July 26, 2024

Vokkuta News

kannada news portal

ಪಿಎಫ್ಐ ನಿಷೇಧ:ಮಾನವಹಕ್ಕು ಸಂಘಟನೆ ಪಿಯುಸಿಎಲ್ ಕಳವಳ.

ಗೃಹ ಸಚಿವಾಲಯದ ಜಂಟಿ ಕಾರ್ಯಾಚರಣೆಯಾಗಿ ನಡೆಯುತ್ತಿರುವ ‘ಆಪರೇಷನ್ ಆಕ್ಟೋಪಸ್’ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯ ಮತ್ತು ಸಂಘಟನೆಯ ಸಾಂವಿಧಾನಿಕ ಹಕ್ಕುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕತ್ವದ ಮೇಲಿನ ಸಾಮೂಹಿಕ ದಾಳಿ, ಬಂಧನ ಮತ್ತು ಸಂಘಟನೆ ಹಾಗೂ ಅದರ ಅಂಗಸಂಸ್ಥೆಗಳ ಮೇಲಿನ ನಿಷೇಧವನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ತೀವ್ರವಾಗಿ ಖಂಡಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ದೇಶಾದ್ಯಂತ ಸಿಆರ್ಪಿಎಫ್, ಗೃಹ ಸಚಿವಾಲಯದ ಜಂಟಿ ಕಾರ್ಯಾಚರಣೆಯಾಗಿ ನಡೆಯುತ್ತಿರುವ ‘ಆಪರೇಷನ್ ಆಕ್ಟೋಪಸ್’ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯ ಮತ್ತು ಸಂಘಟನೆಯ ಸಾಂವಿಧಾನಿಕ ಹಕ್ಕುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪಿಯುಸಿಎಲ್ ತೀವ್ರ ಕಳವಳ ವ್ಯಕ್ತಪಡಿಸಿದೆ.


ಎಟಿಎಸ್, ಎನ್ಐಎ, ಇಡಿ, ರಾ, ರಾಜ್ಯ ಪೊಲೀಸ್ ಮತ್ತು ಇನ್ನಿತರ ಏಜೆನ್ಸಿಗಳು. ಭಾರತದಾದ್ಯಂತ ವಿವಿಧ ಸುತ್ತುಗಳಲ್ಲಿ ನೂರಾರು ಸ್ಥಳಗಳಲ್ಲಿ ಸಾಮೂಹಿಕ ದಾಳಿಗಳನ್ನು ಮತ್ತು 300 ಕ್ಕೂ ಹೆಚ್ಚು ಬಂಧನಗಳನ್ನು ಮಾಡಿದೆ.

ಬೃಹತ್ ರಾಜ್ಯಾಧಿಕಾರವನ್ನು ಪ್ರದರ್ಶಿಸುವ ಮಾಧ್ಯಮ ಪ್ರದರ್ಶನವಾಗಿ ನಡೆಸಲಾದ ಈ ದಾಳಿಗಳು, ಕಾನೂನಿನ ನಿಯಮವನ್ನು ಆಧರಿಸಿದ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ,ಇಂತಹ ಪ್ರಜಾಪ್ರಭುತ್ವ ವಿರೋಧಿ ಧಾಳಿ ಮತ್ತು ನಿಷೇಧ ಮುಸ್ಲಿಂ ಸಮುದಾಯವನ್ನು ಮತ್ತಷ್ಟು ಭಯ, ಬೆದರಿಕೆ, ಪರಕೀಯತೆ ಮತ್ತು ಮೌನಕ್ಕೆ ಒತ್ತಾಯಿಸುತ್ತದೆ ಎಂದು ಪಿಯುಸಿಎಲ್ ತನ್ನ ಕಳವಳದಲ್ಲಿ ಹೇಳಿದೆ.

ಪಿಯುಸಿಎಲ್ ಸಂಘಟನೆ ಭಾರತದಲ್ಲಿ ಒಂದು ಧೀರ್ಘ ಅವಧಿಯ ಮಾನವ ಹಕ್ಕು ಸಂರಕ್ಷಣಾ ಸಂಘಟನೆಯಾಗಿ ಕಾರ್ಯಾಚರಿಸುತ್ತಿದ್ದು, ದೇಶಾದ್ಯಂತ ತನ್ನ ಸುದೃಢ ಶಾಖೆಗಳನ್ನು ಹೊಂದಿದೆ.