November 22, 2024

Vokkuta News

kannada news portal

ಕಾನೂನು ಉಲ್ಲಂಘಿಿತ ಮುಸ್ಲಿಮರು ಎಂದು ಕ್ಷುಲ್ಲಕ ಕಾರಣಕ್ಕಾಗಿ ಅಧಿಕಾರಿ ವರ್ಗದಿಂದ ದೌರ್ಜನ್ಯ-ಹ್ಯೂಮನ್ ರೈಟ್ಸ್ ವಾಚ್ ವರದಿ

ನವದೆಹಲಿ: ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಮುಸ್ಲಿಮರ ಮೇಲೆ ಭಾರತದ ಅಧಿಕಾರಿ ವರ್ಗ ನಿಂದನೀಯ ರೂಪದಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತನ್ನ ಏಷಿಯಾ ಚಾಪ್ಟರ್ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಗುಜರಾತ್ ರಾಜ್ಯದ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮಕ್ಕೆ ತೊಂದರೆ ನೀಡಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಕೆಲವು ಮುಸ್ಲಿಂ ಯುವಕರನ್ನು ಪೊಲೀಸರು ಕಂಬಗಳಿಗೆ ಕಟ್ಟಿ ಹಾಕಿ ಲಾಟಿಗಳಿಂದ ಥಳಿಸಿರುವ ಘಟನೆಯು ವ್ಯಾಪಕತೆ ಪಡೆದ ನಂತರ ಈ ರೀತಿಯ ಆಕ್ಷೇಪವನ್ನು ಹ್ಯೂಮನ್ ರೈಟ್ಸ್ ವಾಚ್ ವ್ಯಕ್ತಪಡಿಸಿದೆ.
ದ್ವಂದ್ವ ನಿಲುವನ್ನು ತೋರಿ ಮುಸ್ಲಿಮರನ್ನೇ ಗುರಿಪಡಿಸಿ ಕೊಂಡು ಭಾರತದ ಇಲಾಖಾ ಮತ್ತು ಸಾಂಸ್ಥಿಕ ಅಧಿಕಾರಿ ವರ್ಗದವರು ನೀಡುತ್ತಿರುವ ದೌರ್ಜನ್ಯಗಳು ತಾರತಮ್ಯ ಮತ್ತು ಭೇದತೆ ನೀತಿಯನ್ನು ಪ್ರದರ್ಶಿಸುತ್ತದೆ . ಈ ಕಾರಣದಿಂದ ಆರೋಪಿತ ವ್ಯಕ್ತಿಗೆ ಕಾನೂನಿನಲ್ಲಿ ಲಭ್ಯವಿರುವ ಪರಿಹಾರ ನಿಯಮ ಪಾಲನೆಯನ್ನು ನಿರಾಕರಿಸಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸೌತ್ ಏಷ್ಯಾ ಡೈರೆಕ್ಟರ್ ಮೀನಾಕ್ಷಿ ಗಂಗೂಲಿ ಮಾದ್ಯಮಕ್ಕೆ ಹೇಳಿದ್ದಾರೆ.
ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಪಡಿಸಿಕೊಂಡಿರುವ ಇಂತಹ ಅಸಮಂಜಸ ಆಲೋಚನೆ ಮತ್ತು ಕ್ರಿಯೆಗಳಿಂದ ಭಾರತದ ಅಧಿಕಾರಿಗಳು ವಿಮುಕ್ತರಾಗಬೇಕು ಎಂದೂ ಅವರು ಬಾಹ್ಯವಾಗಿ ಆಗ್ರಹಿಸಿದ್ದಾರೆ.