ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾದ ಮಾನ್ಯ ಎಂ ಬಿ ಪಾಟೀಲ್ ರವರು ಇಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ ಬಿ ಪಾಟೀಲ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕಳೆದ 70 ವರ್ಷಗಳಲ್ಲಿ ಕೇಂದ್ರದಲ್ಲಿ ಐವತ್ತಾರು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು, ಕಾಂಗ್ರೆಸ್ ಸರ್ಕಾರ ಕೊಟ್ಟ ಯೋಜನೆಗಳು ಇಂದಿಗೂ ಅವಿಸ್ಮರಣೀಯ, ಕಾಂಗ್ರೆಸ್ ಜನತೆಗೆ ನೀಡಿದ ಸರ್ವ ಯೋಜನೆಗಳನ್ನು, ಮತ್ತು ಸರಕಾರಿ ಸ್ವಾಮ್ಯದ ಸ್ವತ್ತು ಗಳನ್ನು ಪಾರಂಪಾರಿಕವಾಗಿ ಉಳಿಸಿಕೊಂಡು ಬಂದಿದ್ದು, ಇವತ್ತಿನ ಕೇಂದ್ರ ಸರ್ಕಾರ ಅವೆಲ್ಲವನ್ನು ಉದ್ಯಮಿಗಳು ಕೈಗೆ ಕೊಟ್ಟು, ದೇಶವನ್ನು ಬಡವಾಗಿಸಿದೆ, ನಿಜಕ್ಕೂ ದುರಂತವೇ ಸರಿ ಎಂದು ಹೇಳಿದರು, ಬಡತನ,ನಿರುದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆಯೇರಿಕೆ, ಆಹಾರಧಾನ್ಯಗಳ ವಸ್ತುಗಳ ಬೆಲೆ ಗಗನಕ್ಕೇರಿದ್ದು, ದೇಶದ ನಾಗರಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ, ಹಾಲಿ ಬಿ. ಜೆ.ಪೀ ಸರಕಾರ ಕೇವಲ ಜನರ ಭಾವನೆಗಳನ್ನು ಕೆರಳಿಸುವಲ್ಲಿ ಮಾತ್ರ ಕಾರ್ಯಾಚರಿಸುತ್ತಿದ್ದು, ಇದು ಮುಂದೆ ಬಹಳ ಅಪಾಯಕಾರಿ ಬೆಳವಣಿಗೆ ಎಂದು ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸುತ್ತಾ ಮಾತನಾಡಿದರು.
ಸಭೆಯಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ಯು.ಟಿ ಖಾದರ್, ಮಾಜಿ ಸಚಿವ ರಮನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ವಿಧಾನಪರಿಷತ್ ಸದಸ್ಯರಾದ, ಮಂಜುನಾಥ ಭಂಡಾರಿ, ಮಾಜಿ ಶಾಸಕರುಗಳಾದ, ಜೆ ಆರ್ ಲೋಬೊ, ಮೊಯ್ದೀನ್ ಬಾವ, ವಿನಯಕುಮಾರ್ ಸೊರಕೆ,ಐವನ್ ಡಿಸೋಜಾ, ಮಿಥುನ್ ರೈ , ಲುಕ್ಮಾನ್, ಕೋಡಿಜಾಲ್ ಇಬ್ರಾಹಿಂ, ಮಹಾನಗರಪಾಲಿಕೆಯ ಸದಸ್ಯರುಗಳು, ಕಾಂಗ್ರೆಸ್ ವಿವಿಧ ಘಟಕದ ಪದಾಧಿಕಾರಿಗಳು, ಕಾಂಗ್ರೆಸ್ ನಾಯಕರುಗಳು, ಪಕ್ಷದ ಕಾರ್ಯಕರ್ತರು ,ಸಭೆಯ ಕೊನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ ಧನ್ಯವಾದ ಸಲ್ಲಿಸಿದರು.(ವರದಿ: ಸೋಷಿಯಲ್ ಫಾರೂಕ್)
ಇನ್ನಷ್ಟು ವರದಿಗಳು
ವಕ್ಫ್ ಮಂ.ಸಮಿತಿಯ ‘ಖಾಸಗಿ’ ಆಸ್ತಿ ಘೋಷಿಸುವ ನಿರ್ವಾಹಕರ ಆದೇಶ ಹಿಂಪಡೆಯುವಿಕೆ ಅಸಾಧ್ಯ: ಹೈಕೋರ್ಟ್
ಕರ್ನಾಟಕ ಸಿಎಂ ಕಚೇರಿ: ಮುಸ್ಲಿಂ ಮೀಸಲಾತಿ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ.
ಶ್ರದ್ಧಾ ಕೇಂದ್ರಗಳು ವಕ್ಫ್ ಆಸ್ತಿಯಾಗಲಿವೆ ಎಂದು ಬಿಜೆಪಿ ಆರೋಪ, ಹಾವೇರಿಯಲ್ಲಿ ಉದ್ವಿಗ್ನ ಸ್ಥಿತಿ.