ನವದೆಹಲಿ: ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಮುಸ್ಲಿಮರ ಮೇಲೆ ಭಾರತದ ಅಧಿಕಾರಿ ವರ್ಗ ನಿಂದನೀಯ ರೂಪದಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತನ್ನ ಏಷಿಯಾ ಚಾಪ್ಟರ್ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಗುಜರಾತ್ ರಾಜ್ಯದ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮಕ್ಕೆ ತೊಂದರೆ ನೀಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಕೆಲವು ಮುಸ್ಲಿಂ ಯುವಕರನ್ನು ಪೊಲೀಸರು ಕಂಬಗಳಿಗೆ ಕಟ್ಟಿ ಹಾಕಿ ಲಾಟಿಗಳಿಂದ ಥಳಿಸಿರುವ ಘಟನೆಯು ವ್ಯಾಪಕತೆ ಪಡೆದ ನಂತರ ಈ ರೀತಿಯ ಆಕ್ಷೇಪವನ್ನು ಹ್ಯೂಮನ್ ರೈಟ್ಸ್ ವಾಚ್ ವ್ಯಕ್ತಪಡಿಸಿದೆ.
ದ್ವಂದ್ವ ನಿಲುವನ್ನು ತೋರಿ ಮುಸ್ಲಿಮರನ್ನೇ ಗುರಿಪಡಿಸಿ ಕೊಂಡು ಭಾರತದ ಇಲಾಖಾ ಮತ್ತು ಸಾಂಸ್ಥಿಕ ಅಧಿಕಾರಿ ವರ್ಗದವರು ನೀಡುತ್ತಿರುವ ದೌರ್ಜನ್ಯಗಳು ತಾರತಮ್ಯ ಮತ್ತು ಭೇದತೆ ನೀತಿಯನ್ನು ಪ್ರದರ್ಶಿಸುತ್ತದೆ . ಈ ಕಾರಣದಿಂದ ಆರೋಪಿತ ವ್ಯಕ್ತಿಗೆ ಕಾನೂನಿನಲ್ಲಿ ಲಭ್ಯವಿರುವ ಪರಿಹಾರ ನಿಯಮ ಪಾಲನೆಯನ್ನು ನಿರಾಕರಿಸಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸೌತ್ ಏಷ್ಯಾ ಡೈರೆಕ್ಟರ್ ಮೀನಾಕ್ಷಿ ಗಂಗೂಲಿ ಮಾದ್ಯಮಕ್ಕೆ ಹೇಳಿದ್ದಾರೆ.
ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಪಡಿಸಿಕೊಂಡಿರುವ ಇಂತಹ ಅಸಮಂಜಸ ಆಲೋಚನೆ ಮತ್ತು ಕ್ರಿಯೆಗಳಿಂದ ಭಾರತದ ಅಧಿಕಾರಿಗಳು ವಿಮುಕ್ತರಾಗಬೇಕು ಎಂದೂ ಅವರು ಬಾಹ್ಯವಾಗಿ ಆಗ್ರಹಿಸಿದ್ದಾರೆ.
kannada news portal
ಇನ್ನಷ್ಟು ವರದಿಗಳು
ವೈದ್ಯಕೀಯ ಅನಿವಾರ್ಯತೆ, ಪಿಎಫ್ಐ ಮಾ.ಅಧ್ಯಕ್ಷ ಇ. ಅಬೂಬಕರ್ ಬಿಡುಗಡೆಗೆ ಬೀಮ್ ಆರ್ಮಿ, ಎಪಿಸಿಆರ್, ಹಲವು ಸಂಘಟನೆಗಳು ಒತ್ತಾಯ.
ಗಾಝಾ: ಮಹಿಳೆಯರಿಗೆ ‘ಬದುಕುವ ಪರಿಸ್ಥಿತಿ’ಯನ್ನೂ ನಿರಾಕರಿಸಿದ ಇಸ್ರೇಲ್:ಅಮ್ನೆಸ್ಟಿ ಸಂಘಟನೆ ವರದಿ.
ಬ್ರಿಟನ್ ಮಾಧ್ಯಮದ ಮುಸ್ಲಿಮ್ ವಿರೋಧಿ ನಿಲುವು, 40,000 ಲೇಖನ ವಿಶ್ಲೇಷಣೆ: ಸೆಂಟರ್ ಫಾರ್ ಮೀಡಿಯ ಮಾನಿಟರಿಂಗ್ ವರದಿ.