July 27, 2024

Vokkuta News

kannada news portal

ಮಂಗಳೂರಿನಲ್ಲಿ ಸಿ.ಎಂ. ಬೊಮ್ಮಾಯಿ ಯಿಂದ ಕೆದುಂಬಾಡಿ ರಾಮಯ್ಯ ಗೌಡ ಪುತ್ತಳಿ ಅನಾವರಣ.

ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ ಪ್ರತಿಮೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.19ರ ಶನಿವಾರ ಲೋಕಾರ್ಪಣೆ ಮಾಡಿದರು. ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಈ ಹಿಂದೆ ಮುಂಗಡ ಪತ್ರದಲ್ಲಿ ಪ್ರಾಯೋಜನೆ ಗೊಂಡ ಕೆದುಂಬಾಡಿ ರಾಮಯ್ಯ ಗೌಡ ಅವರ ಈ ಹಿಂದಿನ ಜೀವನ ಚರಿತ್ರೆ ಮತ್ತು ಬ್ರಿಟಿಷರ ವಿರುದ್ಧದ ನಾಡು ರಕ್ಷಣೆ ಪರಿಕಲ್ಪನೆಯ ಚರಿತ್ರೆಯನ್ನು ಆಧರಿಸಿ ಮತ್ತು ದ.ಕ.ಜಿಲ್ಲೆಯ ಸುಳ್ಯದ ಅಮರ ಕೀರ್ತಿ ಸಾಹಸಿಗರ ಸ್ಮರಣೆಯ ಭಾಗವಾಗಿ ಗೌಡರ ಪುತ್ತಲಿಯನ್ನು ಮಂಗಳೂರಿನ ಅಂದಿನ ಸ್ವಾತಂತ್ರ್ಯಾ ಶೌರ್ಯ ಸ್ಥಳವಾದ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪಿಸಲಾಗಿದೆ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ಸಚಿವರಾದ ಎಸ್. ಅಂಗಾರ, ಡಾ. ಅಶ್ವತ್ಥ್ ನಾರಾಯಣ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಡಿ.ವಿ. ಸದಾನಂದ ಗೌಡ, ಜಿಲ್ಲೆಯ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಜೀವ ಮಠಂದೂರು, ಕರ್ನಾಟಕ ವಿರೋಧ ಪಕ್ಷದ ಉಪ ನಾಯಕರಾದ ಶ್ರೀ ಯು .ಟಿ. ಖಾದರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಇತರ ಪ್ರಮುಖ ಜನ ಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಇಂದು ಉಪಸ್ಥಿತರಿದ್ದರು.