ವಿಧ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಪ್ರತಿಪಕ್ಷ ನಾಯಕರಾದ ಶ್ರೀ ಸಿದ್ದರಾಮಯ್ಯ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವ ಕುಮಾರ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರ ತಮ್ಮ ನಿಲುವು ವ್ಯಕ್ತ ಪಡಿಸಿದ್ದಾರೆ. ಮತ್ತು ಪೊಲೀಸು ಲಾಠಿ ಚಾರ್ಜ್ ಅನ್ನು ಖಂಡಿಸಿದ್ದಾರೆ. ರಾಜ್ಯ ಸರಕಾರ ಮತ್ತು ಪೊಲೀಸು ಕ್ರಮಕ್ಕೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧದ ಅಭಿಯಾನ ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಕೂಡ ಆಗಿತ್ತು.(ಫೋಟೋ ಕೃಪೆ: ದಿ ಹಿಂದು)
ಇನ್ನಷ್ಟು ವರದಿಗಳು
ಮಹಾಸಭಾ ನಿಯೋಗದಿಂದ ಅಲ್ಪ ಸಂಖ್ಯಾತ ಆಯೋಗ ಆಯುಕ್ತರ ಭೇಟಿ, ಪ್ರತಿ ತಾಲೂಕುಗಳಲ್ಲಿ ಬ್ಯಾರಿಭವನ ನಿರ್ಮಾಣಕ್ಕೆ ಕೋರಿಕೆ.
ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ಪೀಕರ್ ಯು.ಟಿ.ಖಾದರ್ ಮುಖ್ಯಮಂತ್ರಿಗೆ ಪತ್ರ.
ವಕ್ಫ್ ಮಂ.ಸಮಿತಿಯ ‘ಖಾಸಗಿ’ ಆಸ್ತಿ ಘೋಷಿಸುವ ನಿರ್ವಾಹಕರ ಆದೇಶ ಹಿಂಪಡೆಯುವಿಕೆ ಅಸಾಧ್ಯ: ಹೈಕೋರ್ಟ್